Yuzvendra Chahal: ಕೊರೊನಾದಿಂದ ಗುಣಮುಖರಾದ ಬೆನ್ನಲ್ಲೆ ಚಹಲ್ರಿಂದ ಪತ್ನಿ ಜೊತೆ ಭರ್ಜರಿ ಡ್ಯಾನ್ಸ್
ಶ್ರೀಲಂಕಾ ಪ್ರವಾಸದ ಮಧ್ಯೆ ಮೊದಲಿಗೆ ಕ್ರುನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂತು. ನಂತರ ಇವರ ಸಂಪರ್ಕದಲ್ಲಿದ್ದ ಇತರೆ ಆಟಗಾರರನ್ನು ಟೆಸ್ಟ್ ಮಾಡಿದಾಗ ಚಹಲ್ಗೆ ಕೂಡ ಕೋವಿಡ್ ಇರುವುದು ದೃಢಪಟ್ಟಿತ್ತು.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಸರಣಿಯ ನಡುವೆ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಈವೇಳೆ ಕೊಲಂಬೊದಲ್ಲಿ ಚಿಕಿತ್ಸೆ ಪಡೆದು ಕ್ವಾರಂಟೈನ್ ಮುಗಿಸಿ ಗುಣಮುಖರಾಗಿ ಸದ್ಯ ತವರಿಗೆ ಹಿಂತಿರುಗಿರುವ ಚಹಲ್, ಪತ್ನಿ ಧನಶ್ರೀ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಡ್ಯಾನ್ಸರ್ ಮತ್ತು ಕೊರಿಯೊಗ್ರಾಫರ್ ಆಗಿರುವ ಧನಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಸದಾ ತಮ್ಮ ಡ್ಯಾನ್ಸ್ನ ವಿಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಪತಿ ಚಹಲ್ ಹಾಗೂ ತಾಯಿಯ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ. ಬಳಿಕ ಚಹಲ್ ಕೂಡ ತಮ್ಮ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಶ್ರೀಲಂಕಾ ಪ್ರವಾಸದ ಮಧ್ಯೆ ಮೊದಲಿಗೆ ಕ್ರುನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂತು. ನಂತರ ಇವರ ಸಂಪರ್ಕದಲ್ಲಿದ್ದ ಇತರೆ ಆಟಗಾರರನ್ನು ಟೆಸ್ಟ್ ಮಾಡಿದಾಗ ಚಹಲ್ಗೆ ಕೂಡ ಕೋವಿಡ್ ಇರುವುದು ದೃಢಪಟ್ಟಿತ್ತು. ಸದ್ಯ ಇದರಿಂದ ಸಂಪೂರ್ಣ ಗುಣಮುಖರಾಗಿರುವ ಚಹಲ್ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.
ಮುಂದಿನ ತಿಂಗಳು ಮತ್ತೆ ಐಪಿಎಲ್ ಆರಂಭವಾಗಲಿದ್ದು ಚಹಾಲ್ ಸ್ವಲ್ಪ ದಿನಗಳ ವಿಶ್ರಾಂತಿ ಬಳಿಕ ಅಭ್ಯಾಸ ಶುರುಮಾಡಲಿದ್ದಾರೆ. ಅಲ್ಲದೆ ಐಪಿಎಲ್ ಮುಗಿದ ಬೆನ್ನಲ್ಲೇ ಟಿ-20 ವಿಶ್ವಕಪ್ ಕೂಡ ನಡೆಯಲಿದೆ. ಹೀಗಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಚಹಲ್ ಕಠಿಣ ಅಭ್ಯಾಸ ನಡೆಸಬೇಕಿದೆ.
ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್: ವಿಡಿಯೋ ವೈರಲ್
ಭಾರತೀಯರು ಅತೀ ಹೆಚ್ಚು ಪ್ರೀತಿಸುವ ಟೀಮ್ ಇಂಡಿಯಾ ಪ್ಲೇಯರ್ಸ್ ಇವರಂತೆ: ಈ ಪಟ್ಟಿಯಲ್ಲಿಲ್ಲ ಧೋನಿ, ಕೊಹ್ಲಿ
(Yuzvendra Chahal enjoys trending dance moves with wife Dhanashree video goes viral)