ಭಾರತಕ್ಕೆ ಕೋವಿಡ್ ಆಗಮನದ ನಂತರ ದೇಶೀಯ ಕ್ರಿಕೆಟ್ ಸಾಕಷ್ಟು ನಷ್ಟ ಅನುಭವಿಸಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಹೇಗೋ ಶುರುವಾಗಿತ್ತು ಆದರೆ ದೇಶೀಯ ಪಂದ್ಯಾವಳಿಗಳನ್ನು ಪ್ರಾರಂಭಿಸಲು ವಿಳಂಬವಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಒಂದು ವರ್ಷದ ನಂತರ ಈ ವರ್ಷ ರಣಜಿ ಟ್ರೋಫಿ (Ranji Trophy)ಯನ್ನು ಆಯೋಜಿಸಿತ್ತು. ಈಗ ಅದೇ ರೀತಿ, ಬಿಸಿಸಿಐ ಎರಡು ದೊಡ್ಡ ದೇಶೀಯ ಪಂದ್ಯಾವಳಿಗಳನ್ನು ಪುನರಾರಂಭಿಸಲು ಯೋಜನೆ ನಡೆಸುತ್ತಿದೆ. ಪ್ರತಿಷ್ಠಿತ ದುಲೀಪ್ ಟ್ರೋಫಿ ಮತ್ತು ಇರಾನಿ ಕಪ್ (Duleep Trophy and Irani Cup) ಅನ್ನು ಪುನರಾರಂಭಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಅದೇ ಸಮಯದಲ್ಲಿ, ಮುಂಬರುವ ದೇಶೀಯ ಸೀಸನ್ನಲ್ಲಿ ರಣಜಿ ಟ್ರೋಫಿಯನ್ನು ಮೊದಲು ಆಯೋಜಿಸಲು ಪ್ಲಾನ್ ಮಾಡುತ್ತಿದೆ.
ದುಲೀಪ್ ಟ್ರೋಫಿ ಮತ್ತು ಇರಾನಿ ಕಪ್ ಅನ್ನು ಕಳೆದ ಮೂರು ಸೀಸನ್‌ಗಳಿಂದ ನಡೆಸಲಾಗಿಲ್ಲ. ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ಬಿಸಿಸಿಐ ಮೊದಲ ಬಾರಿಗೆ ರಣಜಿ ಪಂದ್ಯಾವಳಿಯನ್ನು ರದ್ದುಗೊಳಿಸಬೇಕಾಯಿತು. ಗುರುವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಈ ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ. ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅವರು 2022-23 ರಲ್ಲಿ ಇಡೀ ದೇಶೀಯ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಈ ಬಾರಿ ನಡೆದ ರಣಜಿಯಲ್ಲಿ ಮಧ್ಯಪ್ರದೇಶ ಮೊದಲ ಬಾರಿಗೆ ರಣಜಿ ಚಾಂಪಿಯನ್ ಆಗಿತ್ತು.
ಇದು ಸಂಪೂರ್ಣ ಯೋಜನೆಯಾಗಿದೆ
ಸೆಪ್ಟೆಂಬರ್ 8 ರಿಂದ ಆಡುವ ಸಾಧ್ಯತೆಯಿರುವ ದುಲೀಪ್ ಟ್ರೋಫಿಯೊಂದಿಗೆ ಪುರುಷರ ಸೀನಿಯರ್ ಸೀಸನ್ ಅನ್ನು ಪ್ರಾರಂಭಿಸಲು ಮಂಡಳಿಯು ನೋಡುತ್ತಿದೆ. ಇದರೊಂದಿಗೆ, ಇರಾನಿ ಕಪ್ ಅನ್ನು ಅಕ್ಟೋಬರ್ 1 ರಿಂದ 5 ರವರೆಗೆ ಆಯೋಜಿಸಲು BCCI ಚಿಂತಿಸುತ್ತಿದೆ. ಇದಕ್ಕೂ ಮೊದಲು ದುಲೀಪ್ ಟ್ರೋಫಿಯನ್ನು ನಾಕೌಟ್ ಮೂಲಕ ಐದು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಆದರೆ ನಂತರ ಇದು ಮೂರು-ತಂಡಗಳ ಪಂದ್ಯವಾಯಿತು, ರೌಂಡ್-ರಾಬಿನ್ ಸ್ವರೂಪದ ಆಧಾರದ ಮೇಲೆ ಅಗ್ರ ಎರಡು ತಂಡಗಳು ಫೈನಲ್‌ಗೆ ಮುನ್ನಡೆಯುತ್ತವೆ. ಇರಾನಿ ಕಪ್‌ನಲ್ಲಿ ಪ್ರಸ್ತುತ ರಣಜಿ ಟ್ರೋಫಿ ಚಾಂಪಿಯನ್ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಎದುರಿಸಲಿದೆ.
ಈ ವಿಷಯಗಳ ಬಗ್ಗೆ ಚರ್ಚೆ
ಸೈಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಟ್ರೋಫಿಯನ್ನು ಆಯೋಜಿಸುವ ಆಯ್ಕೆಯ ಬಗ್ಗೆಯೂ ಚರ್ಚಿಸಲಾಗಿದೆ. ಮುಷ್ತಾಕ್ ಅಲಿ ಟ್ರೋಫಿ (T20) ಯನ್ನು ಅಕ್ಟೋಬರ್ 11 ರಿಂದ ಪ್ರಾರಂಭಿಸುತ್ತಿದ್ದು, ವಿಜಯ್ ಹಜಾರೆ ಟ್ರೋಫಿ (ODI ಸ್ವರೂಪ) ನವೆಂಬರ್ 12 ರಿಂದ ನಿರೀಕ್ಷಿಸಲಾಗಿದೆ. ರಣಜಿ ಟ್ರೋಫಿ ಡಿಸೆಂಬರ್ 13 ರಿಂದ ಪ್ರಾರಂಭವಾಗಬಹುದು, ನಾಕೌಟ್ ಪಂದ್ಯಗಳು ಫೆಬ್ರವರಿ 1 ರಿಂದ ಆಡಲ್ಪಡುತ್ತವೆ. ಮುಂಬರುವ ಸೀಸನ್ನಿಂದ 16 ವರ್ಷದೊಳಗಿನ ಯುವತಿಯರ ಕ್ರಿಕೆಟ್ ಪ್ರಾರಂಭಿಸಲಾಗುವುದು ಎಂದು ಗಂಗೂಲಿ ಹೇಳಿದರು.
Published On - 4:07 pm, Fri, 22 July 22