AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ: ಅಷ್ಟಕ್ಕೂ ಆಗಿದ್ದೇನು?

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ: ಅಷ್ಟಕ್ಕೂ ಆಗಿದ್ದೇನು?

ಪ್ರಸನ್ನ ಗಾಂವ್ಕರ್​
| Edited By: |

Updated on:Jun 11, 2026 | 1:42 PM

Share

ಕರ್ನಾಟಕದ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ಹಂಚಿಕೆ ತಾರತಮ್ಯದ ಆರೋಪಗಳು ಕೇಳಿಬಂದಿವೆ. ಮಡಿವಾಳ, ಯಾದವ, ಹೆಳವ ಮತ್ತು ಸವಿತಾ ಸಮುದಾಯಗಳಿಗೆ ಕಡಿಮೆ ಅನುದಾನ ನೀಡಲಾಗಿದ್ದು, ಕುರುಬ ಸಮುದಾಯದ 89 ಸಂಘ ಸಂಸ್ಥೆಗಳಿಗೆ, ಟಿ. ನರಸೀಪುರ ತಾಲೂಕಿಗೆ ಹಾಗೂ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್‌ಗೆ ಭಾರಿ ಅನುದಾನ ಬಿಡುಗಡೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು, ಜೂನ್​​ 11: ಕರ್ನಾಟಕದ ಹಿಂದುಳಿದ ವರ್ಗಗಳ ಇಲಾಖೆಯಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. 155 ವಿವಿಧ ಸಂಸ್ಥೆಗಳಿಗೆ 71.85 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಸಮುದಾಯ ಭವನ, ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟ ಬಜೆಟ್​​ನ ಶೇ. 52ರಷ್ಟು ಹಣವನ್ನು ಕೆಲವೇ ಸಮುದಾಯದ ಸಂಸ್ಥೆಗಳಿಗೆ ನೀಡಲಾಗಿದೆ. 8 ಮಡಿವಾಳ‌, 2 ಯಾದವ, 01 ಹೆಳವ, ಸವಿತಾ ಸಮಾಜದ 01 ಸಂಘಗಳಿಗೆ ಅನುದಾನ ನೀಡಲಾಗಿದೆ. ಟೀ. ನರಸೀಪುರ ಒಂದೇ ತಾಲೂಕಿಗೆ 13 ಸಮುದಾಯ ಭವನಗಳು ಮಂಜೂರು ಮಾಡಲಾಗಿದ್ದು, ಗದಗದ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್​​ಗೂ 50 ಲಕ್ಷ ಕೊಟ್ಟಿದ್ದಾರೆ. ಕುರುಬ ಸಮುದಾಯದ 89 ಸಂಘ ಸಂಸ್ಥೆಗಳಿಗೆ ಅನುದಾನ ನೀಡಲಾಗಿದ್ದು, ಹಿಂದುಳಿದ ವರ್ಗಗಳಲ್ಲಿ ಬೇರೆ ಸಮುದಾಯಗಳು ಇಲ್ಲವಾ ಎಂಬ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 11, 2026 01:41 PM

Follow Us