ಭಾರತದ ಮುಖ್ಯ ಕೋಚ್ ಬಗ್ಗೆ ದೊಡ್ಡ ಘೋಷಣೆ: ಹೊಸ ಕೋಚ್​ಗೆ ಬಿಸಿಸಿಐ ಕಠಿಣ ಷರತ್ತು

|

Updated on: May 14, 2024 | 7:11 AM

Team India New Head Coach: ಬಿಸಿಸಿಐ ತನ್ನ ಜಾಹೀರಾತಿನಲ್ಲಿ ಕೋಚ್‌ನ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ವಿವರಿಸಿದೆ. ಇದರ ಪ್ರಕಾರ, ಹೊಸ ಕೋಚ್ ಮೂರುವರೆ ವರ್ಷಗಳ ಅವಧಿಯನ್ನು ಪಡೆಯುತ್ತಾರೆ. ಇದು ಜುಲೈ 1, 2024 ರಿಂದ ಡಿಸೆಂಬರ್ 31, 2027 ರವರೆಗೆ ಇರುತ್ತದೆ.

ಭಾರತದ ಮುಖ್ಯ ಕೋಚ್ ಬಗ್ಗೆ ದೊಡ್ಡ ಘೋಷಣೆ: ಹೊಸ ಕೋಚ್​ಗೆ ಬಿಸಿಸಿಐ ಕಠಿಣ ಷರತ್ತು
Rahul Dravid
Follow us on

ಕೆಲವು ದಿನಗಳ ಹಿಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಘೋಷಿಸಿದ ನಂತರ, ಮಂಡಳಿಯು ಇದೀಗ ಮುಖ್ಯ ಕೋಚ್‌ಗಾಗಿ ಜಾಹೀರಾತನ್ನು ಬಿಡುಗಡೆ ಮಾಡಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮಂಡಳಿಯು ಮೇ 13 ರಂದು ಸೋಮವಾರ ಅಧಿಕೃತ ಘೋಷಣೆ ಮಾಡಿತು ಮತ್ತು ಇದಕ್ಕಾಗಿ ಮೇ 27 ಗೆ ಗಡುವನ್ನು ನಿಗದಿಪಡಿಸಿದೆ. ಅಂದರೆ ಕೋಚ್ ಆಗಲು ಬಯಸುವವರು ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ದ್ರಾವಿಡ್ ಮತ್ತೊಮ್ಮೆ ಕೋಚ್ ಆಗಲು ಬಯಸಿದರೆ ಅವರೂ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ.

ಸೇವಾವಧಿ ಮತ್ತು ಸಂಬಳ ಹೇಗಿರುತ್ತದೆ?

ಬಿಸಿಸಿಐ ತನ್ನ ಜಾಹೀರಾತಿನಲ್ಲಿ ಕೋಚ್‌ನ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ವಿವರಿಸಿದೆ. ಇದರ ಪ್ರಕಾರ, ಹೊಸ ಕೋಚ್ ಮೂರುವರೆ ವರ್ಷಗಳ ಅವಧಿಯನ್ನು ಪಡೆಯುತ್ತಾರೆ. ಇದು ಜುಲೈ 1, 2024 ರಿಂದ ಡಿಸೆಂಬರ್ 31, 2027 ರವರೆಗೆ ಇರುತ್ತದೆ. ಅಂದರೆ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ ಅಧಿಕಾರಾವಧಿ ಕೊನೆಗೊಳ್ಳಲಿದೆ. ವೇತನಕ್ಕೆ ಸಂಬಂಧಿಸಿದಂತೆ, ಈ ಬಗ್ಗೆ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಮತ್ತು ಅನುಭವದ ಆಧಾರದ ಮೇಲೆ ವೇತನವನ್ನು ನಿರ್ಧರಿಸಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಲಕ್ನೋ ತೊರೆಯುತ್ತಾರಾ ಕೆಎಲ್ ರಾಹುಲ್? ವಿವಾದದ ಬಗ್ಗೆ ಮೌನ ಮುರಿದ ಕೋಚ್

ಬಿಸಿಸಿಐಯಿಂದ ಕಠಿಣ ಷರತ್ತು

ವಿಶ್ವದ ಅತ್ಯಂತ ಶಕ್ತಿಶಾಲಿ ತಂಡಗಳಲ್ಲಿ ಒಂದಾಗಿರುವ ಭಾರತ ಕ್ರಿಕೆಟ್ ತಂಡದ ಕೋಚ್​ಗೆ ಭಾರಿ ಜವಾಬ್ದಾರಿ ಮತ್ತು ಒತ್ತಡ ಇರಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಸರಿಯಾದ ಕೋಚ್ ನೇಮಕಕ್ಕೆ ಮಂಡಳಿ ಹಲವು ಷರತ್ತುಗಳನ್ನು ಹಾಕಿದೆ. ಇದರ ಪ್ರಕಾರ,

  • ಅಭ್ಯರ್ಥಿಯು ಕನಿಷ್ಠ 30 ಟೆಸ್ಟ್ ಪಂದ್ಯಗಳನ್ನು ಅಥವಾ 50 ಏಕದಿನ ಪಂದ್ಯಗಳನ್ನು ಆಡಿರಬೇಕು.
  • ಅಥವಾ ಕನಿಷ್ಠ 2 ವರ್ಷಗಳ ಕಾಲ ಪೂರ್ಣ ಸದಸ್ಯರ ಟೆಸ್ಟ್ ಆಡುವ ದೇಶದ ಮುಖ್ಯ ಕೋಚ್ ಆಗಿರಬೇಕು.
  • ಅಥವಾ 3 ವರ್ಷಗಳ ಕಾಲ ಯಾವುದೇ ಅಸೋಸಿಯೇಟ್ ಸದಸ್ಯ ತಂಡ/ಯಾವುದೇ ಐಪಿಎಲ್ ತಂಡ, ಪ್ರಥಮ ದರ್ಜೆ ತಂಡ, ಯಾವುದೇ ದೇಶದ A ತಂಡದ ತರಬೇತುದಾರರಾಗಿರಬೇಕು. ಅಥವಾ ಬಿಸಿಸಿಐನ ಲೆವೆಲ್-3 ಕೋಚಿಂಗ್ ಪ್ರಮಾಣಪತ್ರವನ್ನು ಹೊಂದಿರಬೇಕು.
  • 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?

ಕೋಚ್ ಆಯ್ಕೆಗಾಗಿ, ಬಿಸಿಸಿಐಯ ಕ್ರಿಕೆಟ್ ಸಲಹಾ ಸಮಿತಿ ಅಂದರೆ CAC ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನ ಮಾಡುತ್ತದೆ ಮತ್ತು ನಂತರ ಮಂಡಳಿಗೆ ಅದರ ಶಿಫಾರಸನ್ನು ಕಳುಹಿಸುತ್ತದೆ.

ಆರ್​ಸಿಬಿಗೆ ಬಿಗ್ ಶಾಕ್; ತಂಡ ತೊರೆದ ವಿಲ್ ಜಾಕ್ಸ್, ರೀಸ್ ಟೋಪ್ಲಿ..!

ರಾಹುಲ್ ದ್ರಾವಿಡ್

T20 ವಿಶ್ವಕಪ್ 2021 ರ ನಂತರ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಭಾರತದ ಕೋಚ್ ಆಗಿ ನೇಮಿಸಲಾಯಿತು. ಅವರು 2 ವರ್ಷಗಳ ಅಧಿಕಾರಾವಧಿಯನ್ನು ಪಡೆದರು. ಏಕದಿನ ವಿಶ್ವಕಪ್ 2023 ರ ನಂತರ ಇವರ ಅವಧಿ ಕೊನೆಗೊಂಡಿತು, ಆದರೆ ಟೀಮ್ ಇಂಡಿಯಾದ ಪ್ರದರ್ಶನವನ್ನು ಪರಿಗಣಿಸಿ, ಮಂಡಳಿಯು ಅವರಿಗೆ ವಿಸ್ತರಣೆಯನ್ನು ನೀಡಲು ನಿರ್ಧರಿಸಿತು. ಹೀಗಾಗಿ ಟಿ20 ವಿಶ್ವಕಪ್ 2024 ರವರೆಗೆ ಅವರನ್ನು ಇರಿಸಿದೆ. ಈಗ ಈ ಅವಧಿಯ ನಂತರ, ದ್ರಾವಿಡ್ ಕೋಚ್ ಆಗಿ ಮುಂದುವರಿಯಲು ಬಯಸುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ಕಣ್ಣಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ