AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: 15ನೇ ಆವೃತ್ತಿಯ ಐಪಿಎಲ್​ನಿಂದ ಟೀಂ ಇಂಡಿಯಾಗೆ ಸಿಕ್ಕ ಐವರು ಬಿಗ್ ಮ್ಯಾಚ್​ ವಿನ್ನರ್ಸ್​ಗಳಿವರು​..!

IPL 2022: ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್‌ಜೈಂಟ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಅಂತಹ ಕೆಲವು ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡಿದ್ದು, ಅವರ ಬ್ಯಾಟಿಂಗ್ ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

IPL 2022: 15ನೇ ಆವೃತ್ತಿಯ ಐಪಿಎಲ್​ನಿಂದ ಟೀಂ ಇಂಡಿಯಾಗೆ ಸಿಕ್ಕ ಐವರು ಬಿಗ್ ಮ್ಯಾಚ್​ ವಿನ್ನರ್ಸ್​ಗಳಿವರು​..!
ಸುಯಶ್ ಪ್ರಭುದೇಸಾಯಿ
TV9 Web
| Edited By: |

Updated on: Apr 14, 2022 | 4:18 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಪ್ರಪಂಚದಾದ್ಯಂತ ಹರಡಿದೆ. ಈ ಬಾರಿಯ ಐಪಿಎಲ್‌ನಲ್ಲಿ ವಿಭಿನ್ನವಾಗಿ ನಡೆದಿರುವುದು ದೊಡ್ಡ ವಿಷಯ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings)ನಂತಹ ತಂಡಗಳು ಸಂಕಷ್ಟದಲ್ಲಿದ್ದು, ಎರಡು ಹೊಸ ತಂಡಗಳಾದ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ (Gujarat Titans) ಅದ್ಭುತ ಆಟ ಪ್ರದರ್ಶಿಸಿವೆ. ಆದರೂ ಒಂದಿಷ್ಟೂ ಬದಲಾಗದ ಐಪಿಎಲ್ ವೇದಿಕೆಗೆ ಹೊಸ ಪ್ರತಿಭೆಗಳ ಆಗಮನವಾಗಿದೆ. ಎಂದಿನಂತೆ ಐಪಿಎಲ್ 15ನೇ ಸೀಸನ್​ನಲ್ಲೂ ಇಂತಹ ಕೆಲವು ಪ್ರತಿಭೆಗಳು ಕಾಣಿಸಿಕೊಂಡಿದ್ದು, ಜಗತ್ತೇ ಬೆಚ್ಚಿ ಬಿದ್ದಿದೆ. ಈ ಆಟಗಾರರು ಯಾವುದೇ ಬೌಲರ್ ಅಥವಾ ಬ್ಯಾಟ್ಸ್‌ಮನ್‌ಗಳಿಗೆ ಹೆದರದೆ ತಮ್ಮ ಅದ್ಭುತ ಆಟದಿಂದ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುತ್ತಿದ್ದಾರೆ. ಇವರ ಆಟವನ್ನು ನೋಡಿದ ಅಭಿಮಾನಿಗಳು ಕೂಡ ಈ ಆಟಗಾರರು ಇಷ್ಟು ದಿನ ಎಲ್ಲಿದ್ದರು ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ?

ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್‌ಜೈಂಟ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಅಂತಹ ಕೆಲವು ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡಿದ್ದು, ಅವರ ಬ್ಯಾಟಿಂಗ್ ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಮೊದಲ ಸೀಸನ್‌ನಲ್ಲಿಯೇ ಅನುಭವಿ ಆಟಗಾರನಂತೆ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಕೆಲವು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ

  1. ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಆದರೆ ಆ ತಂಡದ ಯುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ತಮ್ಮ ಬ್ಯಾಟಿಂಗ್‌ನಿಂದ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ 39.25 ಸರಾಸರಿಯಲ್ಲಿ 157 ರನ್ ಗಳಿಸಿದ್ದಾರೆ. ವಿಸ್ಮಯಕಾರಿ ಸಂಗತಿಯೆಂದರೆ ಅವರ ಸ್ಟ್ರೈಕ್ ರೇಟ್ ಕೂಡ 160 ದಾಟಿದೆ. ತಿಲಕ್ ವರ್ಮಾ ಅವರಿಗೆ ಈಗಾಗಲೇ ಟೀಂ ಇಂಡಿಯಾದ ಭವಿಷ್ಯ ಹೇಳಲಾಗುತ್ತಿದೆ.
  2. ಲಕ್ನೋ ಸೂಪರ್‌ಜೈಂಟ್ಸ್‌ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಯುಷ್ ಬಡೋನಿ ಕೂಡ ಈ ಋತುವಿನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್‌ಗೆ ಲಕ್ನೋ ಸೂಪರ್‌ಜೈಂಟ್ಸ್ ಪಂದ್ಯವನ್ನು ಮುಗಿಸುವ ಜವಾಬ್ದಾರಿಯನ್ನು ವಹಿಸಿದೆ. ಅವರು ತಮ್ಮ ಪಾತ್ರಕ್ಕೆ ಸಂಪೂರ್ಣವಾಗಿ ನ್ಯಾಯ ಒದುಗಿಸುತ್ತಿದ್ದಾರೆ. 5 ಪಂದ್ಯಗಳಲ್ಲಿ, ಬಡೋನಿ 35 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 107 ರನ್ ಗಳಿಸಿದ್ದಾರೆ. ಅದರಲ್ಲಿ ಅವರು ಎರಡು ಬಾರಿ ಅಜೇಯರಾಗಿ ಉಳಿದಿದ್ದಾರೆ. ಬಡೋನಿ ಅರ್ಧಶತಕವನ್ನೂ ಬಾರಿಸಿದ್ದು ಅವರ ಸ್ಟ್ರೈಕ್ ರೇಟ್ ಕೂಡ 150 ರ ಆಸುಪಾಸಿನಲ್ಲಿದೆ.
  3. ಪಂಜಾಬ್ ಕಿಂಗ್ಸ್ ವಿಕೆಟ್ ಕೀಪರ್ ಜಿತೇಶ್ ಶರ್ಮಾ ತಮ್ಮ ವೇಗದ ಬ್ಯಾಟಿಂಗ್​ನಿಂದಾಗಿ ತಂಡಕ್ಕೆ ಎರಡು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಜಿತೇಶ್ ಇಲ್ಲಿಯವರೆಗೆ 3 ಪಂದ್ಯಗಳನ್ನು ಆಡಿದ್ದು, ಅವರು 39 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 79 ರನ್ ಗಳಿಸಿದ್ದಾರೆ. ಜಿತೇಶ್ 7 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಅಂಕಿ ಅಂಶವು ಅವನ ಪಾತ್ರವನ್ನು ಹೇಳುತ್ತದೆ. ಅಲ್ಲದೆ, ಈ ಬ್ಯಾಟ್ಸ್‌ಮನ್‌ನ ಸ್ಟ್ರೈಕ್ ರೇಟ್ ಕೂಡ 180 ದಾಟಿದೆ. ಜಿತೇಶ್ ವರ್ಮಾ ಅವರ ಹಿಟಿಂಗ್ ಪಂಜಾಬ್ ಕಿಂಗ್ಸ್ ಅನ್ನು ಅತ್ಯಂತ ಬಲಿಷ್ಠ ತಂಡವನ್ನಾಗಿ ಮಾಡಿದೆ.
  4. ಗುಜರಾತ್ ಟೈಟಾನ್ಸ್ ತಂಡದ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಕೂಡ ಸಾಕಷ್ಟು ಪ್ರಭಾವ ಬೀರಿದ್ದಾರೆ. ಸುದರ್ಶನ್ ಕೇವಲ 2 ಪಂದ್ಯಗಳನ್ನು ಆಡಿದ್ದಾರೆ ಆದರೆ ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ 35 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದರು. ಕೇವಲ 20 ಲಕ್ಷದ ಈ ಆಟಗಾರ ಸ್ಪಿನ್ ಮತ್ತು ವೇಗದ ಬೌಲರ್‌ಗಳ ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡುವ ಸುದರ್ಶನ್ ಅವರ ಫೀಲ್ಡಿಂಗ್ ಕೂಡ ಅದ್ಭುತವಾಗಿದೆ.
  5. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸುಯಶ್ ಪ್ರಭುದೇಸಾಯಿ ಅವರಿಗೆ ಚೊಚ್ಚಲ ಪಂದ್ಯದ ಅವಕಾಶ ನೀಡಿತು. ಈ ಬಲಗೈ ಬ್ಯಾಟ್ಸ್‌ಮನ್ ಮಧ್ಯಮ ಕ್ರಮಾಂಕದಲ್ಲಿ ಬಂದು ವೇಗವಾಗಿ ರನ್ ಗಳಿಸಿದರು. ಸುಯಾಶ್ ಅವರನ್ನು RCB 30 ಲಕ್ಷಕ್ಕೆ ಖರೀದಿಸಿದ್ದು, ಈ ಆಟಗಾರನು ಉತ್ತಮ ಬ್ಯಾಟ್ಸ್‌ಮನ್ ಮತ್ತು ಬೌಲರ್ ಆಗಿದ್ದಾನೆ. ಸುಯಶ್ ಅವರು ಚೆನ್ನೈ ವಿರುದ್ಧ 18 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ತಮ್ಮ ಪ್ರತಿಭೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿದ್ದಾರೆ. ಆರ್ಸಿಬಿಯ ಅಭ್ಯಾಸ ಪಂದ್ಯದಲ್ಲೂ ಈ ಆಟಗಾರ ಅರ್ಧಶತಕ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಇದನ್ನೂ ಓದಿ:IPL 2022: 5 ಇನ್ನಿಂಗ್ಸ್, ಕೇವಲ 107 ರನ್! ನಾಯಕತ್ವದಿಂದ ಕೆಳಗಿಳಿದರೂ ಬದಲಾಗಲಿಲ್ಲ ಕೊಹ್ಲಿ ಹಣೆಬರಹ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?