AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

#HarGharTiranga: ಪ್ರಧಾನಿ ಕರೆಗೆ ಓಗೊಟ್ಟು ಟ್ವಿಟರ್​ನಲ್ಲಿ ಬ್ಲ್ಯೂ ಟಿಕ್ ಕಳೆದುಕೊಂಡ ಬಿಸಿಸಿಐ

BCCI: 77ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಪ್ರಧಾನಿ ಮೋದಿಯವರು #HarGharTiranga (ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ) ಅಭಿಯಾನ ಆರಂಭಿಸಿದ್ದು, ಈ ಅಭಿಯಾನದಡಿ ಪ್ರತಿಯೊಬ್ಬ ಭಾರತೀಯರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತ್ರಿವರ್ಣ ಧ್ವಜವನ್ನು ಪ್ರೊಫೈಲ್ ಫೋಟೋವನ್ನಾಗಿ ಇರಿಸಲು ಮನವಿ ಮಾಡಿದ್ದರು. ಹಾಗಾಗಿ ಪ್ರಧಾನಿ ಮೋದಿಯವರ ಕರೆಗೆ ಬೆಂಬಲ ಸೂಚಿಸಿದ ಬಿಸಿಸಿಐ ತನ್ನ ಪ್ರೊಫೈಲ್ ಫೋಟೋವನ್ನು ಬದಲಾಯಿಸಿತ್ತು.

#HarGharTiranga: ಪ್ರಧಾನಿ ಕರೆಗೆ ಓಗೊಟ್ಟು ಟ್ವಿಟರ್​ನಲ್ಲಿ ಬ್ಲ್ಯೂ ಟಿಕ್ ಕಳೆದುಕೊಂಡ ಬಿಸಿಸಿಐ
ಬಿಸಿಸಿಐ ಟ್ವಿಟರ್ ಖಾತೆ, ಪ್ರಧಾನಿ ಮೋದಿ.
ಪೃಥ್ವಿಶಂಕರ
|

Updated on:Aug 14, 2023 | 9:10 AM

Share

77ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ದೇಶವಾಸಿಗಳಿಗೆ ಕೊಟ್ಟಿರುವ ಕರೆಗೆ ಓಗೊಟ್ಟ ಬಿಸಿಸಿಐ (BCCI), ಏಷ್ಯಾಕಪ್​ಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಧಿಕೃತ ಖಾತೆಯಾದ ಟ್ವಿಟರ್​ನಲ್ಲಿ (Twitter) ಬ್ಯ್ಲೂ ಟಿಕ್ (Blue Tick) ನಷ್ಟ ಅನುಭವಿಸಿದೆ. ವಾಸ್ತವವಾಗಿ 77ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಪ್ರಧಾನಿ ಮೋದಿಯವರು #HarGharTiranga (ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ) ಅಭಿಯಾನ ಆರಂಭಿಸಿದ್ದು, ಈ ಅಭಿಯಾನದಡಿ ಪ್ರತಿಯೊಬ್ಬ ಭಾರತೀಯರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತ್ರಿವರ್ಣ ಧ್ವಜವನ್ನು ಪ್ರೊಫೈಲ್ ಫೋಟೋವನ್ನಾಗಿ ಇರಿಸಲು ಮನವಿ ಮಾಡಿದ್ದರು. ಹಾಗಾಗಿ ಪ್ರಧಾನಿ ಮೋದಿಯವರ ಕರೆಗೆ ಬೆಂಬಲ ಸೂಚಿಸಿದ ಬಿಸಿಸಿಐ ತನ್ನ ಪ್ರೊಫೈಲ್ ಫೋಟೋವನ್ನು ಬದಲಾಯಿಸಿತ್ತು. ಹೀಗಾಗಿ ಎಕ್ಸ್ (ಟ್ವಿಟರ್) ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡ ಬಿಸಿಸಿಐಗೆ ಈ ಹಿಂದೆ ನೀಡಿದ ಬ್ಲ್ಯೂಟಿಕ್ ಅನ್ನು ಎಕ್ಸ್ (ಟ್ವಿಟರ್) ತೆಗೆದುಹಾಕಿದೆ.

ಹೊಸ ನಿಯಮಗಳ ಪ್ರಕಾರ, ಬ್ಲ್ಯೂಟಿಕ್ ಸೌಲಭ್ಯ ಪಡೆದುಕೊಂಡ ಟ್ವಿಟರ್ ಬಳಕೆದಾರರು ತಮ್ಮ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದರೆ, ಅವರಿಗೆ ನೀಡಲಾಗಿದ್ದ ಬ್ಲೂ ಟಿಕ್‌ ಅನ್ನು ತೆಗೆದುಹಾಕಲಾಗುತ್ತದೆ. ಈ ಕಾರಣದಿಂದಾಗಿ ಇದೀಗ ತನ್ನ ಪ್ರೊಫೈಲ್ ಫೋಟೋವನ್ನು ತ್ರಿವಣ ಧ್ವಜಕ್ಕೆ ಬದಲಿಸಿರುವ ಬಿಸಿಸಿಐನ ಬ್ಲೂ ಟಿಕ್ ಅನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ. ವಾಸ್ತವವಾಗಿ ಎಕ್ಸ್ (ಟ್ವಿಟರ್) ನೀಡುವ ಈ ಬ್ಲೂ ಟಿಕ್, ಸೋಶಿಯಲ್ ಮೀಡಿಯಾದಲ್ಲಿ ಇದು ಬಳಕೆದಾರರ ಅಧಿಕೃತ ಖಾತೆ ಎಂಬುದನ್ನು ಸೂಚಿಸುತ್ತದೆ. ಇದೀಗ ಬ್ಲೂ ಟಿಕ್ ಕಳೆದುಕೊಂಡಿರುವ ಬಿಸಿಸಿಐಗೆ, ಟ್ವಿಟರ್​ನಲ್ಲಿ ಕೊಂಚ ಹಿನ್ನಡೆಯುಂಟಾಗಿದೆ.

2021-22ರ ಹಣಕಾಸು ವರ್ಷದಲ್ಲಿ ಬಿಸಿಸಿಐ ಕಟ್ಟಿದ ತೆರಿಗೆ ಎಷ್ಟು ಸಾವಿರ ಕೋಟಿ ಗೊತ್ತಾ? ಇಲ್ಲಿದೆ ಕಳೆದ 5 ವರ್ಷಗಳ ಆದಾಯದ ಲೆಕ್ಕ

ಮೂರು ಖಾತೆಗಳ ನೀಲಿ ಟಿಕ್ ಮಾಯ

ಪ್ರಧಾನಿಯವರ ಅಭಿಯಾನದಡಿಯಲ್ಲಿ ಬಿಸಿಸಿಐ, ಪುರುಷ, ಮಹಿಳಾ ಮತ್ತು ದೇಶೀಯ ಕ್ರಿಕೆಟ್‌ನ ಅಧಿಕೃತ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದೆ. ಹೀಗಾಗಿ ಈ ಮೂರು ಖಾತೆಗಳ ನೀಲಿ ಟಿಕ್ ಅನ್ನು ತೆಗೆದುಹಾಕಲಾಗಿದೆ. ಅದಾಗ್ಯೂ ಇನ್ನು ನಾಲ್ಕೈದು ದಿನಗಳಲ್ಲಿ ಈ ಬ್ಲ್ಯೂಟಿಕ್ ಮತ್ತೆ ಬಿಸಿಸಿಐ ಖಾತೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

ಟ್ವಿಟರ್​ ನಿಯಮ ಹೇಳುವುದೇನು?

ಹೊಸ ನೀತಿಯ ಪ್ರಕಾರ, ಬ್ಯ್ಲೂ ಟಿಕ್ ಪಡೆದುಕೊಂಡಿರುವ ಟ್ವಿಟರ್ ಖಾತೆಯ ಬಳಕೆದಾರರು ತಮ್ಮ ಖಾತೆಯಲ್ಲಿ ಸೇರಿಸುವ ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಅಥವಾ ಪ್ರೊಫೈಲ್ ಹೆಸರು, ಪ್ರೊಫೈಲ್ ಫೋಟೋವನ್ನು ಬದಲಾಯಿಸಿದರೆ ನೀಲಿ ಟಿಕ್ ಅನ್ನು ತೆಗೆದುಹಾಕಲಾಗುತ್ತದೆ. ಅಲ್ಲದೆ, ಅಧಿಕೃತ ಬಳಕೆದಾರರ ಟ್ವಿಟರ್ ಖಾತೆ ಆರು ತಿಂಗಳವರೆಗೆ ಸಕ್ರಿಯವಾಗಿಲ್ಲದಿದ್ದರೆ, ಆ ಖಾತೆಯಿಂದ ನೀಲಿ ಟಿಕ್ ಅನ್ನು ತೆಗೆದುಹಾಕಲಾಗುತ್ತದೆ.

ಈ ಮೊದಲು ಸರ್ಕಾರಗಳು, ಕಂಪನಿಗಳು ಅಥವಾ ಸೆಲೆಬ್ರಿಟಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ನೀಲಿ ಟಿಕ್ ಅನ್ನು ಪಡೆಯುತ್ತಿದ್ದರು. ಆದರೆ ಎಲಾನ್ ಮಾಸ್ಕ್ ಟ್ವಿಟರ್ ಅನ್ನು ಖರೀದಿಸಿದ ಬಳಿಕ ಟ್ವಿಟರ್ ಖಾತೆಯಲ್ಲಿ ನೀಲಿ ಟಿಕ್ ಪಡೆಯಬೇಕೆಂದರೆ ಇಂತಿಷ್ಟು ಹಣ ಪಾವತಿಸಬೇಕೆಂಬ ನಿಯಮ ಹೊರಡಿಸಿದರು. ಹಾಗಾಗಿ ಹಣ ಪಾವತಿಸಿ ಯಾರು ಬೇಕಾದರೂ ಈಗ ಬ್ಲೂ ಟಿಕ್ ಪಡೆಯಬಹುದಾಗಿದೆ. ಟ್ವಿಟರ್​ನ ಈ ನಿರ್ಧಾರದ ಬಳಿಕ ಇನ್​​ಸ್ಟಾಗ್ರಾಮ್​ನಲ್ಲಿ ಈ ನಿಯಮವನ್ನು ಅಳವಡಿಸಲಾಗಿದೆ. ಆದರೆ ಫೇಸ್‌ಬುಕ್ ಮಾತ್ರ ಇನ್ನೂ ಕಲಾವಿದರು ಮತ್ತು ಕ್ರೀಡಾಪಟುಗಳಿಗೆ ಉಚಿತವಾಗಿ ನೀಲಿ ಟಿಕ್‌ಗಳನ್ನು ಪಡೆಯಲು ಅನುಮತಿಸುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:07 am, Mon, 14 August 23

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್