Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಹರ್ಷಲ್ ಪಟೇಲ್ ಭಾರತದ 2ನೇ ಅತ್ಯುತ್ತಮ ಟಿ20 ಬೌಲರ್ ಎಂದ ಮಾಜಿ ಕ್ರಿಕೆಟಿಗ

Harshal Patel: ಆಯ್ಕೆಗಾರರು ಹೆಚ್ಚು ರನ್ ಗಳಿಸಿದವರು ಮತ್ತು ಹೆಚ್ಚು ವಿಕೆಟ್ ಪಡೆದವರು ಯಾರು ಎಂಬುದನ್ನು ನೋಡುವುದಕ್ಕಿಂತ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಆಯ್ಕೆ ಮಾಡುವುದು ಉತ್ತಮ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

IPL 2022: ಹರ್ಷಲ್ ಪಟೇಲ್ ಭಾರತದ 2ನೇ ಅತ್ಯುತ್ತಮ ಟಿ20 ಬೌಲರ್ ಎಂದ ಮಾಜಿ ಕ್ರಿಕೆಟಿಗ
Harshal Patel
Follow us
TV9 Web
| Updated By: ಝಾಹಿರ್ ಯೂಸುಫ್

Updated on:Apr 14, 2022 | 5:12 PM

IPL 2022: ಐಪಿಎಲ್​ನಲ್ಲಿ ಭಾರತೀಯ ಬೌಲರ್​ಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಆರ್​ಸಿಬಿ ವೇಗಿ ಹರ್ಷಲ್ ಪಟೇಲ್ ಅತ್ಯುತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ ಸೀಸನ್​ನಲ್ಲಿ 32 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದ ಹರ್ಷಲ್ ಪಟೇಲ್ ಈ ಬಾರಿ ಕೂಡ ಪ್ರಭಾವಿ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಓವರ್​ಗೆ ಕೇವಲ 5.50 ರ ಎಕನಾಮಿ ರೇಟ್​ನಲ್ಲಿ ನಾಲ್ಕು ಪಂದ್ಯಗಳಿಂದ ಆರು ವಿಕೆಟ್​ಗಳನ್ನು ಪಡೆದಿರುವ ಹರ್ಷಲ್ ಆರ್​ಸಿಬಿ ತಂಡದ ಟ್ರಂಪ್ ಕಾರ್ಡ್ ಎಂಬುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್​ನಲ್ಲೂ ಪಟೇಲ್​ಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಇತ್ತ ಹರ್ಷಲ್ ಪಟೇಲ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಹೊಗಳಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಆರ್​ಸಿಬಿ ವೇಗಿ ಭಾರತದ ಎರಡನೇ ಅತ್ಯುತ್ತಮ T20 ಬೌಲರ್ ಎಂದು ಬಣ್ಣಿಸಿದ್ದಾರೆ.

ನನ್ನ ಪ್ರಕಾರ ಈಗಲೂ ಜಸ್​ಪ್ರೀತ್ ಬುಮ್ರಾ ಭಾರತದ ಅತ್ಯುತ್ತಮ ಟಿ20 ವೇಗಿ. 2ನೇ ಸ್ಥಾನದಲ್ಲಿ ಹರ್ಷಲ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಅವರ ಬೌಲಿಂಗ್ ಲೈನಪ್ ಹಾಗೂ ವೇರಿಯೇಷನ್ ಅತ್ಯುತ್ತಮವಾಗಿದೆ. ಹೀಗಾಗಿ ಬುಮ್ರಾ ಬಿಟ್ಟರೆ ಹರ್ಷಲ್ ಪಟೇಲ್ ಭಾರತದ ಅತ್ಯುತ್ತಮ ಟಿ20 ಬೌಲರ್ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಇದೇ ವೇಳೆ ಮುಂಬರುವ T20 ವಿಶ್ವಕಪ್‌ನಲ್ಲಿ ಭಾರತದ ಇತರ ಆಯ್ಕೆಗಳ ಕುರಿತು ಮಾತನಾಡಿದ ಆಕಾಶ್ ಚೋಪ್ರಾ, ದೀಪಕ್ ಹೂಡಾ ಮತ್ತು ಅನುಭವಿ ದಿನೇಶ್ ಕಾರ್ತಿಕ್ ಅವರಂತಹ ಬ್ಯಾಟ್ಸ್​ಮನ್​ಗಳು ತಮ್ಮ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದಾರೆ. ದೀಪಕ್ ಹೂಡಾ ಇಲ್ಲಿಯವರೆಗೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಕೆಳ ಕ್ರಮಾಂಕದಲ್ಲಿ ಆಯ್ಕೆಯಾಗಬಹುದು. ಹಾಗೆಯೇ ದಿನೇಶ್ ಕಾರ್ತಿಕ್ ಬಗ್ಗೆಯೂ ಯೋಚಿಸಬಹುದು. ಏಕೆಂದರೆ ವಯಸ್ಸಿಗೂ ಇದಕ್ಕೂ ಏನು ಸಂಬಂಧ? ನೀವು ಚೆನ್ನಾಗಿ ಆಡುತ್ತಿದ್ದರೆ, ನೀವು ಚೆನ್ನಾಗಿ ಆಡುತ್ತೀರಿ. ಸೂರ್ಯಕುಮಾರ್ ಕುಲದೀಪ್ ಕೂಡ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಆದಾಗ್ಯೂ, ಆಯ್ಕೆಗಾರರು ಹೆಚ್ಚು ರನ್ ಗಳಿಸಿದವರು ಮತ್ತು ಹೆಚ್ಚು ವಿಕೆಟ್ ಪಡೆದವರು ಯಾರು ಎಂಬುದನ್ನು ನೋಡುವುದಕ್ಕಿಂತ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಆಯ್ಕೆ ಮಾಡುವುದು ಉತ್ತಮ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಆಟಗಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅವರಿಗೆ ಅವಕಾಶಗಳನ್ನು ನೀಡಿ, ಅದು ಮುಖ್ಯವಾಗಿದೆ. ಆರಂಭಿಕ ಆಟಗಾರನು ಹೆಚ್ಚು ರನ್ ಗಳಿಸಿದ ಮಾತ್ರಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಅವಕಾಶ ನೀಡಬೇಡಿ ಅಥವಾ ಮಧ್ಯಮ-ಓವರ್‌ಗಳ ಬೌಲರ್​ಗಳನ್ನು ಆಯ್ಕೆ ಮಾಡಬೇಡಿ. ಬದಲಾಗಿ ಯಾರು ಪ್ರಸ್ತುತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೋ ಅವರ ಬಗ್ಗೆ ಆಯ್ಕೆದಾರರು ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಆಕಾಶ್ ಚೋಪ್ರಾ ಹೇಳಿದರು.

ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?

Published On - 4:58 pm, Thu, 14 April 22

ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
‘ಗ್ಲೋಬಲ್ ಕನ್ನಡಿ’ಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
‘ಗ್ಲೋಬಲ್ ಕನ್ನಡಿ’ಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ