Ben Stokes: ಚೆಂಡು ತಾಗಿದ್ದು ವಿಕೆಟ್ಗೆ, ಅಂಪೈರ್ನಿಂದ LBW ಔಟ್, ಥರ್ಡ್ ಅಂಪೈರ್ನಿಂದ ನಾಟೌಟ್
Australia vs England Ashes: ಸ್ಟ್ರೈಕ್ನಲ್ಲಿದ್ದ ಬೆನ್ ಸ್ಟೋಕ್ಸ್ಗೆ ಕ್ಯಾಮೆರಾನ್ ಗ್ರೀನ್ ಬೌಲಿಂಗ್ ಮಾಡಲು ಬಂದರು. ವೇಗವಾಗಿ ಎಸೆದ ಚೆಂಡು ಔಟ್ ಸೈಡ್ ಆಫ್ ಸ್ಟೆಂಪ್ ಕಡೆ ಬಂತು. ಸ್ಟೋಕ್ಸ್ ಚೆಂಡನ್ನು ಬಿಡಲು ನಿರ್ಧರಿಸಿದರು. ಆದರೆ, ಬಾಲ್ ಸ್ವಿಂಗ್ ಆಗಿ ವಿಕೆಟ್ಗೆ ತಾಗಿತು. ಮುಂದೆ ಏನಾಯ್ತು ನೋಡಿ.
ಕಾಂಗರೂಗಳ ನಾಡಿನಲ್ಲಿ ಸಾಗುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿಯಲ್ಲಿ (The Ashes) ಇಂಗ್ಲೆಂಡ್ (Australia vs England) ತಂಡದ ಕಳಪೆ ಪ್ರದರ್ಶನ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಮುಂದುವರೆದಿದೆ. ಪ್ಯಾಟ್ ಕಮಿನ್ಸ್ (Pat Cummins) ಪಡೆ ಮೊದಲ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 416 ರನ್ ಮಾಡಿ ಡಿಕ್ಲೇರ್ ಘೋಷಿಸಿದರೆ, ಇತ್ತ ಆಂಗ್ಲರು ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಸನಿಹದಲ್ಲಿದ್ದಾರೆ. ಇದರ ನಡುವೆ ಈ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. “ಚೆಂಡು ವಿಕೆಟ್ಗೆ ತಾಗಿತು. ಬೌಲರ್ ಎಲ್ಬಿ ಎಂದು ತಿಳಿದು ಮನವಿ ಮಾದರು. ಅಂಪೈರ್ ಔಟ್ ಕೊಟ್ಟರು. ಬ್ಯಾಟರ್ ರಿವ್ಯೂ ತೆಗೆದುಕೊಂಡರು. ಚೆಂಡು ಪ್ಯಾಡ್ಗೆ ತಾಗದೆ ವಿಕೆಟ್ಗೆ ಬಡಿದಿರುವುದು ಸ್ಪಷ್ಟವಾಯಿತು. ಆದರೆ, ಥರ್ಡ್ ಅಂಪೈರ್ (Third Umpire) ಇಲ್ಲಿ ಕೊಟ್ಟಿದ್ದು ನಾಟೌಟ್”. ಏನಿದು ವಿಚಿತ್ರ ಘಟನೆ ಅಂತೀರಾ?, ಇಲ್ಲಿದೆ ಸಂಪೂರ್ಣ ಮಾಹಿತಿ ಓದಿ.
ಆಸ್ಟ್ರೇಲಿಯಾ ತಂಡ ಡಿಕ್ಲೇರ್ ಘೋಷಿಸಿ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಹಿಂದಿನ ಪಂದ್ಯದಂತೆ ಈ ಬಾರಿ ಕೂಡ ಇಂಗ್ಲೆಂಡಗ ಬಹುಬೇಗನೆ ಪ್ರಮುಖ ವಿಕೆಟ್ ಕಳೆದುಕೊಂಡವು. 36 ರನ್ಗೆ 4 ವಿಕೆಟ್ ಪತನಗೊಂಡವು. ಈ ಸಂದರ್ಭ ಕ್ರೀಸ್ನಲ್ಲಿದ್ದಿದ್ದು ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೈರ್ಸ್ಟೋ. ಸ್ಟ್ರೈಕ್ನಲ್ಲಿದ್ದ ಬೆನ್ ಸ್ಟೋಕ್ಸ್ಗೆ ಕ್ಯಾಮೆರಾನ್ ಗ್ರೀನ್ ಬೌಲಿಂಗ್ ಮಾಡಲು ಬಂದರು. ವೇಗವಾಗಿ ಎಸೆದ ಚೆಂಡು ಔಟ್ ಸೈಡ್ ಆಫ್ ಸ್ಟೆಂಪ್ ಕಡೆ ಬಂತು. ಸ್ಟೋಕ್ಸ್ ಚೆಂಡನ್ನು ಬಿಡಲು ನಿರ್ಧರಿಸಿದರು. ಆದರೆ, ಬಾಲ್ ಸ್ವಿಂಗ್ ಆಗಿ ವಿಕೆಟ್ಗೆ ತಾಗಿತು. ಇಲ್ಲಿ ಟ್ವಿಸ್ಟ್ ಎಂದರೆ ಚೆಂಡು ವಿಕೆಟ್ಗೆ ತಾಗಿದರೂ ಬೇಲ್ಸ್ ಬೀಳಲಿಲ್ಲ.
ಹೌದು, ಚೆಂಡು ವಿಕೆಟ್ಗೆ ಬಡಿದರು ಬೇಲ್ಸ್ ಮಾತ್ರ ಅಲುಗಾಡಲಿಲ್ಲ. ಇದನ್ನ ತಪ್ಪಾಗಿ ಗ್ರಹಿಸಿಕೊಂಡ ಆಸ್ಟ್ರೇಲಿಯಾ ತಂಡ ಅಂಪೈರ್ ಬಳಿ ಎಲ್ಬಿಗೆ ಮನವಿ ಮಾಡಿದರು. ಅಂಪೈರ್ ಕೂಡ ಔಟ್ ಎಂಬ ತೀರ್ಮಾನ ಪ್ರಕಟಿಸಿದರು. ಅತ್ತ ಆಸೀಸ್ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಇತ್ತ ಸ್ಟೋಕ್ಸ್ ರಿವ್ಯೂ ಮೊರೆಹೋದರು. ರಿವ್ಯೂನಲ್ಲಿ ನೋಡಿದಾಗ ಚೆಂಡು ಎಲ್ಲಿಯೂ ಪ್ಯಾಡ್ಗೆ ಟಚ್ ಆಗಿರುವುದು ಕಂಡುಬಂದಿಲ್ಲ. ವಿಕೆಟ್ಗೆ ಬಡಿದರೂ ಬೇಲ್ಸ್ ಬಿದ್ದಿರಲಿಲ್ಲ. ಥರ್ಡ್ ಅಂಪೈರ್ ನಾಟೌಟ್ ಎಂಬ ತೀರ್ಮಾನ ಪ್ರಕಟಿಸಿದರು.
ಈಗ ವಿಚಿತ್ರ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
UNBELIEVABLE #Ashes pic.twitter.com/yBhF8xspg1
— cricket.com.au (@cricketcomau) January 7, 2022
ಈಗಾಗಲೇ ಐದು ಪಂದ್ಯಗಳ ಆ್ಯಶಸ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ 3-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಈ ಸರಣಿಯಲ್ಲಿ ಇಂಗ್ಲೆಂಡ್ ತೀರಾ ಕಳಪೆ ಪ್ರದರ್ಶನ ತೋರುತ್ತಾ ಬಂದಿದ್ದು ನಾಲ್ಕನೇ ಟೆಸ್ಟ್ನಲ್ಲೂ ಮುಂದುವರೆದಿದೆ. ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಉಸ್ಮಾನ್ ಖ್ವಾಜಾ ಅವರ 137 ಹಾಗೂ ಸ್ಟೀವ್ ಸ್ಮಿತ್ ಅವರ 67 ರನ್ಗಳ ನೆರವಿನಿಂದ 416 ರನ್ಗೆ 8 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಘೋಷಿಸಿತು. ಸದ್ಯ ತನ್ನ ಮೊದಲ ಇನ್ನಿಂಗ್ಸ್ ಆಡುತ್ತಿರುವ ಇಂಗ್ಲೆಂಡ್ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಸನಿಹದಲ್ಲಿದೆ.
IPL 2022: ಆರ್ಸಿಬಿ ಅಭಿಮಾನಿಗಳಿಗೆ ಕಹಿ ಸುದ್ದಿ: ಈ ಬಾರಿ ಬೆಂಗಳೂರಿನಲ್ಲಿ ಹರಾಜೂ ಇಲ್ಲ, ಪಂದ್ಯವೂ ಇಲ್ಲ