BCCI: ಆಯ್ಕೆ ಸಮಿತಿಯಲ್ಲಿ ಬದಲಾವಣೆಗೆ ಮುಂದಾದ ಬಿಸಿಸಿಐ; ಶ್ರೀಧರನ್ ಶರತ್​ಗೆ ಆಯ್ಕೆ ಸಮಿತಿಯ ಅಧ್ಯಕ್ಷ ಪಟ್ಟ

| Updated By: ಪೃಥ್ವಿಶಂಕರ

Updated on: Aug 09, 2021 | 4:39 PM

BCCI: ತಮಿಳುನಾಡಿನ ಮಾಜಿ ನಾಯಕ ಮತ್ತು ದೀರ್ಘಾವಧಿಯ ದೇಶೀಯ ಕ್ರಿಕೆಟ್ ಆಟಗಾರ ಶ್ರೀಧರನ್ ಶರತ್ ಕಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಲಿದ್ದಾರೆ

BCCI: ಆಯ್ಕೆ ಸಮಿತಿಯಲ್ಲಿ ಬದಲಾವಣೆಗೆ ಮುಂದಾದ ಬಿಸಿಸಿಐ; ಶ್ರೀಧರನ್ ಶರತ್​ಗೆ ಆಯ್ಕೆ ಸಮಿತಿಯ ಅಧ್ಯಕ್ಷ ಪಟ್ಟ
ಸೌರವ್ ಗಂಗೂಲಿ
Follow us on

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಯ್ಕೆ ಸಮಿತಿಯಲ್ಲಿ ಬದಲಾವಣೆಗಳನ್ನು ಮಾಡಲಿದೆ. ಕಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಈ ಬದಲಾವಣೆ ಮಾಡಲಾಗುತ್ತಿದೆ. ಈ ಸಮಿತಿಯು ಮುಂದಿನ ವರ್ಷದ 19 ವರ್ಷದೊಳಗಿನವರ ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡಬೇಕಿದೆ. ತಮಿಳುನಾಡಿನ ಮಾಜಿ ನಾಯಕ ಮತ್ತು ದೀರ್ಘಾವಧಿಯ ದೇಶೀಯ ಕ್ರಿಕೆಟ್ ಆಟಗಾರ ಶ್ರೀಧರನ್ ಶರತ್ ಕಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಲಿದ್ದಾರೆ. ಪ್ರಸ್ತುತ ಮುಖ್ಯಸ್ಥರಾಗಿದ್ದ ಆಶಿಶ್ ಕಪೂರ್ ಬದಲಿಗೆ ಶ್ರೀಧರನ್ ನೇಮಕಗೊಳ್ಳಲಿದ್ದಾರೆ. ಆಶಿಶ್ ಕಪೂರ್ ಅವರ ಅಧಿಕಾರಾವಧಿ ಈ ವರ್ಷ ಕೊನೆಗೊಂಡಿದೆ.

ಬಿಸಿಸಿಐನಲ್ಲಿ ಒಪ್ಪಿಕೊಂಡಿರುವ ಕೆಲವು ಹೆಸರುಗಳಲ್ಲಿ ಪಂಜಾಬ್‌ನ ಮಾಜಿ ಬ್ಯಾಟಿಂಗ್ ಆಲ್‌ರೌಂಡರ್ ಕೃಷ್ಣ ಮೋಹನ್ ಸೇರಿದ್ದಾರೆ. ಅವರು 1987 ಮತ್ತು 1995 ರ ನಡುವೆ 45 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಮೋಹನ್ ಉತ್ತರ ವಲಯದ ಅಭ್ಯರ್ಥಿ. ಮಧ್ಯಪ್ರದೇಶದ ವೇಗದ ಬೌಲಿಂಗ್ ಆಲ್ ರೌಂಡರ್ ಹರ್ವಿಂದರ್ ಸಿಂಗ್ ಸೋಧಿ ಕೇಂದ್ರ ವಲಯದ ಪ್ರಮುಖ ಸ್ಪರ್ಧಿ. ಅವರು 76 ಪ್ರಥಮ ದರ್ಜೆ ಪಂದ್ಯಗಳಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದರು ಮತ್ತು 174 ವಿಕೆಟ್ ಪಡೆದರು. ಅವರು ಬಿಸಿಸಿಐನ ಮ್ಯಾಚ್ ರೆಫರಿಯೂ ಆಗಿದ್ದಾರೆ.

ಈ ದೈತ್ಯರು ಕೂಡ ರೇಸ್​ನಲ್ಲಿದ್ದಾರೆ
ಪೂರ್ವ ವಲಯದ ಬಂಗಾಳದ ವೇಗಿ ರಣದೇವ್ ಬೋಸ್ ಆಯ್ಕೆಗಾರನಾಗುವ ಸ್ಪರ್ಧೆಯಲ್ಲಿದ್ದಾರೆ. ಬೋಸ್ 91 ಪ್ರಥಮ ದರ್ಜೆ ಪಂದ್ಯಗಳಲ್ಲಿ 317 ವಿಕೆಟ್ ಪಡೆದಿದ್ದಾರೆ. ಆದರೆ ಎಡಗೈ ಬ್ಯಾಟ್ಸ್‌ಮನ್ ಶರತ್ ಅವರು ಆಶಿಶ್ ಕಪೂರ್ ಬದಲಿಗೆ ಅಧ್ಯಕ್ಷರಾಗಲಿದ್ದಾರೆ. ಶರತ್ ಕೂಡ ಅಸ್ಸಾಂ ಪರ ಆಡಿದ್ದಾರೆ. ಅವರು ತಮಿಳುನಾಡು ಪರ 100 ರಣಜಿ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗರಾಗಿದ್ದರು. ಅವರ 15 ವರ್ಷಗಳ ವೃತ್ತಿಜೀವನದಲ್ಲಿ, 139 ಪ್ರಥಮ ದರ್ಜೆ ಪಂದ್ಯಗಳಲ್ಲಿ 27 ಶತಕಗಳ ನೆರವಿನಿಂದ 8700 ರನ್ ಗಳಿಸಿದರು. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರ ಯುಗದಲ್ಲಿ ಆಡಿದ್ದರಿಂದ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಅವಕಾಶ ಸಿಗಲಿಲ್ಲ.

ಇದನ್ನೂ ಓದಿ:BCCI: ಯುವ ಕ್ರಿಕೆಟಿಗರತ್ತ ಬಿಸಿಸಿಐ ಚಿತ್ತ: ಶೀಘ್ರದಲ್ಲೇ ಅಂಡರ್-25 ಟೂರ್ನಮೆಂಟ್