15ನೇ ಆವೃತ್ತಿಯ ಐಪಿಎಲ್ (IPL 2022) ಈಗಾಗಲೇ ಪ್ರಾರಂಭವಾಗಿ 3 ವಾರಗಳು ಮುಗಿದಿವೆ. ನಿರೀಕ್ಷೆಗ ತಕ್ಕಂತೆ ಚುಟುಕು ಸಮರ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ನೀಡಿದೆ. ಒಂದೆಡೆ ಆಟಗಾರರು ಮೈದಾನದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಅಭಿಮಾನಿಗಳಿಗೆ ರೋಮಾಂಚನವುಂಟು ಮಾಡಿದರೆ, ಮತ್ತೊಂದೆಡೆ ಕಾಮೆಂಟೆಟರ್ಗಳು ತಮ್ಮ ಮಾತಿನ ಮೂಲಕ ಅಭಿಮಾನಿಗಳಿಗೆ ಆಟದ ಮೇಲಿನ ಉಸ್ತುಕತೆಯನ್ನು ಹೆಚ್ಚಿಸುತ್ತಿದ್ದಾರೆ. ಅವರಲ್ಲಿ ಗವಾಸ್ಕರ್, ರೈನಾರಂತಹ ಖ್ಯಾತ ಕ್ರಿಕೆಟಿಗರು ಸೇರಿದ್ದಾರೆ. ಈಗ ಅವರಲ್ಲಿ ಸೇರಿಕೊಳ್ಳಲು ಖ್ಯಾತ ಆಂಗ್ಲ ಕ್ರಿಕೆಟರ್ ಕೆವಿನ್ ಪೀಟರ್ಸನ್ (Kevin Pietersen) ಭಾರತಕ್ಕೆ ಆಗಮಿಸುತ್ತಿದ್ದಾರೆ. ಮಾಜಿ ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಾಮೆಂಟರಿ ಮಾಡಲು ಪ್ರಾರಂಭಿಸಿದಾಗಿನಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಪೀಟರ್ಸನ್ ಕಳೆದ ಕೆಲವು ಸೀಸನ್‌ಗಳಲ್ಲಿ ಐಪಿಎಲ್ ಪ್ರಸಾರದ ನಿರಂತರ ಭಾಗವಾಗಿದ್ದಾರೆ. ಆಟಗಾರನಾಗಿ ಮೈದಾನದಲ್ಲಿ ರನ್ ಹೊಳೆ ಹರಿಸಿದ್ದರೆ, ಈಗ ಕಾಮೆಂಟೆಟರ್ ಆಗಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.
ಈಗ ಐಪಿಎಲ್ನ ಭಾಗವಾಗಲು ತಾಯ್ನಾಡಿನಿಂದ ಭಾರತಕ್ಕೆ ಆಗಮಿಸುತ್ತಿರುವ ಪೀಟರ್ಸನ್ ಸೋಮವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಅದರಲ್ಲಿ ಅವರು ಐಪಿಎಲ್‌ನಲ್ಲಿ ಕಾಮೆಂಟರಿ ತಂಡದ ಭಾಗವಾಗಲು ಭಾರತಕ್ಕೆ ಬರುತ್ತಿರುವುದಾಗಿ ಬರೆದಿದ್ದಾರೆ. ಜೊತೆಗೆ ಭಾರತದಲ್ಲಿ ತಮ್ಮ ಅವಧಿಯಲ್ಲಿ “ವಿಶ್ವದ ಅತ್ಯುತ್ತಮ ಆತಿಥ್ಯ” ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
“ಐಪಿಎಲ್‌ನಲ್ಲಿ ಕಾಮೆಂಟರಿ ಮಾಡಲು ಭಾರತಕ್ಕೆ ಹಿಂತಿರುಗಲು ತುಂಬಾ ಉತ್ಸುಕನಾಗಿದ್ದೇನೆ. ವಿಶ್ವದ ಅತ್ಯುತ್ತಮ ಆತಿಥ್ಯವನ್ನು ಅನುಭವಿಸುವುದನ್ನು ನಾನು ಎಂದಿಗೂ ಕಳೆದುಕೊಳ್ಳುವುದಿಲ್ಲ! ಕೆಲವು ಗಂಟೆಗಳಲ್ಲಿ ನಿಮ್ಮನ್ನು ನೋಡುತ್ತೇನೆ ಎಂದು ಹಿಂದಿಯಲ್ಲಿ ಪೀಟರ್‌ಸನ್ ಟ್ವೀಟ್ ಮಾಡಿದ್ದಾರೆ.
आईपीएल पर कमेंट्री करने के लिए भारत लौटने को लेकर बेहद उत्साहित हूं। दुनिया में सबसे अच्छे आतिथ्य का अनुभव करना कुछ ऐसा है जिसे मैं कभी भी हल्के में नहीं लूंगा! कुछ घंटों में मिलते हैं, भारत! ?? pic.twitter.com/PzlZl4vIWS
— Kevin Pietersen? (@KP24) April 18, 2022
ಆತಿಥೇಯ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಐಪಿಎಲ್ ಸಮಯದಲ್ಲಿ ಪೀಟರ್‌ಸನ್ ಪಂದ್ಯದ ಪೂರ್ವ ಮತ್ತು ನಂತರದ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ಪಂದ್ಯಗಳ ಬಗ್ಗೆ ಕಾಮೆಂಟ್ ಮಾಡುವುದಲ್ಲದೆ ಸಾಮಾನ್ಯವಾಗಿ ಐಪಿಎಲ್ ಮತ್ತು ಕ್ರಿಕೆಟ್ ಬಗ್ಗೆ ಚರ್ಚಿಸುವಾಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪೀಟರ್ಸನ್ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಡೆಕ್ಕನ್ ಚಾರ್ಜರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನಂತಹ ಫ್ರಾಂಚೈಸಿಗಳಿಗಾಗಿ ಆಡಿದ್ದರು.
ಇದನ್ನೂ ಓದಿ:IPL 2022: 15ನೇ ಆವೃತ್ತಿಯ ಐಪಿಎಲ್ಗೂ ಕೊರೊನಾ ಕಾಟ; ದೆಹಲಿ ತಂಡದಲ್ಲಿ ಸೋಂಕಿನ ಪ್ರಕರಣ ಪತ್ತೆ!