AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಮುಂಬೈ ಇಂಡಿಯನ್ಸ್​ಗೆ ಸತತ ಸೋಲು: ನೀವಿನ್ನು ತಂಡ ಬದಲಿಸಿ ಎಂದು ಕಾಲೆಳೆದ ಸೆಹ್ವಾಗ್

virender sehwag: ಅರ್ಷದೀಪ್ ಅವರ 18ನೇ ಓವರ್​ನಲ್ಲೇ ಪಂಜಾಬ್ ಗೆದ್ದುಕೊಂಡಿತು. ಆ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಕೇವಲ ಐದು ರನ್ ನೀಡಿದ್ದು ನಿಜಕ್ಕೂ ಅದ್ಭುತ. ಈ ಬೌಲರ್‌ನ ಎರಡು ಓವರ್‌ಗಳನ್ನು ಕೊನೆಯದಾಗಿ ಉಳಿಸಬೇಕು.

IPL 2022: ಮುಂಬೈ ಇಂಡಿಯನ್ಸ್​ಗೆ ಸತತ ಸೋಲು: ನೀವಿನ್ನು ತಂಡ ಬದಲಿಸಿ ಎಂದು ಕಾಲೆಳೆದ ಸೆಹ್ವಾಗ್
virender sehwag-mumbai indians
TV9 Web
| Edited By: |

Updated on:Apr 14, 2022 | 4:37 PM

Share

IPL 2022: ಐದು ಬಾರಿಯ ಐಪಿಎಲ್​ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿ ಸತತ ಐದು ಸೋಲುಗಳನ್ನು ಕಂಡಿದೆ. ಇತ್ತ ಪಂಜಾಬ್ ಕಿಂಗ್ಸ್ ವಿರುದ್ದ ಗೆಲ್ಲುವ ಅವಕಾಶವಿದ್ದರೂ ಅಂತಿಮವಾಗಿ ಮುಂಬೈ ಇಂಡಿಯನ್ಸ್ 12 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲಿನ ಬಗ್ಗೆ ಮಾತನಾಡಿರುವ ವೀರೇಂದ್ರ ಸೆಹ್ವಾಗ್, ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಬದಲಾಯಿಸುವಂತೆ ಕಿಚಾಯಿಸಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವ ಬದಲಿಗೆ ತಂಡವನ್ನು ಬದಲಿಸುವುದು ಉತ್ತಮ ಎಂದು ಸೆಹ್ವಾಗ್ ಹೇಳಿದ್ದಾರೆ. ಇದೀಗ ವೀರೇಂದ್ರ ಸೆಹ್ವಾಗ್ ಅವರ ಈ ಹೇಳಿಕೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಮುಂಬೈ ಇಂಡಿಯನ್ಸ್ ತಂಡದ ಸೋಲನ್ನು ವಿಮರ್ಶಿಸಿರುವ ಸೆಹ್ವಾಗ್, ಇಬ್ಬರು ಪ್ರಮುಖ ಆಟಗಾರರು ರನ್ ಔಟ್ ಆಗಿರುವುದು ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಅಲ್ಲದೆ ಸೂರ್ಯಕುಮಾರ್ ಯಾದವ್ ಕೊನೆಯ ಓವರ್ ವರೆಗೂ ಆಡಿದ್ದರೆ ಒಡಿಯನ್ ಸ್ಮಿತ್ ಓವರ್ ನಲ್ಲಿ 25 ರನ್ ಗಳಿಸಬಹುದಿತ್ತು. ಈ ಮೂಲಕ ಗೆಲುವು ದಾಖಲಿಸುವ ಅವಕಾಶವಿತ್ತು ಎಂದಿದ್ದಾರೆ.

ಒಂದು ತಂಡವು ಚೇಸಿಂಗ್ ವೇಳೆ ಇಬ್ಬರು ಆಟಗಾರರು ರನೌಟ್ ಆದರೆ ಅದು ಹೊಡೆತ. ತಿಲಕ್ ವರ್ಮಾ, ಕೀರನ್ ಪೊಲಾರ್ಡ್ ರನ್ ಔಟ್ ಆಗಿದ್ದು ಮುಂಬೈ ಪಾಲಿಗೆ ದುಬಾರಿಯಾಯಿತು. ಅಲ್ಲದೆ ಸೂರ್ಯಕುಮಾರ್ ಯಾದವ್ ಕೊನೆಯ ಓವರ್​ವರೆಗೂ ನಿಲ್ಲುವ ಪ್ರಯತ್ನ ಮಾಡಬೇಕಿತ್ತು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯದ ಟರ್ನಿಂಗ್ ಎಲ್ಲಿ? ವೀರೇಂದ್ರ ಸೆಹ್ವಾಗ್ ಅವರ ಪ್ರಕಾರ ತಿಲಕ್ ವರ್ಮಾ ಅವರ ರನ್ ಔಟ್ ಮುಂಬೈ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ‘ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರೂ, ಇಬ್ಬರು ಬ್ಯಾಟ್ಸ್‌ಮನ್‌ಗಳು ರನ್ ಔಟ್ ಆದರು. ತಿಲಕ್ ವರ್ಮಾ ರನೌಟ್ ಆದ ನಂತರ ಕೀರನ್ ಪೊಲಾರ್ಡ್ ಕೂಡ ರನೌಟ್ ಆದರು. ಪೊಲಾರ್ಡ್ ರನ್ ಔಟ್ ಆಗಿದ್ದು ಸೂರ್ಯಕುಮಾರ್ ಅವರ ತಪ್ಪು. ಆದರೆ ತಿಲಕ್ ವರ್ಮಾ ಅವರ ರನ್ ಔಟ್ ಪಂದ್ಯದ ಮಹತ್ವದ ತಿರುವು ಎಂದು ನಾನು ಭಾವಿಸುತ್ತೇನೆ. ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ರನೌಟ್ ಆಗಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ಅರ್ಷದೀಪ್ ಅವರ 18ನೇ ಓವರ್​ನಲ್ಲೇ ಪಂಜಾಬ್ ಗೆದ್ದುಕೊಂಡಿತು. ಆ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಕೇವಲ ಐದು ರನ್ ನೀಡಿದ್ದು ನಿಜಕ್ಕೂ ಅದ್ಭುತ. ಈ ಬೌಲರ್‌ನ ಎರಡು ಓವರ್‌ಗಳನ್ನು ಕೊನೆಯದಾಗಿ ಉಳಿಸಬೇಕು. ಓಡಿಯನ್ ಸ್ಮಿತ್ ಆರಂಭದಲ್ಲಿ ಬೌಲಿಂಗ್ ಮಾಡಬೇಕು ಅಥವಾ ಅವರ ಸ್ಥಾನದಲ್ಲಿ ಬೇರೆ ಬೌಲರ್‌ಗೆ ಅವಕಾಶ ನೀಡುವುದು ಉತ್ತಮ ಎಂದು ಸೆಹ್ವಾಗ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಸತತ ಸೋಲುಗಳಿಂದ ಕಂಗೆಟ್ಟು ನಿರಾಸೆ ಅನುಭವಿಸಿರುವ ಮುಂಬೈ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಂಡವನ್ನು ಬದಲಿಸುವುದು ಉತ್ತಮ ಎನ್ನುವ ಮೂಲಕ ಸೆಹ್ವಾಗ್ ಈಗ ಮುಂಬೈ ಇಂಡಿಯನ್ಸ್ ಫ್ಯಾನ್ಸ್​​ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?

Published On - 4:37 pm, Thu, 14 April 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?