Sign In

By signing in or creating an account, you agree with Associated Broadcasting Company's Terms & Conditions and Privacy Policy.

Neeraj Chopra: ಇದು 37 ವರ್ಷದ ಕನಸು! ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಹೃದಯತುಂಬಿ ಶುಭಹಾರೈಸಿದ ಪಿಟಿ ಉಷಾ

PT Usha on Neeraj Chopra: ಅಥ್ಲೆಟಿಕ್ ಪಂದ್ಯವೊಂದರಲ್ಲಿ ಭಾರತೀಯರಿಗೆ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಲಭಿಸಿದೆ. ಹಾಗೂ ಅಭಿನವ್ ಬಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಪಡೆದಿದ್ದಾರೆ.

Neeraj Chopra: ಇದು 37 ವರ್ಷದ ಕನಸು! ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಹೃದಯತುಂಬಿ ಶುಭಹಾರೈಸಿದ ಪಿಟಿ ಉಷಾ
ಪಿಟಿ ಉಷಾ ಮತ್ತು ನೀರಜ್ ಚೋಪ್ರಾ
Follow us
TV9 Web
| Updated By: Vinay Bhat

Updated on: Aug 08, 2021 | 6:55 AM

ಇದು ನನ್ನ ಕನಸು. ಆದರೆ, 37 ವರ್ಷದಿಂದ ಅಪೂರ್ಣವಾಗಿ ಉಳಿದ ಕನಸು. ಅದನ್ನು ಪರಿಪೂರ್ಣಗೊಳಿಸಿದ ನಿನಗೆ ಶುಭಾಶಯಗಳು. ಧನ್ಯವಾದಗಳು ಮಗನೇ ಎಂದು ಹೃದಯತುಂಬಿ ಶುಭಹಾರೈಸಿದ್ದು ಮತ್ಯಾರೂ ಅಲ್ಲ. ಭಾರತದ ಚಿನ್ನದ ಹುಡುಗಿ ಎಂದು ಹೆಸರು ಪಡೆದ, ಭಾರತದ ಹೆಮ್ಮೆಯ ಒಲಿಂಪಿಯನ್, ಅಥ್ಲೀಟ್ ಪಿ.ಟಿ ಉಷಾ. ಇದು 37 ವರ್ಷಗಳ ಅಪೂರ್ಣ ಕನಸು ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಅದನ್ನು ನೀನು ನಿಜ ಮಾಡಿದ್ದೀಯಾ ಮಗು. ನಿನಗೆ ಧನ್ಯವಾದಗಳು ಎಂದಿದ್ದಾರೆ.

ಪಿಟಿ ಉಷಾ ಹೀಗೆ ಹೇಳಲು ಕಾರಣವೇನು ಎಂದು ನೀವು ಅಂದುಕೊಳ್ಳಬಹುದು. ಪಿಟಿ ಉಷಾ ಭಾರತದ ಓಟದ ರಾಣಿ ಎಂದೇ ಕರೆಸಿಕೊಂಡವರು. ಅವರು ಈಗಕ್ಕೆ 37 ವರ್ಷಗಳ ಹಿಂದೆ, ಅಂದರೆ 1984ರ ಲಾಸ್ ಏಂಜಲಿಸ್ ಸಮ್ಮರ್ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದರು. ಆ ಒಲಿಂಪಿಕ್​ನಲ್ಲಿ ಭಾರತ ಪದಕ ಗೆದ್ದಿರಲಿಲ್ಲ. ಆದರೆ, ಭಾರತ ಮಹಿಳಾ ಅಥ್ಲೀಟ್​ಗಳನ್ನು ಒಲಿಂಪಿಕ್ಸ್​ನ ವೇದಿಕೆಗೆ ತಂದಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು.

ಆ ಒಲಿಂಪಿಕ್ಸ್​ನಲ್ಲಿ ಪಿಟಿ ಉಷಾ, 400 ಮೀಟರ್ ಹರ್ಡಲ್ಸ್​ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಅವಕಾಶ ಸ್ವಲ್ಪದರಲ್ಲೇ ತಪ್ಪಿಹೋಗಿತ್ತು. 1984 ಒಲಿಂಪಿಕ್ಸ್​ ಆಗಿ ಈಗ 37 ವರ್ಷವಾಗಿದೆ. ಅಥ್ಲೀಟ್ ಒಬ್ಬಾತ ಇಂದು ಭಾರತಕ್ಕೆ ಚಿನ್ನ ತಂದಕೊಟ್ಟಿದ್ದಾನೆ. ಅಥ್ಲೆಟಿಕ್ ಪಂದ್ಯವೊಂದರಲ್ಲಿ ಭಾರತೀಯರಿಗೆ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಲಭಿಸಿದೆ. ಹಾಗೂ ಅಭಿನವ್ ಬಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಪಡೆದಿದ್ದಾರೆ. ಆ ಮೂಲಕ, ಟ್ರಾಕ್ ಮತ್ತು ಫೀಲ್ಡ್ ಅಥ್ಲೀಟ್ ಒಬ್ಬ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವ ಕನಸು ಇಂದು ಪೂರ್ಣವಾಗಿದೆ.

ಈ ಸಂಭ್ರಮದ ಕಾರಣಕ್ಕೆ ಟ್ವೀಟ್ ಮಾಡಿದ ಪಿಟಿ ಉಷಾ

ಚೋಪ್ರಾ ಗೆದ್ದ ಈ ಮೊದಲ ಪದಕಗಳಿವು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ ತಂದುಕೊಟ್ಟ ಚೋಪ್ರಾ, 2017ರ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿದ್ದರು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದರು. ಚೋಪ್ರಾ 2018ರ ಕಾಮನ್​ವೆಲ್ತ್ ಗೇಮ್ಸ್​ನಲ್ಲೂ ಚಿನ್ನದ ಪದಕ ಪಡೆದಿದ್ದರು. ಅಥ್ಲೆಟಿಕ್ ಪಂದ್ಯವೊಂದರಲ್ಲಿ ಭಾರತೀಯ ಒಬ್ಬರಿಗೆ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಇಂದು ಲಭ್ಯವಾಗಿದೆ. ಅಭಿನವ್ ಬಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಪಡೆದಿದ್ದಾರೆ.

ಇದನ್ನೂ ಓದಿ: Neeraj Chopra: ಚಿನ್ನದ ಹುಡುಗ ‘ಸುಬೇದಾರ್ ನೀರಜ್ ಚೋಪ್ರಾ’ ಬಗ್ಗೆ ನಿಮಗೆಷ್ಟು ಗೊತ್ತು?

Tokyo olympics: ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ! ಚೊಚ್ಚಲ ಚಿನ್ನದ ಪದಕವನ್ನು ಮಿಲ್ಖಾ ಸಿಂಗ್​ಗೆ ಅರ್ಪಿಸಿದ ನೀರಜ್ ಚೋಪ್ರಾ

(Realised my unfinished dream after 37 years PT Usha congratulates Neeraj Chopra)

ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್