Test Championship: ಮಳೆಯಿಂದ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯ; ತಲಾ 4 ಪಾಯಿಂಟ್ ಪಡೆದ ಉಭಯ ದೇಶಗಳು

ICC World Test Championship: ಹೊಸ ಚಾಂಪಿಯನ್‌ಶಿಪ್‌ಗಾಗಿ, ಪ್ರತಿ ಟೆಸ್ಟ್ ಗೆಲುವಿಗೆ 12 ಅಂಕಗಳನ್ನು ಇರಿಸಲಾಗಿದ್ದು, ಡ್ರಾ ಅಥವಾ ಟೈ ಸಂದರ್ಭದಲ್ಲಿ ಎರಡೂ ತಂಡಗಳಿಗೆ ತಲಾ 4 ಅಂಕಗಳನ್ನು ನೀಡಲಾಗುತ್ತದೆ.

Test Championship: ಮಳೆಯಿಂದ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯ; ತಲಾ 4 ಪಾಯಿಂಟ್ ಪಡೆದ ಉಭಯ ದೇಶಗಳು
ವಿರಾಟ್ ಕೊಹ್ಲಿ- ಜೋ ರೂಟ್
Follow us
| Updated By: Vinay Bhat

Updated on: Aug 09, 2021 | 6:39 AM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡ್ರಾ ಆಗಿದೆ. ನಾಟಿಂಗ್‌ಹ್ಯಾಮ್‌ನಲ್ಲಿ ಆಗಸ್ಟ್ 4 ರಂದು ಆರಂಭವಾದ ಈ ಪಂದ್ಯವು ಐದನೇ ಮತ್ತು ಕೊನೆಯ ದಿನದ ಮಳೆಯಿಂದಾಗಿ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಇದರಿಂದಾಗಿ ಡ್ರಾದಲ್ಲಿ ಕೊನೆಗೊಂಡಿತು. ಗೆಲುವಿಗೆ 157 ರನ್ ಗಳ ಅಗತ್ಯವಿತ್ತು ಮತ್ತು 9 ವಿಕೆಟ್ ಬಾಕಿ ಉಳಿದಿದ್ದರಿಂದ ಭಾರತ ತಂಡವು ಕೊನೆಯ ದಿನ ಗೆಲುವನ್ನು ದಾಖಲಿಸುವ ಅವಕಾಶವನ್ನು ಹೊಂದಿತ್ತು, ಆದರೆ ಮಳೆ ಈ ಅವಕಾಶವನ್ನು ಕಸಿದುಕೊಂಡಿತು. ಈ ರೀತಿಯಾಗಿ, ಯಾವುದೇ ತಂಡವು ಸರಣಿಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಈ ಸರಣಿಯ ವಿಶೇಷವೆಂದರೆ ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿ ಪ್ರಾರಂಭವಾಯಿತು, ಆದ್ದರಿಂದ ಪ್ರತಿ ಟೆಸ್ಟ್ ಫಲಿತಾಂಶವು ತುಂಬಾ ಮೌಲ್ಯಯುತವಾಗಿದೆ. ಡಬ್ಲ್ಯುಟಿಸಿಯ ಪಾಯಿಂಟ್ಸ್ ವ್ಯವಸ್ಥೆಯಡಿ, ಪಂದ್ಯವು ಡ್ರಾ ಆಗಿದ್ದರಿಂದ ಎರಡೂ ತಂಡಗಳಿಗೆ 4 ಅಂಕಗಳನ್ನು ನೀಡಲಾಗಿದೆ.

ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ, ಮೊದಲ ಸ್ಥಾನದಲ್ಲಿದ್ದ ಟೀಂ ಇಂಡಿಯಾ, ಹೆಚ್ಚು ಅಂಕಗಳನ್ನು ಗಳಿಸಿ, ಫೈನಲ್‌ನಲ್ಲಿ ಆಡಿತು. ಅಲ್ಲಿ ಭಾರತವನ್ನು ನ್ಯೂಜಿಲೆಂಡ್ ಸೋಲಿಸಿತು. ಈ ಬಾರಿ ಆ ಸೋಲನ್ನು ಸರಿದೂಗಿಸಲು ಭಾರತೀಯ ತಂಡವು ಸಂಪೂರ್ಣ ಶಕ್ತಿಯೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಮೊದಲ ಟೆಸ್ಟ್‌ನಲ್ಲಿಯೇ ಮಳೆಯು ಭಾರತ ಪೂರ್ಣ ಅಂಕಗಳನ್ನು ಪಡೆಯುವ ಅವಕಾಶವನ್ನು ಕಸಿದುಕೊಂಡಿತು.

ಟೆಸ್ಟ್ ಗೆಲುವಿಗೆ 12 ಅಂಕಗಳು ಐಸಿಸಿ ಕಳೆದ ತಿಂಗಳು ಟೆಸ್ಟ್ ಚಾಂಪಿಯನ್‌ಶಿಪ್‌ನ ಹೊಸ ಪಾಯಿಂಟ್ಸ್ ವ್ಯವಸ್ಥೆಯನ್ನು ಘೋಷಿಸಿತ್ತು, ಇದು ಹಿಂದಿನ ಆವೃತ್ತಿಗಿಂತ ಭಿನ್ನವಾಗಿತ್ತು. ಹೊಸ ಚಾಂಪಿಯನ್‌ಶಿಪ್‌ಗಾಗಿ, ಪ್ರತಿ ಟೆಸ್ಟ್ ಗೆಲುವಿಗೆ 12 ಅಂಕಗಳನ್ನು ಇರಿಸಲಾಗಿದ್ದು, ಡ್ರಾ ಅಥವಾ ಟೈ ಸಂದರ್ಭದಲ್ಲಿ ಎರಡೂ ತಂಡಗಳಿಗೆ ತಲಾ 4 ಅಂಕಗಳನ್ನು ನೀಡಲಾಗುತ್ತದೆ. ಅಂದರೆ, ಈ ಪಂದ್ಯದಲ್ಲಿ ಭಾರತೀಯ ತಂಡದ ಕೈಯಿಂದ 8 ಅಂಕಗಳು ಜಾರಿದವು. ಇಂಗ್ಲೆಂಡಿನಲ್ಲಿ, ಒಂದು ದಶಕಕ್ಕೂ ಹೆಚ್ಚು ಕಾಲ ಟೆಸ್ಟ್-ಗೆಲುವಿನ ಸರಣಿಯನ್ನು ಗೆಲ್ಲಲು ಭಾರತ ಹೆಣಗಾಡುತ್ತಿದೆ, ಈ ಅಂಕಗಳನ್ನು ಕೈಯಿಂದ ಕಳೆದುಕೊಳ್ಳುವುದು ತಂಡಕ್ಕೆ ಹೊರೆಯಾಗಬಹುದು. ಸರಣಿಯ ಮುಂದಿನ ಪಂದ್ಯ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ಆಗಸ್ಟ್ 12 ರಿಂದ ನಡೆಯಲಿದೆ. ಲಾರ್ಡ್ಸ್‌ನಲ್ಲಿ ಟೀಂ ಇಂಡಿಯಾ ದಾಖಲೆ ಉತ್ತಮವಾಗಿಲ್ಲ, ಆದರೆ ಟೆಸ್ಟ್ ಚಾಂಪಿಯನ್‌ಶಿಪ್‌ ಧೃಷ್ಟಿಯಿಂದ ಟೀಮ್ ಇಂಡಿಯಾ ಗೆಲುವಿಗಾಗಿ ಆಡಲೇಬೇಕಾಗಿದೆ.

ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್