ಸ್ಟಿಂಗ್ ಆಪರೇಷನ್​ನಲ್ಲಿ ಸಿಕ್ಕಿಬಿದ್ದಿರುವ ಚೇತನ್ ಶರ್ಮಾ ತಲೆದಂಡ? ಬಿಸಿಸಿಐ ಮುಂದಿನ ನಡೆ ಏನು?

Chetan Sharma: ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಚೇತನ್ ಅವರ ಭವಿಷ್ಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಟಿಂಗ್ ಆಪರೇಷನ್​ನಲ್ಲಿ ಸಿಕ್ಕಿಬಿದ್ದಿರುವ ಚೇತನ್ ಶರ್ಮಾ ತಲೆದಂಡ? ಬಿಸಿಸಿಐ ಮುಂದಿನ ನಡೆ ಏನು?
ಚೇತನ್ ಶರ್ಮಾ, ಜಯ್ ಶಾ
Edited By:

Updated on: Feb 15, 2023 | 10:28 AM

ಭಾರತ ಕ್ರಿಕೆಟ್ ತಂಡದ ಆಟಗಾರರ ಆಯ್ಕೆಯ ಜವಾಬ್ದಾರಿಯುತ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ (Chetan Sharma) ಸ್ಟಿಂಗ್ ಆಪರೇಷನ್​ನಲ್ಲಿ ನೀಡಿರುವ ಹೇಳಿಕೆಗಳು ಇದೀಗ ಭಾರತ ಕ್ರಿಕೆಟ್​ನಲ್ಲಿ ಸಂಚಲನ ಮೂಡಿಸಿವೆ. ಸುದ್ದಿ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಕೆಲವು ಶಾಕಿಂಗ್ ಸ್ಟೇಟ್​ಮೆಂಟ್ ನೀಡಿರುವ ಚೇತನ್​ ಶರ್ಮಾ ಅವರ ಹುದ್ದೆಯ ತಲೆದಂಡವಾಗಲಿದೆ ಎಂಬ ಮಾತು ಕೇಳಿಬರಲಾರಂಭಿಸಿದೆ. ಕಳೆದ ತಿಂಗಳು ಮತ್ತೊಮ್ಮೆ ಹಿರಿಯರ ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರರಾಗಿ ನೇಮಕಗೊಂಡ ಮಾಜಿ ವೇಗದ ಬೌಲರ್ ಚೇತನ್ ಶರ್ಮಾ, ಈ ಕುಟುಕು ಕಾರ್ಯಾಚರಣೆಯಲ್ಲಿ ಟೀಂ ಇಂಡಿಯಾ (Team India) ಆಟಗಾರರ ಫಿಟ್‌ನೆಸ್ ಬಗ್ಗೆ ಆಘಾತಕ್ಕಾರಿ ಹೇಳಿಕೆಗಳನ್ನು ನೀಡಿದ್ದರು. ಇದರೊಂದಿಗೆ ಬೋರ್ಡ್ ವರ್ಸಸ್ ವಿರಾಟ್ ಕೊಹ್ಲಿ (Virat Kohli) ವಿಷಯದ ಬಗ್ಗೆಯೂ ಚೇತನ್ ಮಾತನಾಡಿದ್ದು, ಇದು ಕ್ರಿಕೆಟ್ ಅಭಿಮಾನಿಗಳು ಮತ್ತು ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈಗ ಬಿಸಿಸಿಐ ಕ್ರಮ ಕೈಗೊಳ್ಳುತ್ತಾ?

ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ರಾಷ್ಟ್ರೀಯ ಆಯ್ಕೆದಾರರು ಮಂಡಳಿಯ ಒಪ್ಪಂದಕ್ಕೆ ಬದ್ಧರಾಗಿರುವುದರಿಂದ, ಮಂಡಳಿಯ ಅನುಮತಿ ಇಲ್ಲದೆ, ಅವರು ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ. ಈ ಕಾರಣದಿಂದಾಗಿ ಬಿಸಿಸಿಐ ಅವರ ತಲೆದಂಡಕ್ಕೆ ಮುಂದಾಗಬಹುದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಪಿಟಿಐ, ಶರ್ಮಾ ಅವರನ್ನು ಸಂಪರ್ಕಿಸಿದಾಗ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಚೇತನ್ ಅವರ ಭವಿಷ್ಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಹುಡುಗನ ಫೀಲ್ಡಿಂಗ್​ಗೆ ಫಿದಾ ಆದ ಕ್ರಿಕೆಟ್ ದೇವರು; ಟ್ವೀಟ್​ನಲ್ಲಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ

ದೊಡ್ಡ ಆರೋಪ ಮಾಡಿದ ಚೇತನ್ ಶರ್ಮಾ?

ಈ ಕುಟುಕು ಕಾರ್ಯಾಚರಣೆಯಲ್ಲಿ, ಚೇತನ್ ಶರ್ಮಾ ಅವರು ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದು, ಕೋಚ್‌ಗಳಾದ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಜತೆಗಿನ ಗೌಪ್ಯ ಸಂಭಾಷಣೆಯನ್ನೂ ಅವರು ಬಹಿರಂಗಪಡಿಸಿದ್ದಾರೆ. 80 ರಿಂದ 85 ರಷ್ಟು ಫಿಟ್ ಆಗಿದ್ದರೂ ಆಟಗಾರರು ಕ್ರಿಕೆಟ್‌ಗೆ ಶೀಘ್ರ ಮರಳಲು ಚುಚ್ಚುಮದ್ದು ತೆಗೆದುಕೊಳ್ಳುತ್ತಾರೆ ಎಂದು ಶರ್ಮಾ ಆರೋಪಿಸಿದ್ದಾರೆ.

ಇದು ಮಾತ್ರವಲ್ಲದೆ, ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಬುಮ್ರಾ ಮರಳುವ ಬಗ್ಗೆ ತಮ್ಮ ಮತ್ತು ತಂಡದ ನಿರ್ವಹಣೆಯ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಈಗ ಶರ್ಮಾ ನೀಡಿರುವ ಹೇಳಿಕೆಯ ಪ್ರಕಾರ, ಬುಮ್ರಾ ಪ್ರಸ್ತುತ ತಂಡದಿಂದ ಹೊರಗುಳಿದಿದ್ದು, ನಾಲ್ಕು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಂತರದ ಮೂರು-ಒಡಿಐ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ