ICC World Cup: ಎಲ್ಲೆ ಹೋದರು ಟೀಮ್ ಇಂಡಿಯಾ ಜೊತೆಗೇ ಸಾಗುತ್ತಿದ್ದಾರೆ ಅಜಿತ್ ಅಗರ್ಕರ್: ಕಾರಣವೇನು?

|

Updated on: Oct 10, 2023 | 7:54 AM

Ajit Agarkar travels with Team India: ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನವೆ ಅಜಿತ್ ಅಗರ್ಕರ್ ಭಾರತ ಕ್ರಿಕೆಟ್ ತಂಡದೊಂದಿಗೆ ಇದ್ದಾರೆ. ವಾಸ್ತವವಾಗಿ, ಅವರು ಏಷ್ಯಾಕಪ್‌ನಿಂದಲೂ ತಂಡದಲ್ಲಿದ್ದಾರೆ. ಚೇತನ್ ಶರ್ಮಾ ಮತ್ತು ಶಿವ ಸುಂದರ್ ದಾಸ್ ಅವರಿಗಿಂತ ಭಿನ್ನವಾಗಿ, ಮಾಜಿ ಅಗರ್ಕರ್ ಸದಾ ತಂಡದೊಂದಿಗೆ ಪ್ರಯಾಣಿಸುತ್ತಿದ್ದಾರೆ. ಬುಧವಾರದ ಭಾರತ-ಅಫ್ಘಾನ್ ಪಂದ್ಯಕ್ಕೆ ಮುಂಚಿತವಾಗಿ ಅವರು ತಂಡದೊಂದಿಗೆ ದೆಹಲಿಗೆ ಕೂಡ ಪ್ರಯಾಣಿಸಿದ್ದಾರೆ.

ICC World Cup: ಎಲ್ಲೆ ಹೋದರು ಟೀಮ್ ಇಂಡಿಯಾ ಜೊತೆಗೇ ಸಾಗುತ್ತಿದ್ದಾರೆ ಅಜಿತ್ ಅಗರ್ಕರ್: ಕಾರಣವೇನು?
Ajit Agarkar
Follow us on

ಐಸಿಸಿ ಏಕದಿನ ವಿಶ್ವಕಪ್ (ICC ODI World Cup) ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿ ಆಗಿದೆ. ಇದೀಗ ಟೀಮ್ ಇಂಡಿಯಾ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಅಕ್ಟೋಬರ್ 11 ರಂದು ಭಾರತ ತಂಡ ದೆಹಲಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೆಣೆಸಾಟ ನಡೆಸಲಿದೆ. ಇದಕ್ಕಾಗಿ ಇದೀಗ ರೋಹಿತ್ ಶರ್ಮಾ ಪಡೆ ಡೆಲ್ಲಿಗೆ ತಲುಪಿದ್ದಾರೆ. ವಿಶೇಷ ಎಂದರೆ ಇಲ್ಲಿ ಟೀಮ್ ಇಂಡಿಯಾ ಆಟಗಾರರ ಜೊತೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಕೂಡ ಪ್ರಯಾಣ ಬೆಳೆಸಿದ್ದಾರೆ.

ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನವೆ ಅಜಿತ್ ಅಗರ್ಕರ್ ಭಾರತ ಕ್ರಿಕೆಟ್ ತಂಡದೊಂದಿಗೆ ಇದ್ದಾರೆ. ವಾಸ್ತವವಾಗಿ, ಅವರು ಏಷ್ಯಾಕಪ್‌ನಿಂದಲೂ ತಂಡದಲ್ಲಿದ್ದಾರೆ. ಚೇತನ್ ಶರ್ಮಾ ಮತ್ತು ಶಿವ ಸುಂದರ್ ದಾಸ್ ಅವರಿಗಿಂತ ಭಿನ್ನವಾಗಿ, ಅಗರ್ಕರ್ ಸದಾ ತಂಡದೊಂದಿಗೆ ಪ್ರಯಾಣಿಸುತ್ತಿದ್ದಾರೆ. ಬುಧವಾರದ ಭಾರತ-ಅಫ್ಘಾನ್ ಪಂದ್ಯಕ್ಕೆ ಮುಂಚಿತವಾಗಿ ಅವರು ತಂಡದೊಂದಿಗೆ ದೆಹಲಿಗೆ ಕೂಡ ತೆರಳಿದ್ದಾರೆ.

ಇದನ್ನೂ ಓದಿ
ವಿಶ್ವಕಪ್​ನಲ್ಲಿಂದು ಡಬಲ್ ಧಮಾಕ: ಪಾಕಿಸ್ತಾನ ಪಂದ್ಯದ ಮೇಲೆ ಎಲ್ಲರ ಕಣ್ಣು
ಮಿಚೆಲ್ ಮ್ಯಾಜಿಕ್: ನ್ಯೂಝಿಲೆಂಡ್ ತಂಡಕ್ಕೆ ಭರ್ಜರಿ ಜಯ
ಟೀಮ್ ಇಂಡಿಯಾದ 2ನೇ ಪಂದ್ಯಕ್ಕೂ ಶುಭ್​ಮನ್ ಗಿಲ್ ಅಲಭ್ಯ
VIDEO: ಭರ್ಜರಿ ಪ್ರದರ್ಶನ: ಚಿನ್ನದ ಪದಕ ಗೆದ್ದ ವಿರಾಟ್ ಕೊಹ್ಲಿ

ದೆಹಲಿಗೆ ತಲುಪಿದ ಟೀಮ್ ಇಂಡಿಯಾ ಆಟಗಾರರ ವಿಡಿಯೋ:

 

ಮುಖ್ಯ ಆಯ್ಕೆಗಾರರಾಗಿ ಅಧಿಕಾರ ವಹಿಸಿಕೊಂಡ ನಂತರ, ಅಜಿತ್ ಅಗರ್ಕರ್ ಅವರಿಗೆ ಹೆಚ್ಚು ಸಮಯ ಸಿಕ್ಕಿಲ್ಲ. ಐರ್ಲೆಂಡ್ ಪ್ರವಾಸ ಮತ್ತು ಏಷ್ಯಾಕಪ್, ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡುವುದು ಅವರ ತಕ್ಷಣದ ಕೆಲಸವಾಗಿತ್ತು. ಸತತವಾಗಿ ಬ್ಯುಸಿಯಾಗಿರುವ ಅಗರ್ಕರ್ ಇದೀಗ ಭಾರತ ತಂಡ ಎಲ್ಲೆಲ್ಲಿ ಹೋಗುತ್ತೊ ಅಲ್ಲೆಲ್ಲ ಪ್ರಯಾಣಿಸುತ್ತಿದ್ದಾರೆ.

ಭಾರತ- ಆಸೀಸ್ ಕಾಳಗದಲ್ಲಿ ಸೃಷ್ಟಿಯಾದ ಅಗತ್ಯ- ಅನಗತ್ಯ ದಾಖಲೆಗಳ ಪಟ್ಟಿ ಇಲ್ಲಿದೆ

ಟೀಮ್ ಇಂಡಿಯಾ ಜೊತೆಯಿದ್ದು ಸೂಕ್ಷ್ಮವಾಗಿ ಗಮನಿಸುತ್ತಿರುವ ಮುಖ್ಯ ಆಯ್ಕೆಗಾರ ಅಗರ್ಕರ್ ಅವರು ತಂಡದಲ್ಲಿ ಯಾವುದೇ ತೊಂದರೆಯಾದರೆ, ಇಂಜುರಿಯಾದರೆ ತಕ್ಷಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಶುಭ್​ಮನ್ ಗಿಲ್ ಡೆಂಗ್ಯೂನಿಂದ ಬಳಲುತ್ತಿರುವ ಕಾರಣ, ಭಾರತವು ಯಾವುದೇ ಹಂತದಲ್ಲಿ ಬ್ಯಾಕಪ್ ಅನ್ನು ಕರೆಯುವ ಸಾಧ್ಯತೆಯಿದೆ. ಆದರೆ, ಬ್ಯಾಕ್‌ಅಪ್‌ ಯಾರು ಎಂಬುದು ಪ್ರಶ್ನೆಯಾಗಿದೆ. ಸಂಜು ಸ್ಯಾಮ್ಸನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ತಯಾರಿ ನಡೆಸಿದ್ದಾರೆ. ಗಿಲ್ ಅಲಭ್ಯರಾದರೆ ಸಂಜು ತಂಡ ಸೇರಿಕೊಳ್ಳುವ ಅಂದಾಜಿದೆ.

ಭಾರತದ ಉದಯೋನ್ಮುಖ ಯುವ ಆಟಗಾರ ಶುಭ್​ಮನ್ ಗಿಲ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಚೆನ್ನೈನಲ್ಲಿಯೇ ಇರುತ್ತಾರೆ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಜೊತೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಸೋಮವಾರ ದೃಢಪಡಿಸಿದೆ.

“ಟೀಂ ಇಂಡಿಯಾ ಬ್ಯಾಟರ್ ಗಿಲ್ 9ನೇ ಅಕ್ಟೋಬರ್ 2023 ರಂದು ತಂಡದೊಂದಿಗೆ ದೆಹಲಿಗೆ ಪ್ರಯಾಣಿಸುವುದಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡ ಬಳಿಕ ಗಿಲ್ ಮುಂದಿನ ಪಂದ್ಯವನ್ನು ಕೂಡ ಕಳೆದುಕೊಳ್ಳಲಿದ್ದಾರೆ. ಗಿಲ್ ಅವರು ಚೆನ್ನೈನಲ್ಲೇ ಉಳಿಯಲಿದ್ದಾರೆ. ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ,” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ