Sign In

By signing in or creating an account, you agree with Associated Broadcasting Company's Terms & Conditions and Privacy Policy.

Big news: ದೀಪಕ್ ಚಹರ್ 4 ತಿಂಗಳು ಕ್ರಿಕೆಟ್‌ನಿಂದ ದೂರ! ಐಪಿಎಲ್ ಜೊತೆಗೆ ಟಿ 20 ವಿಶ್ವಕಪ್​ಗೂ ಗೈರು?

Deepak Chahar: ಟೀಂ ಇಂಡಿಯಾ ಆಲ್‌ರೌಂಡರ್ ದೀಪಕ್ ಚಹರ್ ಇಂಜುರಿಯಿಂದ ಐಪಿಎಲ್ 2022 ರಿಂದ ಹೊರಬಿದ್ದಿದ್ದರು. ಈಗ ಅವರು ಈ ವರ್ಷ ನಡೆಯುವ ಟಿ 20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಹುಟ್ಟಿಕೊಂಡಿದೆ.

Big news: ದೀಪಕ್ ಚಹರ್ 4 ತಿಂಗಳು ಕ್ರಿಕೆಟ್‌ನಿಂದ ದೂರ! ಐಪಿಎಲ್ ಜೊತೆಗೆ ಟಿ 20 ವಿಶ್ವಕಪ್​ಗೂ ಗೈರು?
ದೀಪಕ್ ಚಹರ್
Follow us
TV9 Web
| Updated By: ಪೃಥ್ವಿಶಂಕರ

Updated on: Apr 14, 2022 | 3:41 PM

ಟೀಂ ಇಂಡಿಯಾ ಆಲ್‌ರೌಂಡರ್ ದೀಪಕ್ ಚಹರ್ (Deepak Chahar) ಇಂಜುರಿಯಿಂದ ಐಪಿಎಲ್ 2022 (IPL 2022) ರಿಂದ ಹೊರಬಿದ್ದಿದ್ದರು. ಈಗ ಅವರು ಈ ವರ್ಷ ನಡೆಯುವ ಟಿ 20 ವಿಶ್ವಕಪ್‌ ( T20 World Cup)ನಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಹುಟ್ಟಿಕೊಂಡಿದೆ. ಚಹರ್ ಇಂಜುರಿ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings )ಗೆ ಆತಂಕವನ್ನುಂಟು ಮಾಡಿರುವುದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಲಿದೆ. ಟಿ20 ವಿಶ್ವಕಪ್ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಆದರೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ದೀಪಕ್ ಚಹಾರ್ ಅವರು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಆ ಐಸಿಸಿ ಟೂರ್ನಿಯಲ್ಲಿ ಆಡುವುದು ಕಷ್ಟಕರವಾಗಿದೆ. ದೀಪಕ್ ಚಹರ್ ಅವರ ಗಾಯವನ್ನು ಸ್ಕ್ಯಾನ್ ಮಾಡಲಾಗಿದ್ದು, ಅವರನ್ನು 4 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿರಲು ಸೂಚಿಸಲಾಗಿದೆ.

ದೀಪಕ್ ಚಹರ್ ಅವರಿಗೆ ಮೊದಲು ಪಾದದ ಗಾಯವಾಗಿತ್ತು. ಹೀಗಾಗಿ ಅವರು ಗಾಯದಿಂದ ಚೇತರಿಸಿಕೊಂಡು IPL 2022 ರಲ್ಲಿ ಪುನರಾಗಮನವನ್ನು ಮಾಡುತ್ತಾರೆ ಎಂದು ಊಹಿಸಲಾಗಿತ್ತು. ಇದಕ್ಕನುಗುಣವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ನೆಟ್‌ಗಳಲ್ಲಿ ಬೌಲಿಂಗ್ ಮಾಡಲು ಚಹರ್ ಪ್ರಾರಂಭಿಸಿದರು. ಆದರೆ ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್‌ನ ಎರಡನೇ ಅತ್ಯಂತ ದುಬಾರಿ ಆಟಗಾರನನ್ನು ಐಪಿಎಲ್ 2022 ಮಾತ್ರವಲ್ಲದೆ ಕ್ರಿಕೆಟ್‌ನಿಂದ ಕೆಲವು ತಿಂಗಳುಗಳಿಂದ ದೂರವಿರಿಸಿದೆ ಎಂದು ವರದಿಯಾಗಿದೆ.

ಚೆನ್ನೈ ತಂಡದ ಲೆಕ್ಕಾಚಾರವೇ ಬುಡಮೇಲು ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹರ್ ಅವರನ್ನು ರೂ 14 ಕೋಟಿಗೆ ಖರೀದಿಸಿತು. ಆದರೆ ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಅವರು ಗಾಯಗೊಂಡರು. ಅವರ ಗಾಯವು ಚೆನ್ನೈ ಸೂಪರ್ ಕಿಂಗ್ಸ್‌ನ ಸಂಪೂರ್ಣ ಲೆಕ್ಕಾಚಾರವನ್ನು ಹಾಳುಮಾಡಿತು. ಈಗ ಅವರು ಟಿ20 ವಿಶ್ವಕಪ್‌ನಲ್ಲಿ ಆಡದಿದ್ದರೆ, ಟೀಮ್ ಇಂಡಿಯಾದ ಸಮೀಕರಣವೂ ಹದಗೆಡಬಹುದು. ದೀಪಕ್ ಚಹರ್ ತಂಡದಲ್ಲಿ ಇರುವುದು ಮಧ್ಯಮ ಕ್ರಮಾಂಕವನ್ನು ಬಲಪಡಿಸುತ್ತದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅವರು ಉತ್ತಮ ಆಯ್ಕೆಯಾಗಿದ್ದಾರೆ.

ವರದಿಯ ಪ್ರಕಾರ, ದೀಪಕ್ ಚಹರ್ ಪ್ರಸ್ತುತ ಎನ್‌ಸಿಎಯಲ್ಲಿದ್ದು, ಅವರ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸುದ್ದಿ ಪ್ರಕಾರ ದೀಪಕ್ 4 ತಿಂಗಳು ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ. ಆದರೆ ಇಷ್ಟು ದಿನಗಳ ನಂತರ ಅವರು ಕ್ರಿಕೆಟ್‌ಗೆ ಮರಳಿದಾಗ ಅವರ ಪ್ರದರ್ಶನ ಹೇಗಿರುತ್ತದೆ ಎಂಬುದನ್ನೂ ಕಾದು ನೋಡಬೇಕಾಗಿದೆ.

ದೀಪಕ್ ಚಹರ್ ಗ್ರಾಫ್ ದೀಪಕ್ ಚಹರ್ ಐಪಿಎಲ್‌ನಲ್ಲಿ 63 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 12 ಇನ್ನಿಂಗ್ಸ್‌ಗಳಲ್ಲಿ 57 ಎಸೆತಗಳನ್ನು ಎದುರಿಸಿ 79 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 59 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದರಲ್ಲಿ 13 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅದೇ ಸಮಯದಲ್ಲಿ, ಭಾರತಕ್ಕಾಗಿ ಆಡಿದ 27 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, ಅವರು 36 ವಿಕೆಟ್ಗಳನ್ನು ಪಡೆದಿದ್ದು, ಬ್ಯಾಟಿಂಗ್​ನಲ್ಲಿ 201 ರನ್ಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ:ICC ODI Ranking: ಪಾಕ್ ನಾಯಕ ಬಾಬರ್ ನಂ.1! ಕುಸಿತ ಕಂಡ ಕೊಹ್ಲಿ, ಪಾಕ್ ತಂಡದ್ದೇ ಕಾರುಬಾರು

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ