IPL 2022: 18 ವರ್ಷದ ಯುವ ಬ್ಯಾಟರ್​ನಿಂದ ಐಪಿಎಲ್ 2022ರ ಅತ್ಯಂತ ದೊಡ್ಡ ಸಿಕ್ಸ್

Biggest Six in IPL 2022: 18 ವರ್ಷ ಪ್ರಯಾದ ದಕ್ಷಿಣ ಆಫ್ರಿಕಾದ ಅಂಡರ್-19 ಆಟಗಾರ ಡೆವಾಲ್ಡ್ ಬ್ರೆವಿಸ್ ಐಪಿಎಲ್ 2022 ರಲ್ಲಿ ಅತಿ ದೊಡ್ಡದಾದ ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.

Apr 14, 2022 | 12:17 PM
Vinay Bhat

|

Apr 14, 2022 | 12:17 PM

ಬುಧವಾರ ನಡೆದ ಪಂಜಾಬ್ ಕಿಂಗ್ಸ್ (MI vs PBKS) ವಿರುದ್ಧದ ತನ್ನ ಐದನೇ ಪಂದ್ಯದಲ್ಲೂ ಮುಂಬೈ 12 ರನ್ಗಳ ಸೋಲುಂಡಿತು. ಸೋತರೂ ಎಲ್ಲರ ಮನ ಗೆದ್ದಿದ್ದು ಜೂನಿಯರ್ ಎಬಿಡಿ, ಬೇಬಿ ಎಬಿಡಿ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ (Dewald Brevis). ಇವರು ಕೇವಲ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಅಮೋಘ ಸಿಕ್ಸ್ ಸಿಡಿಸಿ 49 ರನ್ ಚಚ್ಚಿದರು. ಇದರ ಜೊತೆಗೆ ವಿಶೇಷ ಸಾಧನೆ ಕೂಡ ಮಾಡಿದರು.

1 / 5
18 ವರ್ಷ ಪ್ರಯಾದ ದಕ್ಷಿಣ ಆಫ್ರಿಕಾದ ಅಂಡರ್-19 ಆಟಗಾರ ಡೆವಾಲ್ಡ್ ಬ್ರೆವಿಸ್ ಐಪಿಎಲ್ 2022 ರಲ್ಲಿ ಅತಿ ದೊಡ್ಡದಾದ ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.

18 ವರ್ಷ ಪ್ರಯಾದ ದಕ್ಷಿಣ ಆಫ್ರಿಕಾದ ಅಂಡರ್-19 ಆಟಗಾರ ಡೆವಾಲ್ಡ್ ಬ್ರೆವಿಸ್ ಐಪಿಎಲ್ 2022 ರಲ್ಲಿ ಅತಿ ದೊಡ್ಡದಾದ ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.

2 / 5
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆವಾಲ್ಡ್ ಬ್ರೆವಿಸ್ ಅವರು ಬರೋಬ್ಬರಿ 112 ಮೀಟರ್ ಸಿಕ್ಸರ್ ಅನ್ನಿ ಸಿಡಸಿ ಮಿಂಚಿದರು. ಇದು ಐಪಿಎಲ್ 2022 ರಲ್ಲಿ ವರೆಗೆ ದಾಖಲಾದ ಅತ್ಯಂತ ದೊಡ್ಡ ಸಿಕ್ಸ್ ಆಗಿದೆ.

3 / 5
ಡೆವಾಲ್ಡ್ ಬ್ರೆವಿಸ್ ನಂತರ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಲಿಯಾಮ್ ಲಿವಿಂಗ್ ಸ್ಟೋನ್ 108 ಮೀ ಸಿಕ್ಸರ್ ಬಾರಿಸಿದ್ದಾರೆ. ಇದು ಟೂರ್ನಿಯಲ್ಲಿ ದಾಖಲಾದ ಎರಡನೇ ಅತಿ ಉದ್ದದ ಸಿಕ್ಸರ್ ಆಗಿದೆ. ಅಂತೆಯೆ 105 ಮೀಟರ್ ಮೂರನೇ ಅತಿ ಉದ್ದದ ಸಿಕ್ಸ್ ಆಗಿದ್ದು ಇದು ಕೂಡ ಲಿವಿಂಗ್ ಸ್ಟೋನ್ ಬ್ಯಾಟ್ ನಿಂದಲೇ ಬಂದಿದೆ.

4 / 5
ಇನ್ನು 102 ಮೀಟರ್ ಸಿಕ್ಸರ್ ಸಿಡಿಸಿದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ ಶಿವಂ ದುಬೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada