AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷ್ ಹೈ ಕಮಿಷನರ್​ ಅಲೆಕ್ಸ್ ಎಲ್ಲಿಸ್​ಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್: ವಿಡಿಯೋ ವೈರಲ್

ಕ್ರಿಕೆಟ್​ ವಾಲ್​ ಎಂದೆ ಖ್ಯಾತಿಯಾದ ರಾಹುಲ್​ ದ್ರಾವಿಡ್​ರನ್ನು ಭೇಟಿ ಮಾಡಿರುವ ಬ್ರಿಟಿಷ್​ ರಾಯಭಾರಿ ರಾಹುಲ್​ರಿಂದ ಕನ್ನಡ ಕಲಿಯಲು ಪ್ರಯತ್ನ ಪಟ್ಟಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

ಬ್ರಿಟಿಷ್ ಹೈ ಕಮಿಷನರ್​ ಅಲೆಕ್ಸ್ ಎಲ್ಲಿಸ್​ಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್: ವಿಡಿಯೋ ವೈರಲ್
Rahul Dravid and Alex Ellis
TV9 Web
| Edited By: |

Updated on: Aug 09, 2021 | 11:10 AM

Share

ಇತ್ತೀಚೆಗೆ ಭಾರತದ ಬ್ರಿಟಿಷ್​ ರಾಯಭಾರಿ ಅಲೆಕ್ಸ್​​ ಎಲ್ಲಿಸ್ ಅವರು​ ಬೆಂಗಳೂರಿಗೆ ಬಂದು ಮೈಸೂರು ಮಸಾಲೆ ದೋಸೆ ಸಖತ್ತಾಗಿದೆ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದರು. ಈ ವಿಷಯ ಭರ್ಜರಿ ವೈರಲ್ ಆಗಿತ್ತು. ಸದ್ಯ ಮತ್ತೆ ಬ್ರಿಟಿಷ್​ ರಾಯಭಾರಿ ಅಲೆಕ್ಸ್​​ ಎಲ್ಲಿಸ್​ ಸುದ್ದಿಯಲ್ಲಿದ್ದು, ಕ್ರಿಕೆಟ್​ ದಂತಹಂಥೆ ರಾಹುಲ್​ ದ್ರಾವಿಡ್​ರಿಂದ ಕನ್ನಡ ಪಾಠ ಕಲಿತಿದ್ದಾರೆ.

ಸಧ್ಯಕ್ಕೆ ದಕ್ಷಿಣ ಭಾರತದ ಪ್ರವಾಸದಲ್ಲಿರುವ ಅವರು, ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ಪ್ರತಿಯೊಬ್ಬ ರಾಜತಾಂತ್ರಿಕ ಅಧಿಕಾರಿಗಳು ದೇಶದ ಪ್ರವಾಸ ಮಾಡುವುದು ಸಾಮಾನ್ಯ. ಆದರೆ ಎಲ್ಲಿಸ್ ಮಾತ್ರ ಬೇರೆಯವರಂತೆ ಕೇವಲ ಪ್ರವಾಸ ಮಾಡದೆ, ಕರ್ನಾಟಕದ  ಸಂಸ್ಕೃತಿ, ಆಹಾರ, ಭಾಷೆ ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕ್ರಿಕೆಟ್​ ವಾಲ್​ ಎಂದೆ ಖ್ಯಾತಿಯಾದ ರಾಹುಲ್​ ದ್ರಾವಿಡ್​ರನ್ನು ಭೇಟಿ ಮಾಡಿರುವ ಬ್ರಿಟಿಷ್​ ರಾಯಭಾರಿ ರಾಹುಲ್​ರಿಂದ ಕನ್ನಡ ಕಲಿಯಲು ಪ್ರಯತ್ನ ಪಟ್ಟಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಅವರು ಟ್ವಿಟ್ಟರ್​ನಲ್ಲಿ, ಇಂದು ನಾವು ಬೆಂಗಳೂರಿನಲ್ಲಿ ದಕ್ಷಿಣದಲ್ಲಿದ್ದೇವೆ. ರಾಹುಲ್ ದ್ರಾವಿಡ್​ಗಿಂತ ಬೇರೆ ಉತ್ತಮ ಕೋಚ್ ಬೇಕಾ. ಅವರು ನನಗೆ ಕನ್ನಡದಲ್ಲಿ ಹಲವಾರು ಪದಗಳನ್ನು ಕಲಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, ರಾಹುಲ್ ದ್ರಾವಿಡ್ ಎಲ್ಲೆಸ್ ಅವರಿಗೆ “ಬೇಗ ಓಡು” ಅಂದರೆ ಕನ್ನಡದಲ್ಲಿ ವೇಗವಾಗಿ ಓಡಿ ಎಂಬುದನ್ನ ಕಲಿಸಿದ್ದಾರೆ. ಇದಕ್ಕೆ ಅವರು ಎಲ್ಲಿಸ್‌, ‘ಬೇಗ ಓಡಿ’ ಒಂದು ರನ್‌ ಎಂದು ನಗುವಿನ ಚಟಾಕಿ ಹಾರಿಸಿದರು.

ಎಲ್ಲಿಸ್ ಅವರು ಕರ್ನಾಟಕದ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಹ  ಭೇಟಿ ಮಾಡಿ  ಕರ್ನಾಟಕದ ಹೊಸ ಸಿಎಂ ಭೇಟಿ ಮಾಡಿದ  ಮೊದಲ ರಾಜತಾಂತ್ರಿಕ ಅಧಿಕಾರಿಯಾಗಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯರು ಅತೀ ಹೆಚ್ಚು ಪ್ರೀತಿಸುವ ಟೀಮ್ ಇಂಡಿಯಾ ಪ್ಲೇಯರ್ಸ್ ಇವರಂತೆ: ಈ ಪಟ್ಟಿಯಲ್ಲಿಲ್ಲ ಧೋನಿ, ಕೊಹ್ಲಿ

Tokyo Olympics: ಪದಕಕ್ಕೆ ಮುತ್ತಿಟ್ಟ ಭಾರತೀಯರಿಗೆ ಇಂದು ಸಂಜೆ ಪ್ರಧಾನಿ ಮೋದಿಯಿಂದ ಸನ್ಮಾನ

(Rahul Dravid teaches Kannada to British High Commissioner to India Alex Ellis in Bengaluru)

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು