Tokyo Olympics: ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ; ಶ್ರೇಯಾಂಕದಲ್ಲಿ ಮುಂಬಡ್ತಿ ಪಡೆದ ಭಾರತ ಮಹಿಳಾ- ಪುರುಷರ ಹಾಕಿ ತಂಡ

Tokyo Olympics: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಐತಿಹಾಸಿಕ ಅಭಿಯಾನದಿಂದಾಗಿ ಈ ಎರಡೂ ತಂಡಗಳು ವಿಶ್ವ ಶ್ರೇಯಾಂಕದಲ್ಲಿ ತಮ್ಮ ಅತ್ಯುತ್ತಮ ಸ್ಥಾನಗಳನ್ನು ಸಾಧಿಸಿವೆ. ಪುರುಷರ ತಂಡ ಮೂರನೇ ಸ್ಥಾನಕ್ಕೆ ಹಾಗೂ ಮಹಿಳಾ ತಂಡ ಎಂಟನೇ ಸ್ಥಾನಕ್ಕೆ ಏರಿವೆ.

Tokyo Olympics: ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ; ಶ್ರೇಯಾಂಕದಲ್ಲಿ ಮುಂಬಡ್ತಿ ಪಡೆದ ಭಾರತ ಮಹಿಳಾ- ಪುರುಷರ ಹಾಕಿ ತಂಡ
ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡ,
Follow us
TV9 Web
| Updated By: ಪೃಥ್ವಿಶಂಕರ

Updated on: Aug 07, 2021 | 9:26 PM

ಟೋಕಿಯೊ ಒಲಿಂಪಿಕ್ಸ್ -2020ನಲ್ಲಿ, ಭಾರತದ ವಿಷಯದಲ್ಲಿ ಯಾರಾದರೂ ಅತ್ಯಂತ ಪ್ರಭಾವಶಾಲಿ ಮತ್ತು ಐತಿಹಾಸಿಕ ಪ್ರದರ್ಶನ ನೀಡಿದರೆ, ಅದು ದೇಶದ ಹಾಕಿ ತಂಡಗಳು. ಭಾರತದ ಪುರುಷರು ಮತ್ತು ಮಹಿಳೆಯರ ಹಾಕಿ ತಂಡಗಳು ಈ ಆಟಗಳಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದವು. ಪುರುಷರ ತಂಡವು ನಾಲ್ಕು ದಶಕಗಳ ಒಲಿಂಪಿಕ್ ಪದಕದ ಬರವನ್ನು ಕೊನೆಗೊಳಿಸಿದರೆ, ಭಾರತೀಯ ಮಹಿಳಾ ತಂಡವು ತನ್ನ ಮೂರನೇ ಒಲಿಂಪಿಕ್ಸ್ ಆಡುವ ಮೂಲಕ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತು. ಆದಾಗ್ಯೂ ತಂಡವು ಕಂಚಿನ ಪದಕದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಸೋತಿತು. ಈಗ ಈ ಎರಡೂ ತಂಡಗಳು ತಮ್ಮ ಪ್ರದರ್ಶನದ ಪ್ರತಿಫಲವನ್ನೂ ಪಡೆದುಕೊಂಡಿವೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಐತಿಹಾಸಿಕ ಅಭಿಯಾನದಿಂದಾಗಿ ಈ ಎರಡೂ ತಂಡಗಳು ವಿಶ್ವ ಶ್ರೇಯಾಂಕದಲ್ಲಿ ತಮ್ಮ ಅತ್ಯುತ್ತಮ ಸ್ಥಾನಗಳನ್ನು ಸಾಧಿಸಿವೆ. ಪುರುಷರ ತಂಡ ಮೂರನೇ ಸ್ಥಾನಕ್ಕೆ ಹಾಗೂ ಮಹಿಳಾ ತಂಡ ಎಂಟನೇ ಸ್ಥಾನಕ್ಕೆ ಏರಿವೆ.

ಹಾಕಿ ಇಂಡಿಯಾ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಭಾರತೀಯ ಪುರುಷರ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಹೇಳುವಂತೆ, ಇದು ನಮ್ಮೆಲ್ಲರ ಪ್ರೀತಿ ಮತ್ತು ಕ್ರೀಡೆಗೆ ನಮ್ಮೆಲ್ಲರ ಶ್ರಮ ಮತ್ತು ಸಮರ್ಪಣೆಯ ಫಲಿತಾಂಶವಾಗಿದೆ. 41 ವರ್ಷಗಳ ನಂತರ ಶ್ರೇಯಾಂಕಗಳು ಮತ್ತು ಒಲಿಂಪಿಕ್ ಪದಕಗಳು ಭಾರತೀಯ ಹಾಕಿಯ ಆತ್ಮಸ್ಥೈರ್ಯ ಹೆಚ್ಚಿಸಿವೆ. ಇನ್ನು ಮುಂದೆ ನಾವು ಹಿಂತಿರುಗಿ ನೋಡುವುದಿಲ್ಲ ಎಂದಿದ್ದಾರೆ.

ಮಹಿಳಾ ತಂಡದ ನಾಯಕಿ ಹೇಳಿದ್ದಿದು ಪುರುಷರ ತಂಡವು ಕಂಚಿನ ಪದಕ ಗೆದ್ದರೆ, ಮಹಿಳಾ ತಂಡವು ಪದಕದ ಅವಕಾಶವನ್ನು ಕಳೆದುಕೊಂಡಿತು, ಮೂರನೇ ಸ್ಥಾನದ ಪ್ಲೇ-ಆಫ್ ನಲ್ಲಿ ಬ್ರಿಟನ್ ವಿರುದ್ಧ ಸೋತು ನಾಲ್ಕನೇ ಸ್ಥಾನ ಗಳಿಸಿತು. ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಹೇಳಿದರು, ನಾವು ವೇದಿಕೆಯನ್ನು ತಲುಪಲು ತುಂಬಾ ಹತ್ತಿರದಲ್ಲಿದ್ದೆವು, ಇದು ನಮಗೆ ಸಾಧ್ಯವಾಗದಿರುವುದು ತಂಡಕ್ಕೆ ತುಂಬಾ ದುಃಖಕರವಾಗಿದೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ನಾವು ಉತ್ತಮ ಪ್ರಗತಿ ಸಾಧಿಸಿದ್ದೇವೆ ಮತ್ತು ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಒಲಿಂಪಿಕ್ಸ್‌ನಲ್ಲಿ ಅಗ್ರ ನಾಲ್ಕನೇ ಸ್ಥಾನದಲ್ಲಿರುವುದು ಮತ್ತು ವಿಶ್ವ ಶ್ರೇಯಾಂಕದಲ್ಲಿ ಎಂಟನೇ ಸ್ಥಾನವನ್ನು ತಲುಪುವುದು ನಮಗೆ ದೊಡ್ಡ ವಿಷಯವಾಗಿದೆ, ಇದು ನಮಗೆ ಆತ್ಮವಿಶ್ವಾಸವನ್ನು ನೀಡಿದೆ ಮತ್ತು ಅದು ಖಂಡಿತವಾಗಿಯೂ ನಾವು ಮುಂದೆ ಸಾಗಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಮೊದಲು ಇದು ಶ್ರೇಯಾಂಕವಾಗಿತ್ತು ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನ ಎರಡನೇ ಹಂತದ ಮೊದಲ ಮೂರು ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಪುರುಷರ ತಂಡ ನಾಲ್ಕನೇ ಸ್ಥಾನ ಪಡೆಯಿತು. ಲಂಡನ್‌ನಲ್ಲಿ ನಡೆದ 2018 ರ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದಾಗ ಮಹಿಳಾ ತಂಡದ ಹಿಂದಿನ ಅತ್ಯುತ್ತಮ ವಿಶ್ವ ಶ್ರೇಯಾಂಕವು ಒಂಬತ್ತನೇ ಸ್ಥಾನದಲ್ಲಿತ್ತು. ಇದು ತಂಡವನ್ನು ಅಗ್ರ ಶ್ರೇಯಾಂಕಿತ ಏಷ್ಯನ್ ತಂಡವನ್ನಾಗಿ ಮಾಡಿತು ಮತ್ತು ಜಕಾರ್ತದಲ್ಲಿ ನಡೆದ 2018 ರ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿತು.

ಪುರುಷರ ಶ್ರೇಯಾಂಕದಲ್ಲಿ ಬೆಲ್ಜಿಯಂ ಮೊದಲ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಜರ್ಮನಿ ಐದನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಮಹಿಳಾ ಶ್ರೇಯಾಂಕದಲ್ಲಿ, ನೆದರ್ಲ್ಯಾಂಡ್ಸ್ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್ ಎರಡನೇ, ಅರ್ಜೆಂಟೀನಾ ಮೂರನೇ, ಆಸ್ಟ್ರೇಲಿಯಾ ನಾಲ್ಕನೇ, ಜರ್ಮನಿ ಐದನೇ ಸ್ಥಾನದಲ್ಲಿದೆ.