Suresh Raina: ರೈನಾ ಜೊತೆ ಸಚಿನ್ ಹೆಂಡ್ತಿಯನ್ನು ವಿಚಾರಿಸಿದ ಏರ್​ ಹೋಸ್ಟೆಸ್: ಆಮೇನಾಯ್ತು?

suresh raina-Sachin-arjun tendulkar: ಭಾರತ ತಂಡದ ಮತ್ತೋರ್ವ ಕ್ರಿಕೆಟಿಗ ಎಂದು ಎಂಬುದು. ಆ ಬಳಿಕ ಏರ್ ಹೋಸ್ಟೆಸ್ ನನ್ನ ಬಳಿ ಬಂದು ನಾಚಿಕೆಯಿಂದ ಕ್ಷಮೆಯಾಚಿಸಿದ್ದರು ಎಂದು ಸುರೇಶ್ ರೈನಾ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳನ ಸ್ವಾರಸ್ಯಕರ ಘಟನೆಯನ್ನು ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.

Suresh Raina: ರೈನಾ ಜೊತೆ ಸಚಿನ್ ಹೆಂಡ್ತಿಯನ್ನು ವಿಚಾರಿಸಿದ ಏರ್​ ಹೋಸ್ಟೆಸ್: ಆಮೇನಾಯ್ತು?
suresh raina-Sachin-arjun tendulkar
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 08, 2021 | 8:41 PM

ಟೀಮ್ ಇಂಡಿಯಾ (Team India) ಕಂಡಂತಹ ಅತ್ಯುತ್ತಮ ಆಟಗಾರರಲ್ಲಿ ಸುರೇಶ್ ರೈನಾ (Suresh Raina) ಕೂಡ ಒಬ್ಬರು. ಧೋನಿ ಪಡೆ ಖಾಯಂ ಸದಸ್ಯರಾಗಿದ್ದ ರೈನಾ 2011 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಅಷ್ಟೇ ಅಲ್ಲದೆ ಧೋನಿಯ ನಿವೃತ್ತಿಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿ ತಮ್ಮ ಗೆಳೆತನವನ್ನು ಸಾರಿದ್ದರು. ಇದೀಗ ಐಪಿಎಲ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಇದರ ನಡುವೆ ತಮ್ಮ ಆತ್ಮಕಥನ “ಬಿಲೀವ್: ವಾಟ್ ಲೈಫ್ ಅಂಡ್ ಕ್ರಿಕೆಟ್ ಥಾಟ್ ಮಿ ” (Believe: What Life and Cricket Taught Me) ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದರಲ್ಲಿ ತಮ್ಮ ವೃತ್ತಿಜೀವನ ಅನೇಕ ಸ್ವಾರಸ್ಯಕರ ಘಟನೆಗಳನ್ನು ರೈನಾ ಹಂಚಿಕೊಂಡಿದ್ದಾರೆ. ಅಂತಹದೊಂದು ಘಟನೆಯ ಆಯ್ದ ಭಾಗವನ್ನು ಇಲ್ಲಿ ತಿಳಿಸಲಾಗಿದೆ.

ಅದು 2006, ಟೀಮ್ ಇಂಡಿಯಾ ಆಟಗಾರರು ಪಂದ್ಯವನ್ನಾಡಲು ವಿಮಾನದಲ್ಲಿ ಮತ್ತೊಂದು ನಗರಕ್ಕೆ ಹೊರಟಿತ್ತು. ಈ ವಿಮಾನದಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಕೂಡ ಇದ್ದರು. ಅವರೊಂದಿಗೆ ಅಂದು ರೈನಾ ಸೀಟ್ ಹಂಚಿಕೊಂಡಿದ್ದರು. ಇಬ್ಬರು ಜೊತೆಯಾಗಿ ಕೂತಿರುವುದನ್ನು ಗಮನಿಸಿದ ಏರ್​ ಹೋಸ್ಟೆಸ್​ ತೆಂಡೂಲ್ಕರ್ ಅವರ ಬಳಿ ಬಂದರು. ಅಲ್ಲದೆ ಸಚಿನ್ ಅವರಿಂದ ಆಟೋಗ್ರಾಫ್ ಪಡೆದರು.

ಇದೇ ವೇಳೆ ಆಕೆ ನನ್ನನ್ನು ನೋಡಿ, “ಹಾಯ್ ಅರ್ಜುನ್, ಹೇಗಿದ್ದೀರಾ? ನಿಮ್ಮ ತಾಯಿ ಹೇಗಿದ್ದಾರೆ? ” ಎಂದು ಕೇಳಿದ್ದರು. ಇದನ್ನು ಕೇಳಿಸಿದ ಸಚಿನ್ ತೆಂಡೂಲ್ಕರ್ ಇಬ್ಬರೂ ಚೆನ್ನಾಗಿದ್ದಾರೆ ಆದರೆ, ಇತ್ತೀಚೆಗೆ ಅಂಜಲಿ (ಸಚಿನ್ ಪತ್ನಿ) ಅರ್ಜುನ್ (ಸಚಿನ್ ಮಗ) ಅಧ್ಯಯನದ ಮೇಲೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂಬ ಹಾಸ್ಯವಾಗಿ ಉತ್ತರಿಸಿದ್ದರು. ಈ ಉತ್ತರ ಕೇಳಿ ಆಕೆಗೂ ಎಲ್ಲೋ ಏನೋ ಎಡವಟ್ಟಾಗಿರೋದು ಗೊತ್ತಾಗಿದೆ.

ಇದರ ಬೆನ್ನಲ್ಲೇ ಬೇರೊಬ್ಬರು ನನ್ನೊಂದಿಗೆ ಫೋಟೋ ಕ್ಲಿಕ್ಕಿಸಿದರು. ಆವಾಗ ಅವರಿಗೆ ಖಚಿತವಾಯಿತು. ನಾನು ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ (Arjun Tendulkar) ಅಲ್ಲ. ಭಾರತ ತಂಡದ ಮತ್ತೋರ್ವ ಕ್ರಿಕೆಟಿಗ ಎಂದು ಎಂಬುದು. ಆ ಬಳಿಕ ಏರ್ ಹೋಸ್ಟೆಸ್ ನನ್ನ ಬಳಿ ಬಂದು ನಾಚಿಕೆಯಿಂದ ಕ್ಷಮೆಯಾಚಿಸಿದ್ದರು ಎಂದು ಸುರೇಶ್ ರೈನಾ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳನ ಸ್ವಾರಸ್ಯಕರ ಘಟನೆಯನ್ನು ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಸುರೇಶ್ ರೈನಾ ಅವರ ಬಯೋಗ್ರಾಫಿ “ಬಿಲೀವ್: ವಾಟ್ ಲೈಫ್ ಅಂಡ್ ಕ್ರಿಕೆಟ್ ಥಾಟ್ ಮಿ ” ಪುಸ್ತಕವನ್ನು ಆಧರಿಸಿ ಅವರ ಜೀವನ ಚರಿತ್ರೆಯ ಸಿನಿಮಾ ಕೂಡ ಬರುವ ಸಾಧ್ಯತೆಯಿದೆ. ಸದ್ಯ ಐಪಿಎಲ್​ನತ್ತ ತಮ್ಮ ಗಮನ ಕೇಂದ್ರೀಕರಿಸಿರುವ ರೈನಾ ಇದೇ ತಿಂಗಳು ಅಭ್ಯಾಸಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದೊಂದಿಗೆ ಯುಎಇನತ್ತ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲದೆ ಈ ಬಾರಿ ಮಹೇಂದ್ರ ಸಿಂಗ್ ಧೋನಿಗಾಗಿ ನಾವು ಕಪ್ ಗೆದ್ದು ಕೊಡಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್​ಪ್ರೀತ್ ಬುಮ್ರಾ

ಇದನ್ನೂ ಓದಿ: IPL 2021: ಐಪಿಎಲ್​ನ ಪ್ರಮುಖ ನಿಯಮ ಬದಲಿಸಿದ ಬಿಸಿಸಿಐ

ಇದನ್ನೂ ಓದಿ: IPL 2021: ಐಪಿಎಲ್ ಹೊಸ ಅಪ್ಡೇಡ್: ಆಟಗಾರರಿಗೆ ಬಿಗ್ ರಿಲೀಫ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್