Ashes 2021: ಜಾನಿ ಬೈರ್‌ಸ್ಟೋವ್ ಅಬ್ಬರ; ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ ತಂಡದ ಮೊದಲ ಶತಕ

Ashes 2021: ಜಾನಿ ಬೈರ್‌ಸ್ಟೋವ್ ಅವರ ಟೆಸ್ಟ್ ಶತಕವು ಆಸ್ಟ್ರೇಲಿಯಾ ನೆಲದಲ್ಲಿ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಅವರು ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾದಲ್ಲಿ ತಲಾ 1 ಶತಕಗಳನ್ನು ಗಳಿಸಿದ್ದಾರೆ.

Ashes 2021: ಜಾನಿ ಬೈರ್‌ಸ್ಟೋವ್ ಅಬ್ಬರ; ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ ತಂಡದ ಮೊದಲ ಶತಕ
ಜಾನಿ ಬೈರ್‌ಸ್ಟೋ
Follow us
TV9 Web
| Updated By: ಪೃಥ್ವಿಶಂಕರ

Updated on: Jan 07, 2022 | 3:40 PM

ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ ಪಾಳಯದಿಂದ ಅಂತಿಮವಾಗಿ ಒಳ್ಳೆಯ ಸುದ್ದಿ ಬಂದಿದೆ. ಜಾನಿ ಬೈರ್‌ಸ್ಟೋವ್‌ ಅವರ ಶತಕದ ರೂಪದಲ್ಲಿ ಈ ಒಳ್ಳೆಯ ವಿಷಯ ಮುನ್ನೆಲೆಗೆ ಬಂದಿದೆ. ಬೈರ್‌ಸ್ಟೋ ಆಶಸ್ ಸರಣಿಯಲ್ಲಿ ಶತಕ ಸಿಡಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದು ಅವರ ಟೆಸ್ಟ್ ವೃತ್ತಿ ಬದುಕಿನ 7ನೇ ಶತಕವಾಗಿದೆ. ಆಶಸ್ ಸರಣಿಯಲ್ಲಿ ಕೊನೆಯ ಶತಕ ಗಳಿಸಿದವರು ಬೆನ್ ಸ್ಟೋಕ್ಸ್, ಅವರು ಆಗಸ್ಟ್ 2019 ರಲ್ಲಿ ಹೆಡಿಂಗ್ಲೆ ಟೆಸ್ಟ್‌ನಲ್ಲಿ ಶತಕ ಗಳಿಸಿದರು. ಬೈರ್‌ಸ್ಟೋವ್ ಸ್ಟೋಕ್ಸ್ ಅವರ ಶತಕದ ನಂತರ ಶತಕ ಗಳಿಸಿದ ಮೊದಲ ಇಂಗ್ಲೆಂಡ್ ಬ್ಯಾಟ್ಸ್‌ಮನ್.

ಜಾನಿ ಬೈರ್‌ಸ್ಟೋವ್ ಅವರ ಟೆಸ್ಟ್ ಶತಕವು ಆಸ್ಟ್ರೇಲಿಯಾ ನೆಲದಲ್ಲಿ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಅವರು ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾದಲ್ಲಿ ತಲಾ 1 ಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಜಾನಿ ಬೈರ್‌ಸ್ಟೋವ್ ಅವರ ಗರಿಷ್ಠ ಸ್ಕೋರ್ 167 ಔಟಾಗದೆ. ಸಿಡ್ನಿಯಲ್ಲಿ ಇಂಗ್ಲೆಂಡ್‌ಗೆ ಅವರ ಇನ್ನಿಂಗ್ಸ್ ಹೆಚ್ಚು ಅಗತ್ಯವಿದೆ. ಮೂರನೇ ದಿನದಂದು ಬೈರ್‌ಸ್ಟೋ 103 ರನ್ ಗಳಿಸಿ ಅಜೇಯರಾಗಿ ಉಳಿದರೆ, ನಾಲ್ಕನೇ ದಿನದಲ್ಲಿ ಅವರು ತಮ್ಮ ಇನ್ನಿಂಗ್ಸ್ ಅನ್ನು ದೊಡ್ಡದಾಗಿಸಿಕೊಂಡರೆ, ನಂತರ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಮರಳುವ ಹಾದಿ ಸುಲಭವಾಗುತ್ತದೆ.

ಜಾನಿ ಬೈರ್ಸ್ಟೋವ್ ಮತ್ತು 2 ಉತ್ತಮ ಪಾಲುದಾರಿಕೆಗಳು ಜಾನಿ ಬೈರ್‌ಸ್ಟೋ ಅವರ ಶತಕದ ಅವಧಿಯಲ್ಲಿ ಎರಡು ಸರಿಸಾಟಿಯಿಲ್ಲದ ಜೊತೆಯಾಟಗಳನ್ನು ಆಡಿದರು. ಇವುಗಳಲ್ಲಿ, ಅವರು 5 ನೇ ವಿಕೆಟ್‌ಗೆ ಬೆನ್ ಸ್ಟೋಕ್ಸ್‌ರೊಂದಿಗೆ ಮತ್ತು 7 ನೇ ವಿಕೆಟ್‌ಗೆ ಮಾರ್ಕ್ ವುಡ್ ಜೊತೆಗಿನ ಪಾಲುದಾರಿಕೆಯನ್ನು ಮಾಡಿದರು. ಬೈರ್‌ಸ್ಟೋವ್ 176 ಎಸೆತಗಳಲ್ಲಿ ಸ್ಟೋಕ್ಸ್ ಜೊತೆ 128 ರನ್ ಹಂಚಿಕೊಂಡರು. ನಂತರ ಮಾರ್ಕ್ ವುಡ್ ಜೊತೆಗೂಡಿ 72 ಎಸೆತಗಳಲ್ಲಿ 72 ರನ್ ಸೇರಿಸಿದರು. ಈ ಎರಡು ಜೊತೆಯಾಟದ ಪರಿಣಾಮ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಕೊಂಚ ಪುನರಾಗಮನ ಕಾಣುತ್ತಿದೆ.

2 ಟೆಸ್ಟ್, 3 ಇನ್ನಿಂಗ್ಸ್, 143 ರನ್ ಮತ್ತು ಬೈರ್‌ಸ್ಟೋವ್ ಪ್ರಸ್ತುತ ಆಶಸ್ ಸರಣಿಯಲ್ಲಿ ಬೈರ್‌ಸ್ಟೋ ಎರಡನೇ ಟೆಸ್ಟ್ ಆಡುತ್ತಿದ್ದಾರೆ. ಮತ್ತು ಅದರ ಮೂರನೇ ಇನ್ನಿಂಗ್ಸ್‌ನಲ್ಲಿಯೇ ಅವರು ಶತಕ ಬಾರಿಸಿದ್ದಾರೆ. ಈ ಮೂಲಕ ಸರಣಿಯಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅವರು ಇದುವರೆಗೆ 71.50 ಸರಾಸರಿಯಲ್ಲಿ 143 ರನ್ ಗಳಿಸಿದ್ದಾರೆ. ನಾಲ್ಕನೇ ದಿನದ ಆಟದಲ್ಲಿ ರನ್‌ಗಳ ಸಂಖ್ಯೆ ದೊಡ್ಡದಾಗಿ ಕಾಣಿಸಬಹುದು. ಇಂಗ್ಲೆಂಡ್ ತಂಡಕ್ಕೂ ಇದೇ ಅಗತ್ಯವಿದೆ.

ಸಿಡ್ನಿ ಟೆಸ್ಟ್‌ನ ಪರಿಸ್ಥಿತಿಯನ್ನು ನೋಡಿದರೆ, ಇಂಗ್ಲೆಂಡ್ ತಂಡವು ಇನ್ನೂ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕಿಂತ 158 ರನ್‌ಗಳಷ್ಟು ಹಿಂದಿದೆ. ನಾಲ್ಕನೇ ದಿನದಂದು ಬೈರ್‌ಸ್ಟೋವ್ ಬ್ಯಾಟಿಂಗ್‌ಗೆ ಬಂದಾಗ, ಅವರ ಗುರಿಯು ಮೊದಲು 158 ರನ್‌ಗಳ ಅಂತರವನ್ನು ತೆಗೆದುಹಾಕುವುದು. ಈ ಕೆಲಸದಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ಸನ್ನು ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಏಕೆಂದರೆ ಬೈರ್‌ಸ್ಟೋವ್ ತಮ್ಮ ಶತಕದ ಇನ್ನಿಂಗ್ಸ್‌ಗೆ ಸ್ವಲ್ಪ ಹೆಚ್ಚು ಆಕಾರವನ್ನು ನೀಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ