ಪಾಕ್ ಮಣಿಸಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ! ಸರ್ಕಾರದಿಂದ ಸಿಗುತ್ತಿಲ್ಲ ನೆರವು
Naresh Tumda: ಇದು 2018 ರ ಅಂಧರ ಕ್ರಿಕೆಟ್ ವಿಶ್ವಕಪ್‌ನ ಕಥೆ. ಈ ಸಮಯದಲ್ಲಿ ಭಾರತ ತಂಡದಲ್ಲಿ ನರೇಶ್ ತುಮ್ದಾ ಪ್ರಮುಖ ಆಟಗಾರರಾಗಿದ್ದರು. ಗುಜರಾತ್ ನವ್ಸರಿಯ ನರೇಶ್ ತುಮ್ದಾ ವಿಶ್ವಕಪ್ ವಿಜೇತ ತಂಡದ ಆಟಗಾರ. ಶಾರ್ಜಾ, ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಅವರು ಪಾಕಿಸ್ತಾನದ 308 ರನ್ ಗುರಿಯನ್ನು ಬೆನ್ನಟ್ಟಿದರು
ಟೋಕಿಯೊ ಒಲಿಂಪಿಕ್ ಗೇಮ್ಸ್ 2020 ಇತ್ತೀಚೆಗೆ ಮುಕ್ತಾಯಗೊಂಡಿದೆ. ಇದರಲ್ಲಿ ಭಾರತ 7 ಪದಕಗಳನ್ನು ಗೆದ್ದಿದೆ. ಸರ್ಕಾರ, ವಿವಿಧ ಸಂಸ್ಥೆಗಳು ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಅಕ್ಷರಶಃ ಹಣ ಸುರಿಯುತ್ತಿವೆ. ಈ ಎಲ್ಲ ಆಟಗಾರರು ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದರಿಂದ ಅಭಿಮಾನದ ಮಳೆಗರೆದಿದ್ದಾರೆ. ಆದರೆ ನಮ್ಮ ದೇಶದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ ಕೆಲವು ಆಟಗಾರರಿದ್ದಾರೆ. ಆದರೆ ಅವರನ್ನು ಸರ್ಕಾರ ಮತ್ತು ಸಮಾಜವು ಮರೆತಿದೆ. ಈಗ ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ತಮ್ಮ ಜೀವನ ನಿರ್ವಾಹಣೆಗಾಗಿ ಕಷ್ಟಪಟ್ಟು ದುಡಿಯುತ್ತಿದ್ದಾರೆ ಮತ್ತು ಬಡತನದ ಜೀವನವನ್ನು ನಡೆಸುತ್ತಿದ್ದಾರೆ. ಅಂತಹವರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರನೊಬ್ಬ ಪ್ರಸ್ತುತ ಜೀವನೋಪಾಯಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ.
ಇದು 2018 ರ ಅಂಧರ ಕ್ರಿಕೆಟ್ ವಿಶ್ವಕಪ್‌ನ ಕಥೆ. ಈ ಸಮಯದಲ್ಲಿ ಭಾರತ ತಂಡದಲ್ಲಿ ನರೇಶ್ ತುಮ್ದಾ ಪ್ರಮುಖ ಆಟಗಾರರಾಗಿದ್ದರು. ಗುಜರಾತ್ ನವ್ಸರಿಯ ನರೇಶ್ ತುಮ್ದಾ ವಿಶ್ವಕಪ್ ವಿಜೇತ ತಂಡದ ಆಟಗಾರ. ಶಾರ್ಜಾ, ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಅವರು ಪಾಕಿಸ್ತಾನದ 308 ರನ್ ಗುರಿಯನ್ನು ಬೆನ್ನಟ್ಟಿದರು ಮತ್ತು ಭಾರತ ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದರು.
ಗುಜರಾತ್ ಸಿಎಂ ಅವರಿಂದ ಸಹಾಯ ಸಿಕ್ಕಿಲ್ಲ ರಾಜ ತುಮ್ದಾ ಪ್ರಸ್ತುತ ಕೂಲಿ ಕೆಲಸ ಮಾಡುತ್ತಿದ್ದು ತನ್ನನ್ನು ಮತ್ತು ತನ್ನ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಭಾರತವು ಅಂಧರ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ ನರೇಶ್, ತನ್ನ ಹೊಟ್ಟೆ ತುಂಬಿಸಿಕೊಳ್ಳಲು ನವಸರಿಯಲ್ಲಿ ದಿನಕ್ಕೆ 250 ರೂ. ಸಿಗುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾನು ದಿನಕ್ಕೆ 250 ರೂ. ದುಡಿಯುತ್ತಿದ್ದೇನೆ. ನನ್ನ ಕುಟುಂಬದ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ನಾನು ಸಹಾಯಕ್ಕಾಗಿ ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯ ಬಳಿ ಹೋಗಿದ್ದೇನೆ. ನಾನು ಸರ್ಕಾರಿ ಕೆಲಸ ಪಡೆಯಬಹುದೇ? ಅಂತಹ ವಿನಂತಿಯನ್ನು ಮಾಡಿದೆ. ಆದರೆ ಇಲ್ಲಿಯವರೆಗೆ ನನಗೆ ಯಾವುದೇ ಸಕಾರಾತ್ಮಕ ಉತ್ತರ ಸಿಕ್ಕಿಲ್ಲ ಎಂದರು.
Gujarat: Naresh Tumda, part of team that helped India win 2018 Blind Cricket World Cup, now works as a labourer in Navsari to earn livelihood
“I earn Rs 250 a day. Requested CM thrice but didn’t get reply. I urge govt to give me job so that I can take care of my family,” he said pic.twitter.com/NK4DFO6YYC
— ANI (@ANI) August 8, 2021
Published On - 3:42 pm, Mon, 9 August 21