ಭಾರತೀಯರು ಅತೀ ಹೆಚ್ಚು ಪ್ರೀತಿಸುವ ಟೀಮ್ ಇಂಡಿಯಾ ಪ್ಲೇಯರ್ಸ್ ಇವರಂತೆ: ಈ ಪಟ್ಟಿಯಲ್ಲಿಲ್ಲ ಧೋನಿ, ಕೊಹ್ಲಿ

ಭಾರತ ಕ್ರಿಕೆಟ್ ತಂಡದಲ್ಲಿ ಅದೆಷ್ಟೊ ಆಟಗಾರರು ಬಂದು ಹೋಗಿದ್ದಾರೆ. ಇನ್ನೂ ಕೆಲವರು ಈಗ ಮಿಂಚುತ್ತಿದ್ದಾರೆ. ಹಾಗಾದ್ರೆ ಟೀಮ್ ಇಂಡಿಯಾದಲ್ಲಿ ಆಟವಾಡಿದ ಹಾಗೂ ಆಟವಾಡುತ್ತಿರುವ ಆಟಗಾರರ ಪೈಕಿ ಭಾರತೀಯರು ಅತಿ ಹೆಚ್ಚು ಇಷ್ಟ ಪಡುವ ಕ್ರಿಕೆಟಿಗರು ಯಾರು ಎಂಬುದನ್ನು ನೋಡೋಣ…

ಭಾರತೀಯರು ಅತೀ ಹೆಚ್ಚು ಪ್ರೀತಿಸುವ ಟೀಮ್ ಇಂಡಿಯಾ ಪ್ಲೇಯರ್ಸ್ ಇವರಂತೆ: ಈ ಪಟ್ಟಿಯಲ್ಲಿಲ್ಲ ಧೋನಿ, ಕೊಹ್ಲಿ
Indian Cricketers
Follow us
TV9 Web
| Updated By: Vinay Bhat

Updated on: Aug 09, 2021 | 9:40 AM

ಕ್ರಿಕೆಟ್ ಕ್ರೀಡೆ ಇಂದು ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಭಿಮಾನಿಗಳಿಗೆ ತಮ್ಮದೆ ದೇಶದ ನಡುವಣ ಕ್ರಿಕೆಟ್ ಮ್ಯಾಚ್ ಆಗಬೇಕಂತಿಲ್ಲ. ಯಾವುದೇ ದೇಶದ ಪಂದ್ಯವಿದ್ದರೂ ಅದನ್ನು ನೋಡಿಕೊಂಡು ಎಂಜಾಯ್ ಮಾಡುತ್ತಾರೆ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್, ಟಿ-20 ಪಂದ್ಯ ಹುಟ್ಟಿದ ಮೇಲಂತು ಕ್ರಿಕೆಟ್ ಮೇಲಿನ ಕ್ರೇಜ್ ಡಬಲ್ ಆಗಿದೆ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೆ ತನ್ನದೆ ಆದ ಮೆಚ್ಚಿನ ಪ್ಲೇಯರ್ ಇದ್ದೇ ಇರುತ್ತಾನೆ. ಅವರನ್ನು ಪೂಜಿಸುವ ಮಟ್ಟಿಗೆ ಅಭಿಮಾನ ಇರುತ್ತದೆ.

ಭಾರತ ಕ್ರಿಕೆಟ್ ತಂಡದಲ್ಲಿ ಅದೆಷ್ಟೊ ಆಟಗಾರರು ಬಂದು ಹೋಗಿದ್ದಾರೆ. ಇನ್ನೂ ಕೆಲವರು ಈಗ ಮಿಂಚುತ್ತಿದ್ದಾರೆ. ಹಾಗಾದ್ರೆ ಟೀಮ್ ಇಂಡಿಯಾದಲ್ಲಿ ಆಟವಾಡಿದ ಹಾಗೂ ಆಟವಾಡುತ್ತಿರುವ ಆಟಗಾರರ ಪೈಕಿ ಭಾರತೀಯರು ಅತಿ ಹೆಚ್ಚು ಇಷ್ಟ ಪಡುವ ಕ್ರಿಕೆಟಿಗರು ಯಾರು ಎಂಬುದನ್ನು ನೋಡೋಣ…

ರಾಹುಲ್ ದ್ರಾವಿಡ್: ರಾಹುಲ್ ದ್ರಾವಿಡ್ ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್​ ಮಾತ್ರ ಅಲ್ಲ. ಗೌರವಯುತ ವ್ಯಕ್ತಿ ಕೂಡ ಹೌದು. ದಿ ವಾಲ್ ಯುವ ಕ್ರಿಕೆಟಿಗರ ಅಂಬಾಸಿಟರ್ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಎದುರಾಳಿ ಬೌಲರ್ ಇವರನ್ನು ಔಟ್ ಮಾಡಲು ಹರಸಾಹಸ ಪಡುತ್ತಿದ್ದರು. ಜೀರೋ ಹೇಟರ್ಸ್​ಗಳನ್ನು ಹೊಂದಿರುವ ಇವರನ್ನು ಅತೀ ಹೆಚ್ಚಾಗಿ ಭಾರತೀಯರು ಇಷ್ಟ ಪಡುತ್ತಾರಂತೆ.

ಜಹೀರ್ ಖಾನ್: ಕ್ರಿಕೆಟ್​ನಲ್ಲಿ ಅಥವಾ ಕ್ರಿಕೆಟ್ ಹೊರಗಡೆ ಒಂದೇ ಒಂದು ವಿವಾದವಿಲ್ಲದ ಕಂಪ್ಲೀಟ್ ಕ್ಲೀನ್ ಆಟಗಾರ ಜಹೀರ್ ಖಾನ್. ಜ್ಯಾಕ್ ಈಸ್ ಬ್ಯಾಕ್ ಎಂಬ ಪದ ಒಂದು ಕಾಲದಲ್ಲಿ ಇಡೀ ಭಾರತೀಯರಿಗೆ ಖುಷಿ ನೀಡಿದ ವಾಖ್ಯಾ. ಇವರನ್ನು ಭಾರತೀಯರು ಹೆಚ್ಚು ಪ್ರೀತಿಸುತ್ತಾರಂತೆ.

ರವೀಂದ್ರ ಜಡೇಜಾ: ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಆಟಗಾರ ಜಡೇಜಾ ನಡೆದು ಬಂದ ಜೀವನ ಮುಳ್ಳಿನ ಹಾದಿಯಂತಿತ್ತು. ಚಿಕ್ಕದಿರುವಾಗಲೆ ತಂದೆ ವಾಚ್​ಮ್ಯಾನ್​, ತಾಯಿ ಅಪಘಾತದಲ್ಲಿ ನಿಧನರಾಗಿದ್ದರು. ಇವರ ಅಕ್ಕ ಜಡೇಜಾ ಕ್ರಿಕೆಟ್ ಆಡಲು ಪ್ರೇರಣೆ ನೀಡಿದವರು. ಕಳೆದ ವಿಶ್ವಕಪ್ ಸೆಮಿಫೈನಲ್​ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಜಡ್ಡುವನ್ನು ಇಡೀ ದೇಶದ ಜನತೆ ಇಷ್ಟ ಪಡುತ್ತಿದೆ.

ಜಸ್​ಪ್ರೀತ್ ಬುಮ್ರಾ: ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ನಾಲ್ಕು ವರ್ಷ ಮುಗಿಸಿರುವ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಸೌಮ್ಯ ಸ್ವಭಾವದವರು. ಯಾವತ್ತೂ ಸಿಟ್ಟಿನಿಂದ ಇವರನ್ನು ನೋಡಿದವರೇ ಇಲ್ಲ. ನಗು ಮುಖದಿಂದಲೇ ಎಲ್ಲರ ಮನಗೆದ್ದಿರುವ ಇವರು ಟೀಂ ಇಂಡಿಯಾದ ನಂಬರ್ 1 ಬೌಲರ್ ಆಗಿದ್ದಾರೆ. ಇತ್ತೀಚೆಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರನ್ನು ಭಾರತೀಯರು ಹೆಚ್ಚು ಇಷ್ಟಪಡುತ್ತಾರಂತೆ.

ಸುರೇಶ್ ರೈನಾ: ಕಳೆದ ವರ್ಷ ಭಾರತ ಕ್ರಿಕೆಟ್ ತಂಡದಿಂದ ನೀವೃತ್ತಿ ಪಡೆದುಕೊಂಡ ಐಪಿಎಲ್​ ಹೀರೋ ಸುರೇಶ್ ರೈನಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. 33 ವರ್ಷ ಪ್ರಾಯದ ರೈನಾ 2017 ರಲ್ಲಿ ತನ್ನ ಪತ್ನಿ ಜೊತೆಗೂಡಿ ಗ್ರೇಷ್ಯಾ ರೈನಾ ಫೌಂಡೇಶನ್ ಎಂಬ ಸಂಸ್ಥೆಯನ್ನು ಕಟ್ಟಿಸಿ ಬಡ ಮಕ್ಕಳಿಗೆ ಬೆಳಕಾಗಿ ನಿಂತಿದ್ದಾರೆ. ಇವರನ್ನು ಕೂಡ ಭಾರತೀಯರು ಇಷ್ಟ ಪಡುತ್ತಾರಂತೆ.

India vs England: ಇದು ನಾಚಿಕೆಗೇಡು – ಭಾರತ ಇಂಗ್ಲೆಂಡ್ ಮೊದಲ ಟೆಸ್ಟ್​ ಡ್ರಾಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ

India vs England: ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್​ ಯಾವಾಗ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಮಾಹಿತಿ

(Indian Cricket Team No Virat Kohli and MS Dhoni Here is the most loved Indian Cricketers)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್