India vs England: ಇದು ನಾಚಿಕೆಗೇಡು – ಭಾರತ ಇಂಗ್ಲೆಂಡ್ ಮೊದಲ ಟೆಸ್ಟ್ ಡ್ರಾಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ
ನಾವು ಆಟದ ಮೇಲೆ ಹಿಡಿತ ಸಾಧಿಸಿದ್ದೇವು. ಅಂದುಕೊಂಡಂತೆ ಉತ್ತಮ ಮುನ್ನಡೆ ಪಡೆದು ಅಂತಿಮ ದಿನದಲ್ಲಿ ಗೆಲುವು ಸಾಧಿಸುವ ನಂಬಿಕೆಯಿತ್ತು. ಆದರೆ, ಪಂದ್ಯ ಮುಗಿಸಲು ಆಗಲಿಲ್ಲ ಎಂಬುದು ನಾಚೆಕೆಗೇಡಿನ ಸಂಗತಿ -
ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೊದಲ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶ ಕಾಣದೆ ಡ್ರಾನಲ್ಲಿ ಕೊನೆಗೊಳಿಸಬೇಕಾಗಿ ಬಂತು. ಅಂತಿಮ ಐದನೇ ದಿನ ಬೆಂಬಿಡದೆ ಕಾಡಿದ ಮಳೆರಾಯ ಆಟಗಾರರನ್ನು ಮೈದಾನಕ್ಕಿಳಿಯಲು ಅವಕಾಶವನ್ನೇ ನೀಡಲಿಲ್ಲ. ಸುಲಭವಾಗಿ ಗೆಲುವು ಸಾಧಿಸಬಹುದಾಗಿದ್ದ ಟೀಮ್ ಇಂಡಿಯಾಕ್ಕೆ ನಿರಾಸೆಯಾಯಿತು. ಈ ಬಗ್ಗೆ ಭಾರತದ ನಾಯಕ ವಿರಾಟ್ ಕೊಹ್ಲಿ (Virat Kohli) ಬೇಸರ ಹೊರಹಾಕಿದ್ದಾರೆ.
ಮೊದಲ ಟೆಸ್ಟ್ ಡ್ರಾ ಎಂದು ಘೋಷಣೆಯಾದ ಬಳಿಕ ಮಾತಾನಡಿದ ವಿರಾಟ್ ಕೊಹ್ಲಿ, “ನಾವು ಪಂದ್ಯದ ಮೂರು ಮತ್ತು ನಾಲ್ಕನೇ ದಿನಗಳಲ್ಲಿ ಮಳೆಯ ನಿರೀಕ್ಷೆಯಲ್ಲಿದ್ದೆವು. ಆದರೆ ಅದು ಐದನೇ ದಿನದಂದು ಮಳೆ ಬರುತ್ತದೆಂಬ ಊಹೆಯೂ ಇರಲಿಲ್ಲ. ಇದು ನಾಚಿಕೆಗೇಡಿನ ಸಂಗತಿ” ಎಂದು ಕೊಹ್ಲಿ ಹೇಳಿದ್ದಾರೆ.
“ನಾವು ಆಟದ ಮೇಲೆ ಹಿಡಿತ ಸಾಧಿಸಿದ್ದೇವು. ಅಂದುಕೊಂಡಂತೆ ಉತ್ತಮ ಮುನ್ನಡೆ ಪಡೆದು ಅಂತಿಮ ದಿನದಲ್ಲಿ ಗೆಲುವು ಸಾಧಿಸುವ ನಂಬಿಕೆಯಿತ್ತು. ಆದರೆ, ಪಂದ್ಯ ಮುಗಿಸಲು ಆಗಲಿಲ್ಲ ಎಂಬುದು ನಾಚೆಕೆಗೇಡಿನ ಸಂಗತಿ. ನಾಲ್ಕನೇ ದಿನದಾಟ ಮುಗಿಯುವ ಹೊತ್ತಿಗೆ ತಂಡದ ಮೊತ್ತ 50ರ ಗಡಿ ದಾಟಬೇಕು ಎಂಬುದು ನಮ್ಮ ಪ್ಲಾನ್ ಆಗಿತ್ತು. ಅವಕಾಶ ಸಿಕ್ಕಾಗ ಬೌಂಡರಿ ಬಾರಿಸಿ ಅದರಲ್ಲಿ ಯಶಸ್ವಿಯಾದೆವು.”
“ಲೋವರ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡುವವರು ಸಾಕಷ್ಟು ಶ್ರಮ ವಹಿಸಿದರು. ಪಂದ್ಯ ಆರಂಭಕ್ಕೂ ಮುನ್ನ ಪ್ರತಿದಿನ ಅವರು ನೆಟ್ನಲ್ಲಿ ಸಾಕಷ್ಟು ಅಭ್ಯಾಸ ನಡೆಸುತ್ತಿದ್ದರು. ಅದಕ್ಕೆ ಪ್ರತಿಫಲವಾಗಿ 95 ರನ್ಗಳ ಮುನ್ನಡೆಯನ್ನೂ ನಾವು ಸಾಧಿಸಿದೆವು. ಬ್ಯಾಟ್ಸ್ಮನ್ಗಳ ಪ್ರದರ್ಶನ ನನಗೆ ತೃಪ್ತಿ ತಂದಿದೆ” ಎಂದು ಕೊಹ್ಲಿ ಹೇಳಿದ್ದಾರೆ.
UPDATE: Play has been abandoned. ☹️
The first #ENGvIND Test at Trent Bridge ends in a draw.
We will see you at Lord’s for the second Test, starting on August 12. #TeamIndia
Scorecard ? https://t.co/TrX6JMzP9A pic.twitter.com/k9G7t1WiaB
— BCCI (@BCCI) August 8, 2021
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 65.4 ಓವರ್ನಲ್ಲಿ 183 ರನ್ಗೆ ಆಲೌಟ್ ಆಯಿತು. ಭಾರತ ಕೆ. ಎಲ್ ರಾಹುಲ್ ಅವರ 84 ಹಾಗೂ ರವೀಂದ್ರ ಜಡೇಜಾ ಅವರ 56 ರನ್ಗಳ ನೆರವಿನಿಂದ 278 ರನ್ ಬಾರಿಸಿತು. 95 ರನ್ಗಳ ಹಿನ್ನಡಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ನಾಯಕ ರೂಟ್ ಶತಕ ಸಿಡಿಸಿ ಮತ್ತೆ ತಂಡಕ್ಕೆ ಆಸರೆಯಾದರು. 172 ಎಸೆತಗಳಲ್ಲಿ 109 ರನ್ ಗಳಿಸಿದ ರೂಟ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಇಂಗ್ಲೆಂಡ್ 303 ರನ್ ಗಳಿಸಿ ಭಾರತಕ್ಕೆ 209 ರನ್ಗಳ ಟಾರ್ಗೆಟ್ ನೀಡಿತು.
ಈ ಗುರಿ ಬೆನ್ನಟ್ಟಿದ ಭಾರತ ನಾಲ್ಕನೆ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿತ್ತು. ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ತಲಾ 12 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಭಾರತದ ಗೆಲುವಿಗೆ 157 ರನ್ಗಳ ಅವಶ್ಯಕತೆಯಿತ್ತು. ಆದರೆ, ಎಡಬಿಡದೆ ಸುರಿದ ಮಳೆಯು ಮೊದಲ ಟೆಸ್ಟ್ ನಲ್ಲಿ ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡಿತು. ಒಂದೂ ಎಸೆತ ಕಾಣದೆ ರದ್ದಾದ ಕಾರಣ ಉಭಯ ತಂಡಗಳು ತಲಾ 4 ಅಂಕವನ್ನು ಹಂಚಿಕೊಂಡಿವೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 12ಕ್ಕೆ ಆರಂಭವಾಗಲಿದ್ದು ಆಗಸ್ಟ್ 16ರ ವರೆಗೆ ನಡೆಯಲಿದೆ.
India vs England: ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್ ಯಾವಾಗ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಮಾಹಿತಿ
(India vs England 2021 Its a shame Team India Captain Virat Kohli after Trent Bridge draw)
Published On - 8:29 am, Mon, 9 August 21