AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cup 2025: 9ನೇ ವಿಕೆಟ್​ಗೆ ಶತಕದ ಜೊತೆಯಾಟ; ಸ್ಮರಣೀಯ ಶತಕ ಸಿಡಿಸಿದ ಬೆಥ್ ಮೂನಿ

Beth Mooney's Heroic Century: 2025ರ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಂಡವು ಆರಂಭಿಕ ಕುಸಿತ ಕಂಡಿತು. ಕೇವಲ 76 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡ ಆಸೀಸ್ ತಂಡವನ್ನು ಅನುಭವಿ ಬೆತ್ ಮೂನಿ ತಮ್ಮ ಸ್ಮರಣೀಯ ಶತಕದೊಂದಿಗೆ ಪಾರು ಮಾಡಿದರು. 49 ಡಾಟ್ ಬಾಲ್‌ಗಳ ಹೊರತಾಗಿಯೂ, ಮೂನಿ 109 ರನ್ ಗಳಿಸಿ ತಂಡವನ್ನು 221 ರನ್‌ಗಳಿಗೆ ತಲುಪಿಸಿದರು. ಇದು ಶ್ರೀಲಂಕಾ ನೆಲದಲ್ಲಿ ಅವರ ಚೊಚ್ಚಲ ಹಾಗೂ ಏಕದಿನದ ಐದನೇ ಶತಕವಾಗಿದೆ.

World Cup 2025: 9ನೇ ವಿಕೆಟ್​ಗೆ ಶತಕದ ಜೊತೆಯಾಟ; ಸ್ಮರಣೀಯ ಶತಕ ಸಿಡಿಸಿದ ಬೆಥ್ ಮೂನಿ
Beth Mooney
ಪೃಥ್ವಿಶಂಕರ
|

Updated on:Oct 08, 2025 | 7:42 PM

Share

ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ (Australia vs Pakistan) ಮಹಿಳಾ ತಂಡಗಳ ನಡುವೆ 2025 ರ ಮಹಿಳಾ ವಿಶ್ವಕಪ್​ನ (Women’s World Cup) 9ನೇ ಪಂದ್ಯ ಶ್ರೀಲಂಕಾದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿ ಪಾಕ್ ಬೌಲರ್​ಗಳು ಸರಿಯಾಗಿಯೇ ಚಳ್ಳೆ ಹಣ್ಣು ತಿನ್ನಿಸಿದರು. ಬ್ಯಾಟಿಂಗ್ ವಿಭಾಗದಲ್ಲಿ ಸ್ಟಾರ್ ಆಟಗಾರ್ತಿಯರನ್ನೇ ಹೊಂದಿರುವ ಆಸ್ಟ್ರೇಲಿಯಾ ಒಂದು ಹಂತದಲ್ಲಿ 100 ರನ್ ಕಲೆಹಾಕುವುದು ಕಷ್ಟಕರ ಎಂದು ತೋರುತ್ತಿತ್ತು. ಏಕೆಂದರೆ ಕೇವಲ 76 ರನ್​ಗಳಿಗೆ ತಂಡದ ಪ್ರಮುಖ 7 ವಿಕೆಟ್​ಗಳು ಉದುರಿದವು. ಆದರೆ ತಂಡದ ಪರ ಏಕಾಂಗಿ ಹೋರಾಟ ನೀಡಿದ ಅನುಭವಿ ಆಟಗಾರ್ತಿ ಬೆತ್ ಮೂನಿ (Beth Mooney) ಸ್ಮರಣೀಯ ಶತಕ ಬಾರಿಸಿದರು. ಶತಕ ಬಾರಿಸಿದ್ದು ಮಾತ್ರವಲ್ಲದೆ ತಂಡವನ್ನು 50 ಓವರ್‌ಗಳಲ್ಲಿ 221 ರನ್‌ಗಳಿಗೆ ಕರೆದೊಯ್ಯಿದರು.

49 ಡಾಟ್ ಬಾಲ್‌ ಆಡಿದ ಬೆತ್ ಮೂನಿ

ಬೆತ್ ಮೂನಿ ಅವರ ಇನ್ನಿಂಗ್ಸ್‌ನ ಅತ್ಯಂತ ಆಶ್ಚರ್ಯಕರ ಅಂಶವೆಂದರೆ ಅವರು ಒಟ್ಟು 114 ಎಸೆತಗಳನ್ನು ಎದುರಿಸಿದರು, ಅದರಲ್ಲಿ 49 ಎಸೆತಗಳು ಯಾವುದೇ ಸ್ಕೋರ್ ಗಳಿಸಲಿಲ್ಲ. 49 ಡಾಟ್ ಬಾಲ್‌ಗಳನ್ನು ಎದುರಿಸಿದರೂ, ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 95 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 114 ಎಸೆತಗಳನ್ನು ಎದುರಿಸಿದ ಮೂನಿ 11 ಬೌಂಡರಿ ಸಹಿತ 109 ರನ್ ಬಾರಿಸಿ ಔಟಾದರು.

ಆದಾಗ್ಯೂ ಈ ಪಂದ್ಯದಲ್ಲಿ ಮೂನಿ ಹೊರತುಪಡಿಸಿ ಉಳಿದ ಆಟಗಾರ್ತಿಯರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ನಾಯಕಿ ಅಲಿಸಾ ಹೀಲಿ 20 ರನ್‌, ಲಿಚ್‌ಫೀಲ್ಡ್ 10 ರನ್‌, ಎಲಿಸ್ ಪೆರ್ರಿ 5 ರನ್‌ ಮತ್ತು ಸದರ್ಲ್ಯಾಂಡ್ ಮತ್ತು ಗಾರ್ಡ್ನರ್ ತಲಾ 1 ರನ್‌ಗಳಿಗೆ ಔಟಾದರು. ಆದಾಗ್ಯೂ ಒಂದು ತುದಿಯಲ್ಲಿ ಭದ್ರವಾಗಿ ನಿಂತ ಬೆತ್ ಮೂನಿ, 10 ನೇ ಕ್ರಮಾಂಕದಲ್ಲಿ ಬಂದ ಎಲಾನಾ ಕಿಂಗ್ ಅವರೊಂದಿಗೆ 106 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಲಂಕಾದಲ್ಲಿ ಮೂನಿಗೆ ಚೊಚ್ಚಲ ಶತಕ

ಬೆತ್ ಮೂನಿಗೆ ಇದು ಶ್ರೀಲಂಕಾದಲ್ಲಿ ಮೊದಲ ಶತಕವಾಗಿದೆ. ಏಕೆಂದರೆ ಶ್ರೀಲಂಕಾ ನೆಲದಲ್ಲಿ ಮೊದಲ ಏಕದಿನ ಪಂದ್ಯವನ್ನಾಡಿದ ಮೂನಿ 2016 ರಲ್ಲಿ ಶ್ರೀಲಂಕಾದಲ್ಲಿ ಟಿ20 ಪಂದ್ಯವನ್ನು ಆಡಿದ್ದರು. ಇದು ಶ್ರೀಲಂಕಾ ನೆಲದಲ್ಲಿ ಮೂನಿ ಅವರ ಮೊದಲ ಶತಕ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅವರ ಐದನೇ ಶತಕವಾಗಿದೆ. ಇದು ಪಾಕಿಸ್ತಾನ ವಿರುದ್ಧ ಮೂನಿ ಅವರ ಎರಡನೇ ಶತಕವಾಗಿದೆ. ಹಾಗೆಯೇ ಮೂನಿ ಭಾರತದ ವಿರುದ್ಧ ಎರಡು ಶತಕ ಮತ್ತು ನ್ಯೂಜಿಲೆಂಡ್ ವಿರುದ್ಧ ಒಂದು ಶತಕವನ್ನು ಬಾರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Wed, 8 October 25

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ