AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup2022: ಏಷ್ಯಾ ಕಪ್ ಆಯೋಜನೆಗೆ ಅಧಿಕೃತ ಸ್ಥಳ ನಿಗದಿ! ಗಂಗೂಲಿ ನೀಡಿದ್ರು ಬಿಗ್​ ಅಪ್​ಡೇಟ್

Asia Cup2022: ಏಷ್ಯಾ ಕಪ್ ಆರಂಭವಾಗುವ ಸಮಯಕ್ಕೆ ಯುಎಇಯಲ್ಲಿ ಮಳೆಯಾಗುವ ಸಂಭವ ತೀರ ಕಡಿಮೆ ಹಾಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಏಷ್ಯಾ ಕಪ್ ನಡೆಯಲಿದೆ ಎಂದು ಗಂಗೂಲಿ ಸುದ್ದಿಗಾರರಿಗೆ ತಿಳಿಸಿದರು.

Asia Cup2022: ಏಷ್ಯಾ ಕಪ್ ಆಯೋಜನೆಗೆ ಅಧಿಕೃತ ಸ್ಥಳ ನಿಗದಿ! ಗಂಗೂಲಿ ನೀಡಿದ್ರು ಬಿಗ್​ ಅಪ್​ಡೇಟ್
ಪ್ರಾತಿನಿಧಿಕ ಚಿತ್ರ
TV9 Web
| Updated By: ಪೃಥ್ವಿಶಂಕರ|

Updated on:Jul 21, 2022 | 10:34 PM

Share

ಈ ವರ್ಷ ಆಗಸ್ಟ್‌ನಲ್ಲಿ ಏಷ್ಯಾಕಪ್ (Asia Cup2022) ನಡೆಯಬೇಕಿದ್ದರೂ, ಕಳೆದ ಕೆಲವು ದಿನಗಳಿಂದ ಅದರ ಬಗ್ಗೆ ಅನುಮಾನದ ವಾತಾವರಣವಿದೆ. ಇದಕ್ಕೆ ಕಾರಣ ಶ್ರೀಲಂಕಾದ ರಾಜಕೀಯ ವಾತಾವರಣ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಈ ಬಗ್ಗೆ ದೊಡ್ಡ ಮಾಹಿತಿ ನೀಡಿದ್ದಾರೆ. ಏಷ್ಯಾ ಕಪ್ ಈಗ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ ಎಂದು ಗಂಗೂಲಿ ಗುರುವಾರ ಹೇಳಿದ್ದಾರೆ. ಈ ಮೊದಲು ಈ ಟೂರ್ನಿಯನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಮಂಡಳಿಯ ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಗಂಗೂಲಿ ಈ ಮಾಹಿತಿ ನೀಡಿದರು.

ಏಷ್ಯಾ ಕಪ್ ಆರಂಭವಾಗುವ ಸಮಯಕ್ಕೆ ಯುಎಇಯಲ್ಲಿ ಮಳೆಯಾಗುವ ಸಂಭವ ತೀರ ಕಡಿಮೆ ಹಾಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಏಷ್ಯಾ ಕಪ್ ನಡೆಯಲಿದೆ ಎಂದು ಗಂಗೂಲಿ ಸುದ್ದಿಗಾರರಿಗೆ ತಿಳಿಸಿದರು.

ಎಸ್‌ಎಲ್‌ಸಿ ಈ ಮಾಹಿತಿ ನೀಡಿದೆ

ಇದನ್ನೂ ಓದಿ
Image
CWG 2022: ಕಾಮನ್‌ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಮಹಿಳಾ ಸ್ಟಾರ್ ಕ್ರಿಕೆಟರ್​ಗೆ ಕೊರೊನಾ
Image
IND vs WI: ಕನ್ನಡಿಗ ಕೆಎಲ್ ರಾಹುಲ್​ಗೆ ಕೊರೊನಾ ಸೋಂಕು..! ವಿಂಡೀಸ್ ಪ್ರವಾಸಕ್ಕೆ ಗೈರು?
Image
ಬಿಸಿಸಿಐನಲ್ಲಿ ದಾದಾ- ಜೈ ಶಾ ಪಾರುಪತ್ಯ; ಮೇಲ್ಮನವಿ ವಿಚಾರಣೆ ಒಂದು ವಾರ ಮುಂದೂಡಿದ ಸುಪ್ರೀಂ ಕೋರ್ಟ್

ದೇಶದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದಾಗಿ ಮುಂಬರುವ ಏಷ್ಯಾ ಕಪ್‌ನ ಟಿ 20 ಆವೃತ್ತಿಯನ್ನು ಆಯೋಜಿಸುವ ಸ್ಥಿತಿಯಲ್ಲಿ ಮಂಡಳಿಯು ಇರುವುದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಬುಧವಾರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸ್‌ಸಿಸಿ) ಗೆ ತಿಳಿಸಿದೆ. ಪ್ರಸ್ತುತ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಕ್ರಿಕೆಟ್ ಇತ್ತೀಚೆಗೆ ಲಂಕಾ ಪ್ರೀಮಿಯರ್ ಲೀಗ್‌ನ ಮೂರನೇ ಹಂತವನ್ನು ಮುಂದೂಡಿತ್ತು. ಏಷ್ಯಾ ಕಪ್ (ಟಿ20) ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ.

ಎಸಿಸಿ ಅಧಿಕಾರಿ ಈ ವಿಷಯ ತಿಳಿಸಿದ್ದಾರೆ

ದೇಶದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಕಾರಣ ಮುಂಬರುವ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಆಯೋಜಿಸುವ ಸ್ಥಿತಿಯಲ್ಲಿ ಮಂಡಳಿಯು ಇಲ್ಲ ಎಂದು ಎಸ್‌ಎಲ್‌ಸಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಬುಧವಾರ ತನ್ನ ವರದಿಯಲ್ಲಿ ತಿಳಿಸಿದೆ. ಪಿಟಿಐ ಮೂಲವನ್ನು ಉಲ್ಲೇಖಿಸಿ, “ತಮ್ಮ ದೇಶದಲ್ಲಿ ಪ್ರಸ್ತುತ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ, ವಿಶೇಷವಾಗಿ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ, ಈ ದೊಡ್ಡ ಆರು ತಂಡಗಳ ಈವೆಂಟ್ ಅನ್ನು ಆಯೋಜಿಸುವುದು ಕಷ್ಟ ಸಾಧ್ಯ ಎಂದು ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ.

ಯುಎಇ ಅಥವಾ ಇನ್ನಾವುದೇ ದೇಶದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಬಯಸುವುದಾಗಿ ಎಸ್‌ಎಲ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ಏಷ್ಯಾ ಕಪ್ ಅನ್ನು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಎಸಿಸಿ ಇದನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ಯುಎಇ ಕೂಡ ಏಷ್ಯಾ ಕಪ್ ಆಯೋಜನೆಗೆ ಅಂತಿಮ ಪರ್ಯಾಯ ಸ್ಥಳವಲ್ಲ, ಮತ್ತೊಂದು ದೇಶವೂ ಇರಬಹುದು ಅಥವಾ ಭಾರತವೂ ಆಗಿರಬಹುದು, ಏಕೆಂದರೆ ಎಸಿಸಿ ಮತ್ತು ಶ್ರೀಲಂಕಾ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ಅಂತಿಮ ಅನುಮೋದನೆಗಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳೊಂದಿಗೆ ಮೊದಲು ಮಾತನಾಡಬೇಕಾಗುತ್ತದೆ ಎಂದು ಅಧಿಕಾರಿ ಹೇಳಿದರು.

Published On - 10:26 pm, Thu, 21 July 22

ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್