ಭಾರತ ಗೆದ್ದ ಪದಕಗಳಿಂದ ದೇಶಕ್ಕೆ ಹೆಮ್ಮೆ; ಕಠಿಣ ಸಮಯದಲ್ಲಿ ಒಲಿಂಪಿಕ್ಸ್ ಆಯೋಜಿಸಿದ ಜಪಾನ್​ಗೆ ಧನ್ಯವಾದ: ಮೋದಿ ಟ್ವೀಟ್

Tokyo Olympics: ಒಲಿಂಪಿಕ್ಸ್ 2020 ಕ್ರೀಡಾಕೂಟದ ಅಂತಿಮ ದಿನವಾದ ಇಂದು ಭಾರತದ ಪ್ರದರ್ಶನದ ಬಗ್ಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಕ್ರೀಡಾಪಟುಗಳು ಪಡೆದ ಪದಕಗಳು ದೇಶಕ್ಕೆ ಹೆಮ್ಮೆ ತಂದಿವೆ ಎಂದು ಹೇಳಿದ್ದಾರೆ.

ಭಾರತ ಗೆದ್ದ ಪದಕಗಳಿಂದ ದೇಶಕ್ಕೆ ಹೆಮ್ಮೆ; ಕಠಿಣ ಸಮಯದಲ್ಲಿ ಒಲಿಂಪಿಕ್ಸ್ ಆಯೋಜಿಸಿದ ಜಪಾನ್​ಗೆ ಧನ್ಯವಾದ: ಮೋದಿ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ganapathi bhat

Updated on:Aug 08, 2021 | 10:40 PM

ಟೋಕಿಯೋ ಒಲಿಂಪಿಕ್ಸ್​ಗೆ ಇಂದು (ಆಗಸ್ಟ್ 8) ಸಂಭ್ರಮದ ಸಮಾರೋಪ ಸಿಕ್ಕಿದೆ. ಭಾರತದ ಪಾಲಿಗೂ ಇದು ಅತ್ಯಂತ ಮಹತ್ವದ ಒಲಿಂಪಿಕ್ಸ್ ಆಗಿತ್ತು. ಪದಕ ಬೇಟೆಯಲ್ಲಿ, ಹೊಸ ದಾಖಲೆಗಳಲ್ಲಿ ಭಾರತ ಹೊಸ ಸಾಧನೆ ಮಾಡಿತ್ತು. ಇಂದು ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್​ನ ಭಾರತದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಹಾರೈಸಿದ್ದಾರೆ. ಒಂದು ಚಿನ್ನ, ಎರಡು ಬೆಳ್ಳಿ ಹಾಗೂ 4 ಕಂಚು ಸಹಿತ 7 ಮೆಡಲ್ ಪಡೆದ ಭಾರತಕ್ಕೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಒಲಿಂಪಿಕ್ಸ್ 2020 ಕ್ರೀಡಾಕೂಟದ ಅಂತಿಮ ದಿನವಾದ ಇಂದು ಭಾರತದ ಪ್ರದರ್ಶನದ ಬಗ್ಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಕ್ರೀಡಾಪಟುಗಳು ಪಡೆದ ಪದಕಗಳು ದೇಶಕ್ಕೆ ಹೆಮ್ಮೆ ತಂದಿವೆ ಎಂದು ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ 2020 ಮುಕ್ತಾಯವಾಗುತ್ತಿದೆ. ನಾನು ಈ ಹೊತ್ತಿನಲ್ಲಿ ಭಾರತದ ಕ್ರೀಡಾಪಟುಗಳಿಗೆ, ಅವರ ಕೌಶಲ್ಯಭರಿತ, ತಂಡಸ್ಪೂರ್ತಿಯ ಹಾಗೂ ಬದ್ಧತೆಯ ಆಟಕ್ಕೆ ಶುಭಹಾರೈಸುತ್ತೇನೆ. ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಪ್ರತಿಯೊಬ್ಬ ಅಥ್ಲೀಟ್ ಕೂಡ ಚಾಂಪಿಯನ್ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತ ಗೆದ್ದ ಪದಕಗಳು ನಮಗೆ ನಿಜವಾಗಿ ಹೆಮ್ಮೆಯ ಸಂಗತಿಯಾಗಿದೆ. ಆದರೆ, ಇದೇ ವೇಳೆ ಕ್ರೀಡೆಯನ್ನು ಮೂಲದಲ್ಲಿ ಗಟ್ಟಿಗೊಳಿಸಲು, ಮತ್ತಷ್ಟು ಜನಪ್ರಿಯಗೊಳಿಸಲು ಹಾಗೂ ಅದರಿಂದ ಹೊಸ ಪ್ರತಿಭೆಗಳು ಸೃಷ್ಟಿಯಾಗುವಂತೆ ಮಾಡಲು ಇದು ಸರಿಯಾದ ಸಮಯವಾಗಿದೆ ಎಂದೂ ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಹಾಗೂ ಮೋದಿ ಟ್ವೀಟ್ ಮೂಲಕ ಜಪಾನ್​ನ ಸರ್ಕಾರ ಹಾಗೂ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕೊರೊನಾ ಸಾಂಕ್ರಾಮಿಕದ ಮುಖ್ಯ ಅಡೆತಡೆಯ ನಡುವೆ ಟೋಕಿಯೋದಲ್ಲಿ ಉತ್ತಮ ಸಂಘಟನೆ ನೀಡಿದ್ದಕ್ಕೆ, ಯಶಸ್ವಿಯಾಗಿ ಒಲಿಂಪಿಕ್ ಆಯೋಜಿಸಿದ್ದಕ್ಕೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ. ಕ್ರೀಡೆ ಹೇಗೆ ಒಗ್ಗಟ್ಟು ಬೆಸೆಯಬಲ್ಲದು ಎಂಬುದಕ್ಕೆ ಇದು ನಿದರ್ಶನ ಎಂದೂ ಹೇಳಿಕೊಂಡಿದ್ದಾರೆ.

ಭಾರತ ಐತಿಹಾಸಿಕ ಪ್ರದರ್ಶನ ನೀಡಿ ಈ ಬಾರಿಯ, ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಮಂಗಳ ಹಾಡಿದೆ. ನೀರಜ್ ಚೋಪ್ರಾ ಪಡೆದ ಚಿನ್ನದ ಪದಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಹಾಗೂ ಭಾರತ ಒಟ್ಟು 7 ಪದಕ ಗೆದ್ದಿರುವುದು ಕೂಡ ಇದೇ ಮೊದಲನೆ ಬಾರಿ ಆಗಿದೆ.

ಇದನ್ನೂ ಓದಿ: Neeraj Chopra: ಇದು 37 ವರ್ಷದ ಕನಸು! ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಹೃದಯತುಂಬಿ ಶುಭಹಾರೈಸಿದ ಪಿಟಿ ಉಷಾ

Tokyo Olympics: ಎಂಟು ಒಲಿಂಪಿಕ್ಸ್​ನಲ್ಲಿ ಮೂರು ರಾಷ್ಟ್ರಗಳನ್ನು ಪ್ರತಿನಿಧಿಸಿದ ಮಹಿಳಾ ಜಿಮ್ನಾಸ್ಟ್​ಗೆ ಭಾವಪೂರ್ವಕ ವಿದಾಯ

(PM Narendra Modi tweet on Tokyo Olympics 2020 Congratulates Medal Winners)

Published On - 10:36 pm, Sun, 8 August 21