AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್

High Interest FCNR-B Rates: ಆರ್‌ಬಿಐ ನಿಯಮ ಬದಲಾವಣೆಯ ನಂತರ, ಭಾರತೀಯ ಬ್ಯಾಂಕ್‌ಗಳು ಅನಿವಾಸಿ ಭಾರತೀಯರಿಗೆ (NRI) FCNR-B ಠೇವಣಿಗಳ ಮೇಲೆ ಬಡ್ಡಿ ದರಗಳನ್ನು ಗಣನೀಯವಾಗಿ ಹೆಚ್ಚಿಸಿವೆ, ಇದು 7.1% ವರೆಗೆ ತಲುಪಿದೆ. ಈ ಠೇವಣಿಗಳು ವಿದೇಶಿ ಕರೆನ್ಸಿಯಲ್ಲಿ ಹಣವನ್ನು ಇಡಲು, ತೆರಿಗೆ-ಮುಕ್ತ ಬಡ್ಡಿ ಗಳಿಸಲು ಮತ್ತು ಸುಲಭವಾಗಿ ಹಣವನ್ನು ವಾಪಸ್ ವರ್ಗಾಯಿಸಲು ಅವಕಾಶ ನೀಡುತ್ತವೆ. ಇದು NRIs ಗೆ ಹೆಚ್ಚಿನ ಆದಾಯದೊಂದಿಗೆ, ದೇಶದ ವಿದೇಶಿ ವಿನಿಮಯ ಸಂಪತ್ತಿಗೆ ಸಹ ಸಹಕಾರಿಯಾಗಿದೆ.

ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್
ಡಾಲರ್ ಕರೆನ್ಸಿImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2026 | 5:22 PM

Share

ನವದೆಹಲಿ, ಜೂನ್ 11: ಅನಿವಾಸಿ ಭಾರತೀಯರಿಂದ (NRI) ಅವರ ದೇಶಗಳ ಕರೆನ್ಸಿಯನ್ನು ಆಕರ್ಷಿಸುವ ಸಲುವಾಗಿ ಆರ್​ಬಿಐ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಿದ ಬೆನ್ನಲ್ಲೇ ಭಾರತದ ಹಲವು ಬ್ಯಾಂಕುಗಳು ಎನ್​ಆರ್​ಐ ಠೇವಣಿಗಳ (FCNR-B) ದರಗಳನ್ನು ಗಣನೀಯವಾಗಿ ಹೆಚ್ಚಿಸತೊಡಗಿವೆ. ಸರ್ಕಾರಿ ಸ್ವಾಮ್ಯದ ಎಸ್​ಬಿಐನಿಂದ ಹಿಡಿದು ಖಾಸಗಿಯ ಯೆಸ್ ಬ್ಯಾಂಕ್​ವರೆಗೆ ಹಲವು ಬ್ಯಾಂಕುಗಳು ವಿದೇಶೀ ಕರೆನ್ಸಿಗಳ ಠೇವಣಿ ದರಗಳನ್ನು ಏರಿಸಿವೆ. ಕೆಲ ಠೇವಣಿಗಳಿಗೆ ಶೇ. 7.1ರವರೆಗೂ ಬಡ್ಡಿ ಆಫರ್ ಮಾಡಲಾಗಿದೆ.

ಯೆಸ್ ಬ್ಯಾಂಕ್ (Yes Bank) ತನ್ನ ವಿದೇಶಿ ಕರೆನ್ಸಿ ಅನಿವಾಸಿ (FCNR-B) ಠೇವಣಿಗಳ ಮೇಲಿನ ಬಡ್ಡಿದರವನ್ನು ಗಣನೀಯವಾಗಿ ಹೆಚ್ಚಿಸಿದೆ. ಗರಿಷ್ಠ ಶೇ. 6.6 ರವರೆಗೆ ಬಡ್ಡಿದರವನ್ನು ಆಫರ್ ಮಾಡುತ್ತಿದೆ. ಅದರ ಹೊಸ ದರಗಳು ಈ ಕೆಳಗಿನಂತಿವೆ:

  • 1-2 ವರ್ಷದ ಅವಧಿ: ಶೇ. 6.10 ಬಡ್ಡಿದರ.
  • 2-3 ವರ್ಷದ ಅವಧಿ: ಶೇ. 6.35 ಬಡ್ಡಿದರ.
  • 3-5 ವರ್ಷದ ಅವಧಿ: ಶೇ. 6.60 ಬಡ್ಡಿದರ.

ಇದನ್ನೂ ಓದಿ: ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷದ ಡೆಪಾಸಿಟ್​ಗಳಿಗೆ ಬಡ್ಡಿದರವನ್ನು ಶೇ. 7.1ಕ್ಕೆ ಏರಿಸಿದೆ. ಐದು ವರ್ಷದ ಡೆಪಾಸಿಟ್​ಗೆ ಬಡ್ಡಿದರ ಶೇ. 7 ನಿಗದಿ ಮಾಡಿದೆ.

ಇನ್ನು, ಎಚ್​​ಡಿಎಫ್​ಸಿ ಬ್ಯಾಂಕ್ ತನ್ನ ಎನ್​ಆರ್​ಐ ಗ್ರಾಹಕರ ಡೆಪಾಸಿಟ್​ಗಳಿಗೆ ಶೇ. 6 ಬಡ್ಡಿ ಆಫರ್ ಮಾಡುತ್ತಿದೆ. ಇತರ ಹಲವು ಬ್ಯಾಂಕುಗಳು ಕೂಡ ತಮ್ಮ ಠೇವಣಿ ದರಗಳನ್ನು ಹೆಚ್ಚಿಸಿವೆ.

ಆರ್​ಬಿಐನ ಈ ನಿರ್ಧಾರಕ್ಕೆ ಕಾರಣವೇನು?

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ಅನಿವಾಸಿ ಭಾರತೀಯ ಹೂಡಿಕೆದಾರರನ್ನು ಆಕರ್ಷಿಸಲು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಎಫ್‌ಸಿಎನ್‌ಆರ್ (FCNR) ಠೇವಣಿಗಳ ಮೇಲಿನ ಹೆಡ್ಜಿಂಗ್ ವೆಚ್ಚವನ್ನು (ವಿದೇಶಿ ಕರೆನ್ಸಿ ವಿನಿಮಯ ದರ ಏರಿಳಿತದ ಅಪಾಯದ ವೆಚ್ಚ) ಆರ್​ಬಿಐ ಭರಿಸುವ ನಿರ್ಧಾರವೂ ಸೇರಿದೆ. ಇದರಿಂದಾಗಿ ಬ್ಯಾಂಕುಗಳಿಗೆ ಆಗುವ ವೆಚ್ಚ ಕಡಿಮೆಯಾಗಿದ್ದು, ಆ ಲಾಭವನ್ನು ಬ್ಯಾಂಕುಗಳು ಹೆಚ್ಚಿನ ಬಡ್ಡಿಯ ರೂಪದಲ್ಲಿ ಎನ್‌ಆರ್‌ಐ ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಇದನ್ನೂ ಓದಿ: ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ

FCNR(B) ಠೇವಣಿಗಳ ಪ್ರಮುಖ ಅನುಕೂಲಗಳು

  • ಈ ಖಾತೆಗಳಲ್ಲಿ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸದೆ ಯುಎಸ್ ಡಾಲರ್ (USD), ಬ್ರಿಟಿಷ್ ಪೌಂಡ್ (GBP) ಅಥವಾ ಯೂರೋ (EUR) ನಂತಹ ವಿದೇಶಿ ಕರೆನ್ಸಿಗಳಲ್ಲೇ ಇಡಬಹುದು. ಹೀಗಾಗಿ ರೂಪಾಯಿ ಮೌಲ್ಯ ಕುಸಿತದ ಭೀತಿ ಇರುವುದಿಲ್ಲ.
  • ಈ ಠೇವಣಿಗಳ ಮೇಲೆ ಗಳಿಸುವ ಬಡ್ಡಿಯು ಭಾರತದಲ್ಲಿ ಸಂಪೂರ್ಣವಾಗಿ ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ (Tax-Free).
  • ಗಳಿಸಿದ ಅಸಲು ಮತ್ತು ಬಡ್ಡಿಯನ್ನು ಯಾವುದೇ ಮಿತಿ ಇಲ್ಲದೆ, ಸುಲಭವಾಗಿ ತಮ್ಮ ದೇಶಕ್ಕೆ ವರ್ಗಾಯಿಸಿಕೊಳ್ಳಬಹುದು (Repatriable).

ಆರ್​ಬಿಐನ ಈ ಕ್ರಮದಿಂದ ದೇಶದ ಫಾರೆಕ್ಸ್ ಮಾರುಕಟ್ಟೆಗೂ ಅನುಕೂಲವಾಗುತ್ತದೆ. ಬಹಳ ಮುಖ್ಯವಾದ ವಿದೇಶಿ ಕರೆನ್ಸಿ ಸಂಪತ್ತು ಸಂಗ್ರಹ ಹೆಚ್ಚುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ