ನಾಪತ್ತೆಯಾಗಿ 26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಹಿಂದೆ ಸರ್ಕಸ್ ತಂಡದೊಂದಿಗೆ ಹೋಗಿ ನಾಪತ್ತೆಯಾಗಿದ್ದ ಮಗ 26 ವರ್ಷಗಳ ಬಳಿಕ ಮನೆಗೆ ಮರಳಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮಗ ಸತೀಶ್ ಅಲಿಯಾಸ್ ಸಲೀಂ ಆಗಮನದಿಂದ ತಾಯಿ ಅಪಾರ ಸಂತಸಗೊಂಡಿದ್ದು, ಧರ್ಮಸ್ಥಳ, ಕಟೀಲು ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿನ ಹರಕೆಗಳನ್ನು ತೀರಿಸಲು ಸಿದ್ಧರಾಗಿದ್ದಾರೆ. ತನ್ನ ಆಸೆ ಕೊನೆಗೂ ಈಡೇರಿದ್ದಕ್ಕೆ ತಾಯಿ ಭಾವುಕರಾಗಿದ್ದಾರೆ.
ಮಂಗಳೂರು, ಜೂನ್ 11: 26 ವರ್ಷಗಳ ಹಿಂದೆ ಬಾಲಕನಾಗಿದ್ದ ವೇಳೆ ಮನೆಬಿಟ್ಟು ಹೋಗಿದ್ದವ ಪುನಃ ಮನೆಗೆ ಹಿಂದಿರುಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದದಲ್ಲಿ ನಡೆದಿದೆ. ಸತೀಶ್ ಎಂಬಾತ ಈಗ ಸಲೀಂ ಆಗಿ ಹಿಂದಿರುಗಿದ್ದು, ಸುದೀರ್ಘ ವರ್ಷಗಳ ಬಳಿಕ ಮಗನನ್ನು ಕಂಡು ತಾಯಿ ಭಾವುಕರಾಗಿದ್ದಾರೆ. 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಓಡಿಹೋಗಿದ್ದ ಇವರು, ಇಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಮಗನನ್ನು ನೋಡುವ ಮುನ್ನವೇ ಸಾಯಬಾರದು ಎಂದು ಬಯಸಿದ್ದ ತಾಯಿಗೆ, ಮಗನ ಆಗಮನದಿಂದ ಅತೀವ ಆನಂದವಾಗಿದೆ. ಮಗನಿಗಾಗಿ ಧರ್ಮಸ್ಥಳ, ಕಟೀಲು ಸೇರಿದಂತೆ ಹಲವು ದೇವಸ್ಥಾನಗಳಿಗೆ ಹರಕೆ ಹೊತ್ತಿದ್ದ ತಾಯಿ, ಈಗ ಮಗ ಮರಳಿರುವ ಹಿನ್ನೆಲೆಯಲ್ಲಿ ಹರಕೆ ತೀರಿಸಲು ಸಿದ್ಧವಾಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
