ಕ್ರಿಕೆಟ್ ಅಂಗಳದಲ್ಲಿ ವಾಕ್ಸಮರ ಸಾಮಾನ್ಯ. ಅದು ಕೆಲ ಬಾರಿ ಅತಿರೇಕಕ್ಕೂ ಹೋಗಿದ್ದು ಉಂಟು. ಹೀಗೆ 2018 ರಲ್ಲಿ ಆಟಗಾರಿಬ್ಬರ ನಡುವಣ ಫೈಟ್ ಅತಿರೇಕಕ್ಕೆ ಹೋಗಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಾಗಿ 4 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಇದೇ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. 2018ರಲ್ಲಿ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಕಿಸ್ತಾನಿ ಆಟಗಾರ ಸೊಹೈಲ್ ತನ್ವೀರ್ ಗಯಾನಾ ಅಮೆಜಾನ್ ಪರ ಆಡಿದ್ದರು. ಈ ವೇಳೆ ಆಸ್ಟ್ರೇಲಿಯಾ ಕ್ರಿಕೆಟಿಗಆಟಗಾರ ಬೆನ್ ಕಟಿಂಗ್ ಸೇಂಟ್ ಕಿಟ್ಸ್ ತಂಡಕ್ಕಾಗಿ ಆಡುತ್ತಿದ್ದರು.
ಈ ಪಂದ್ಯದಲ್ಲಿ ಎಡಗೈ ವೇಗಿ ಸೊಹೈಲ್ ತನ್ವಿರ್ ಎಸೆತದಲ್ಲಿ ಬೆನ್ ಕಟಿಂಗ್ ಸಿಕ್ಸ್ ಸಿಡಿಸಿದ್ದರು. ಇದರ ಬೆನ್ನಲ್ಲೇ ಕಟಿಂಗ್ ಅವರನ್ನು ಬೌಲ್ಡ್ ಮಾಡಿ ಸೊಹೈಲ್ ತನ್ವೀರ್ ಮಧ್ಯ ಬೆರಳು ತೋರಿಸಿ ಬೀಳ್ಕೊಟ್ಟಿದ್ದರು. ಈ ಅಶ್ಲೀಲ ವರ್ತನೆಗೆ ಅಂದು ಸೊಹೈಲ್ ತನ್ವೀರ್ ಪಂದ್ಯದ ಶುಲ್ಕದ ಶೇಕಡಾ 15 ರಷ್ಟು ದಂಡವನ್ನು ಪಾವತಿಸಿದ್ದರು. ಇದು ಅಲ್ಲಿಗೆ ಮುಗಿಯಿತು ಎಂದು ಎಲ್ಲರೂ ಅಂದುಕೊಂಡಿದ್ದರು.
ಆದರೆ ನಾಲ್ಕು ವರ್ಷಗಳ ಬಳಿಕ ಬೆನ್ ಕಟಿಂಗ್ ಹಾಗೂ ಸೊಹೈಲ್ ತನ್ವೀರ್ ಮತ್ತೆ ಮುಖಾಮುಖಿಯಾಗಿದ್ದಾರೆ. ಈ ಬಾರಿ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಎಂಬುದು ವಿಶೇಷ. 2022 ರ PSL ಟೂರ್ನಿಯಲ್ಲಿ ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ, ಕಟಿಂಗ್ ಪೇಶಾವರ್ ಝಲ್ಮಿ ಮತ್ತು ತನ್ವೀರ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಭಾಗವಾಗಿದ್ದರು. ನಾಲ್ಕು ವರ್ಷಗಳ ಹಳೆಯ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದ್ದ ಕಟಿಂಗ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳನ್ನು ಸಿಡಿಸಿದರು. ಆ ಬಳಿಕ ಸೊಹೈಲ್ ತನ್ವೀರ್ಗೆ ಮಧ್ಯದ ಬೆರಳನ್ನು ತೋರಿಸಿ ಸಂಭ್ರಮಿಸಿದರು. ಇದರಿಂದ ಇಬ್ಬರು ಆಟಗಾರರ ನಡುವೆ ವಾಗ್ವಾದ ಕೂಡ ನಡೆಯಿತು. ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದಾಗ್ಯೂ ಕೊನೆಯಲ್ಲಿ ಕಟಿಂಗ್ ಸೊಹೈಲ್ ತನ್ವೀರ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ತನ್ವೀರ್ ಮತ್ತೊಮ್ಮೆ ಮಧ್ಯ ಬೆರಳು ತೋರಿಸಿ ಸಂಭ್ರಮಿಸಿದರು.
— cricketvid (@cricketvid) February 15, 2022
ಈ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡವು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು 24 ರನ್‌ಗಳಿಂದ ಸೋಲಿಸಿತು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಬೆನ್ ಕಟಿಂಗ್ 14 ಎಸೆತಗಳಲ್ಲಿ 36 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಮತ್ತೊಂದೆಡೆ ಸೊಹೈಲ್ ತನ್ವೀರ್ 4 ಓವರ್‌ಗಳಲ್ಲಿ 50 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು.
ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ
ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..!
(Ben Cutting and Sohail Tanvir fight: Cutting and Tanvir’s obscene gesture rivalry finds new episode in PSL)