ಒಲಿಂಪಿಕ್ಸ್ನಲ್ಲಿ ಶೂನ್ಯ ಸಾಧನೆ; ಬದುಕು ನೀಡಿದ ತನ್ನ ದೇಶವನ್ನೇ ಗೇಲಿ ಮಾಡಿದ ಪಾಕಿಸ್ತಾನದ ಮಾಧ್ಯಮಗಳು! ಹಳೆಯ ವಿಡಿಯೋ ಈಗ ವೈರಲ್
ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನ ಒಂದೇ ಒಂದು ಪದಕ ಗೆಲ್ಲಲಿಲ್ಲ. ಅದೇ ಸಮಯದಲ್ಲಿ, ಭಾರತದ ಖಾತೆಯಲ್ಲಿ ಏಳು ಪದಕಗಳಿವೆ. 22 ಸದಸ್ಯರ ಪಾಕಿಸ್ತಾನಿ ಪಡೆ ಟೋಕಿಯೊ ಒಲಿಂಪಿಕ್ಸ್‌ಗೆ ತಲುಪಿತ್ತು.
ಟೋಕಿಯೊ ಒಲಿಂಪಿಕ್ಸ್ 2020 8 ಆಗಸ್ಟ್ 2021 ರಂದು ಕೊನೆಗೊಂಡಿತು. ಈ ಒಲಿಂಪಿಕ್ಸ್ ಭಾರತಕ್ಕೆ ಉತ್ತಮವೆಂದು ಸಾಬೀತಾಯಿತು. ಏಕೆಂದರೆ ಭಾರತವು ಅತಿ ಹೆಚ್ಚು 7 ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿಯಿತು. ಭಾರತವು ಒಂದು ಚಿನ್ನ ಸೇರಿದಂತೆ ಒಟ್ಟು ಏಳು ಒಲಿಂಪಿಕ್ ಪದಕಗಳನ್ನು ಗೆದ್ದಿದೆ. ಪದಕ ಪಟ್ಟಿಯಲ್ಲಿ ಭಾರತ 48 ನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನಗಳನ್ನು ಅಮೆರಿಕ ಮತ್ತು ಚೀನಾ ಆಕ್ರಮಿಸಿಕೊಂಡವು. ಕಂಚಿನ ಪದಕ ವಿಜೇತ ಭಜರಂಗ್ ಪುನಿಯಾ ಟೋಕಿಯೊ ಒಲಿಂಪಿಕ್ಸ್‌ನ ಸಮರೋಪ ಸಮಾರಂಭದಲ್ಲಿ ಭಾರತದ ದಳವನ್ನು ಮುನ್ನಡೆಸಿದರು. ಆದರೆ ಈ ಸಮಯದಲ್ಲಿ ಪಾಕಿಸ್ತಾನದ ಮೀಡಿಯಾಗಳು ಕ್ರೀಡೆಯಲ್ಲಿ ತನ್ನ ದೇಶ ಮಾಡಿರುವ ಸಾಧನೆಯನ್ನು ಗೇಲಿ ಮಾಡಿರುವ ಹಳೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ವಾಸ್ತವವಾಗಿ, ಇದು ಟಿವಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ಪಾಕಿಸ್ತಾನದ ಮಾಜಿ ಬೌಲರ್ ವಾಸಿಂ ಅಕ್ರಮ್ ಭಾಗವಹಿಸಿದ್ದಾರೆ. ಟಿವಿ ಆಂಕರ್, ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನದ ಪ್ರದರ್ಶನವನ್ನು ಉಲ್ಲೇಖಿಸಿ ಪಾಕಿಸ್ತಾನದ ಸ್ವಿಮಿಂಗ್ ತರಬೇತುದಾರರೊಂದಿಗೆ ನಡೆದ ಘಟನೆಯ ಬಗ್ಗೆ ವಿವರಿಸಲಾರಂಭಿಸಿದರು.
ಆಟಗಾರರಿಗೆ ಉತ್ತಮ ಸೌಲಭ್ಯಗಳು ಸಿಗುತ್ತಿಲ್ಲ! ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ ಯಾವುದೇ ಪದಕ ಗೆಲ್ಲದೇ ತಂಡವು ಪಾಕಿಸ್ತಾನಕ್ಕೆ ಮರಳಿದಾಗ, ಈಜು ತರಬೇತುದಾರ ಖ್ವಾಜಾ ಅಸ್ಲಂ ಅವರನ್ನು ಪತ್ರಕರ್ತ, ನೀವು ಏಕೆ ಪದಕಗಳನ್ನು ಗೆಲ್ಲಲಿಲ್ಲ ಎಂದು ಕೇಳಿದ್ದರಂತೆ? ಈ ಪ್ರಶ್ನೆಗೆ ಈಜು ತರಬೇತುದಾರ, ಧನ್ಯವಾದಗಳು ಯಾರೂ ಮುಳುಗಲಿಲ್ಲವಲ್ಲ ಎಂದು ಖಾರವಾಗಿಯೇ ಉತ್ತರಿಸಿದರು. ಈ ಉತ್ತರದ ಹಿಂದಿನ ಉದ್ದೇಶವೆಂದರೆ, ಪಾಕಿಸ್ತಾನದ ಆಟಗಾರರು ತಮಗೆ ಬೇಕಾದ ಸೌಲಭ್ಯಗಳನ್ನು ಪಡೆಯುತ್ತಿಲ್ಲ ಎಂಬುದಾಗಿತ್ತು.
… और उधर पाकिस्तान में! pic.twitter.com/TH2hoLBsr0
— Rajiv (@Rajlko) August 8, 2021
ಟೋಕಿಯೊದಲ್ಲಿ ಪಾಕಿಸ್ತಾನ ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಲಿಲ್ಲ 1947 ರಲ್ಲಿ, ಪಾಕಿಸ್ತಾನ ಭಾರತದಿಂದ ಸ್ವಾತಂತ್ರ್ಯವಾದ ನಂತರ ಎರಡೂ ದೇಶಗಳು ಯಶಸ್ಸಿನತ್ತ ಸಾಗತೊಡಗಿದವು. ಆದರೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನ ಒಂದೇ ಒಂದು ಪದಕ ಗೆಲ್ಲಲಿಲ್ಲ. ಅದೇ ಸಮಯದಲ್ಲಿ, ಭಾರತದ ಖಾತೆಯಲ್ಲಿ ಏಳು ಪದಕಗಳಿವೆ. 22 ಸದಸ್ಯರ ಪಾಕಿಸ್ತಾನಿ ಪಡೆ ಟೋಕಿಯೊ ಒಲಿಂಪಿಕ್ಸ್‌ಗೆ ತಲುಪಿತ್ತು. ಆದರೆ ಅವರು ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಕೊನೆಯದಾಗಿ 1992 ರಲ್ಲಿ ಹಾಕಿಯಲ್ಲಿ ಕಂಚಿನ ಪದಕ ಗೆದ್ದಿತು. ಅಂದಿನಿಂದ ಪಾಕಿಸ್ತಾನ ಯಾವುದೇ ಒಲಿಂಪಿಕ್ ಪದಕವನ್ನು ಗೆದ್ದಿಲ್ಲ.
ಅರ್ಷದ್ ನದೀಮ್ ನೀರಜ್ ಚೋಪ್ರಾ ಅವರೊಂದಿಗೆ ಫೈನಲ್ ತಲುಪಿದರು ಟೋಕಿಯೊದಲ್ಲಿ ಪಾಕಿಸ್ತಾನದ ಕಡೆಯಿಂದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಕೂಡ ಭಾರತೀಯ ನೀರಜ್ ಚೋಪ್ರಾ ಅವರೊಂದಿಗೆ ಫೈನಲ್ ತಲುಪಿದರು. ಆದರೆ ಅವರು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಅವರು ಪಾಕಿಸ್ತಾನ ಪರ ಫೈನಲ್ ತಲುಪಿದ ಮೊದಲ ಕ್ರೀಡಾಪಟುವಾಗಿದ್ದರು.
Published On - 6:48 am, Mon, 9 August 21