PAK vs SL, ICC World Cup: ವಿಶ್ವಕಪ್ನಲ್ಲಿಂದು ಡಬಲ್ ಧಮಾಕ: ಪಾಕಿಸ್ತಾನ ಪಂದ್ಯದ ಮೇಲೆ ಎಲ್ಲರ ಕಣ್ಣು
ENG vs BAN ICC World Cup: ಐಸಿಸಿ ಏಕದಿನ ವಿಶ್ವಕಪ್ನಲ್ಲಿಂದು ಎರಡು ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್- ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ- ಶ್ರೀಲಂಕಾ ಸೆಣೆಸಾಟ ನಡೆಸಲಿದೆ. ಪಾಕಿಸ್ತಾನ ತಂಡದಲ್ಲಿ ನಾಯಕ ಬಾಬರ್ ಅಝಂ ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ. ಜೊತೆಗೆ ಓಪನರ್ಗಳಾದ ಫಖರ್ ಝಮಾನ್, ಇಮಾಂ್ ಉಲ್ ಹಖ್ ರನ್ ಗಳಿಸುತ್ತಿಲ್ಲ.
ಐಸಿಸಿ ಏಕದಿನ ವಿಶ್ವಕಪ್ನಲ್ಲಿಂದು (ICC ODI World Cup) ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಬೆಳಗ್ಗೆ 10:30ಕ್ಕೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಮಧ್ಯಾಹ್ನ 2 ಗಂಟೆಗೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಿರುವ ದ್ವಿತೀಯ ಪಂದ್ಯದಲ್ಲಿ ಬಾಬರ್ ಅಝಂ ನೇತೃತ್ವದ ಪಾಕಿಸ್ತಾನ ಮತ್ತು ದಸುನ್ ಶನಕಾ ಅವರ ಶ್ರೀಲಂಕಾ ಮುಖಾಮುಖಿ ಆಗಲಿದೆ.
ಇಂಗ್ಲೆಂಡ್-ಬಾಂಗ್ಲಾದೇಶ
ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಇಂಗ್ಲೆಂಡ್ಗೆ ಇಂದಿನ ಪಂದ್ಯ ಬಹುಮುಖ್ಯವಾಗಿದೆ. ತಂಡದಲ್ಲಿ ಬದಲಾವಣೆ ಅನುಮಾನ. ಆದರೆ, ಬೌಲಿಂಗ್ನಲ್ಲಿ ಲಯಕಂಡುಕೊಳ್ಳಬೇಕಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ಗಳಿ 282 ರನ್ ಕಲೆಹಾಕಿದ್ದರೂ ನ್ಯೂಜಿಲೆಂಡ್ ಇದನ್ನು ಕೇವಲ 1 ವಿಕೆಟ್ ಕಳೆದುಕೊಂಡು 36 ಓವರ್ಗಳಲ್ಲಿ ಗುರಿ ಮುಟ್ಟಿತ್ತು. ಮಾರ್ಕ್ ವುಡ್, ಸ್ಯಾಮ್ ಕುರ್ರನ್, ಕ್ರಿಸ್ ವೋಕ್ಸ್, ಮೊಯಿನ್ ಅಲಿ ಮಾರಕವಾಗಬೇಕಿದೆ. ಇತ್ತ ಬಾಂಗ್ಲಾದೇಶ ತಂಡ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿದೆ. ಆದರೆ, ಆಂಗ್ಲರ ವಿರುದ್ಧ ಯಾವ ರೀತಿ ಪ್ರದರ್ಶನ ತೋರುತ್ತೆ ನೋಡಬೇಕಿದೆ.
ಭಾರತ- ಆಸೀಸ್ ಕಾಳಗದಲ್ಲಿ ಸೃಷ್ಟಿಯಾದ ಅಗತ್ಯ- ಅನಗತ್ಯ ದಾಖಲೆಗಳ ಪಟ್ಟಿ ಇಲ್ಲಿದೆ
ಪಾಕಿಸ್ತಾನ-ಶ್ರೀಲಂಕಾ
ಪಾಕಿಸ್ತಾನ ತಂಡದಲ್ಲಿ ನಾಯಕ ಬಾಬರ್ ಅಝಂ ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ. ಜೊತೆಗೆ ಓಪನರ್ಗಳಾದ ಫಖರ್ ಝಮಾನ್, ಇಮಾಮ್ ಉಲ್ ಹಖ್ ರನ್ ಗಳಿಸುತ್ತಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಮೊಹಮ್ಮದ್ ರಿಝ್ವಾನ್, ಶಕೀಲ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಬೌಲಿಂಗ್ನಲ್ಲಿ ಪಾಕ್ ಮಾರಕವಾಗಿದೆ. ಇತ್ತ ಶ್ರೀಲಂಕಾ ದ. ಆಫ್ರಿಕಾ ವಿರುದ್ಧ ಸೋತಿತ್ತಾದರೂ ಫೈಟ್ ಕೊಟ್ಟಿತ್ತು. ಬ್ಯಾಟಿಂಗ್ನಲ್ಲಿ ಲಂಕಾ ಫಾರ್ಮ್ನಲ್ಲಿದೆ. ಆದರೆ, ಸ್ಟಾರ್ ಬೌಲರ್ಗಳ ವೈಫಲ್ಯ ಎದ್ದು ಕಾಣುತ್ತಿದೆ. ಬೌಲಿಂಗ್ ವಿಭಾಗದಲ್ಲಿ ಇಂದು ಬದಲಾವಣೆ ನಿರೀಕ್ಷಿಸಬಹುದು.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಜಾನಿ ಬೈರ್‌ಸ್ಟೋ, ಜೋ ರೂಟ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಡೇವಿಡ್ ವಿಲ್ಲಿ, ಸ್ಯಾಮ್ ಕರನ್.
ಬಾಂಗ್ಲಾದೇಶ ತಂಡ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್, ಮಹ್ಮುದುಲ್ಲಾ, ತೌಹಿದ್ ಹೃದಯ್, ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ನಸುಮ್ ಅಹ್ಮದ್, ನಸುಮ್ ಅಹ್ಮದ್ ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.
ಪಾಕಿಸ್ತಾನ ತಂಡ: ಫಖರ್ ಝಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಂ (ನಾಯಕ), ಮೊಹಮ್ಮದ್ ರಿಝ್ವಾನ್, ಸಲ್ಮಾನ್ ಅಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ.
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಕುಸಾಲ್ ಪೆರೇರಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ(ನಾಯಕ), ಕಸುನ್ ರಜಿತ, ಲಹಿರು ಕುಮಾರ, ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ದಿಲ್ಶಾನ್ ಮದುಶಾಂಕ, ಮಥೀಶ ಪತಿರಣ, ಮಹೇಶ ತೀಕ್ಷಣ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ