AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲೆಂಡ್‌ ವಿರುದ್ಧ ದುಬಾರಿಯಾದ ಭುವನೇಶ್ವರ್: ಆದರೂ ತಂಡಕ್ಕೆ ಇವರೇ ಬಲ

ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದ ನಂತರ, ನಾಲ್ಕು ವರ್ಷಗಳ ಬಳಿಕ ಟೀಂ ಇಂಡಿಯಾಗೆ ಮರಳಿದ ಭುವನೇಶ್ವರ್ ಕುಮಾರ್ ತಮ್ಮ ಕಂಬ್ಯಾಕ್ ಬಗ್ಗೆ ಮಾತನಾಡಿದ್ದಾರೆ. ಯುವ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಮತ್ತಿತರರೊಂದಿಗೆ ಅನುಭವ ಹಂಚಿಕೊಳ್ಳುತ್ತಿರುವ ಕುರಿತು ಹೇಳಿದ್ದಾರೆ. ಕಂಬ್ಯಾಕ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ದೇಶವನ್ನು ಪ್ರತಿನಿಧಿಸುವುದು ಸಂತಸ ತಂದಿದೆ ಎಂದಿದ್ದಾರೆ. ಟಿ20 ಕ್ರಿಕೆಟ್ ಸವಾಲುಗಳು ಮತ್ತು ಯುವ ಪ್ರತಿಭೆಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ದುಬಾರಿಯಾದ ಭುವನೇಶ್ವರ್: ಆದರೂ ತಂಡಕ್ಕೆ ಇವರೇ ಬಲ
ಭುವನೇಶ್ವರ್ ಕುಮಾರ್
ಪೃಥ್ವಿಶಂಕರ
|

Updated on:Oct 27, 2026 | 10:41 PM

Share

ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಟಿ20 ಸರಣಿಯ ಮೂರನೇ ಟಿ20 ಪಂದ್ಯವನ್ನು ಭಾರತ ಗೆದ್ದುಕೊಂಡ ಬೆನ್ನಲ್ಲೇ, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ತಮ್ಮ ನಾಲ್ಕು ವರ್ಷಗಳ ಬಳಿಕದ ಟೀಂ ಇಂಡಿಯಾ ಕಂಬ್ಯಾಕ್ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಯುವ ಬೌಲರ್‌ಗಳೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಿರುವ ಬಗ್ಗೆಯೂ ಮನದ ಮಾತುಗಳನ್ನು ತೆರೆದಿಟ್ಟಿದ್ದಾರೆ. ಬಹಳ ದಿನಗಳ ಬಳಿಕ ತಂಡಕ್ಕೆ ಮರಳಿರುವ ಭುವನೇಶ್ವರ್ ಕುಮಾರ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿರುವ ಭುವಿ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದಾರೆ.

ಯುವ ಬೌಲರ್‌ಗಳಿಗೆ ಭುವಿ ಹೇಳಿದ್ದೇನು?

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಯುವ ಬೌಲರ್‌ಗಳಾದ ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಪ್ರಿನ್ಸ್ ಯಾದವ್ ಅವರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಿರುವ ಬಗ್ಗೆ ಭುವನೇಶ್ವರ್ ಮಾತನಾಡಿದರು.

ಯುವ ಆಟಗಾರರಲ್ಲಿ ಕಲಿಯಬೇಕೆಂಬ ಆಸಕ್ತಿ ಹೆಚ್ಚಾಗಿದೆ. ಅವರು ಹೊಸಬರಾಗಿದ್ದರೂ ಅನುಭವದ ಕೊರತೆ ಇಲ್ಲ. ಏಕೆಂದರೆ ಅವರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅದೂ ಟಿ20 ಕ್ರಿಕೆಟ್ ಆಗಿದ್ದು, ಉನ್ನತ ಮಟ್ಟದಲ್ಲಿ ಆಡಿದ ಅನುಭವ ಅವರಿಗೆ ಸಿಗುತ್ತಿದೆ. ಎಲ್ಲರೂ ಏನಾದರೂ ಹೊಸದನ್ನು ಕಲಿಯಲು ಬಯಸುತ್ತಾರೆ. ನಮ್ಮಿಂದ ಏನು ಹೇಳಲು ಸಾಧ್ಯವೋ ಅದನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ.

ಪ್ರಬುದ್ಧತೆ ಬಹಳ ಮುಖ್ಯ

ಆದರೆ ಟಿ20 ಕ್ರಿಕೆಟ್ ಈಗ ತುಂಬಾ ಕಠಿಣವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ, ಆಟಗಾರನಿಗೆ ಅವಕಾಶ ನೀಡಿ ನಿಧಾನವಾಗಿ ಎಲ್ಲ ಮಾದರಿಗಳಿಗೂ ಹೊಂದಿಕೊಳ್ಳಲು ಬಿಡುವ ಪರಿಸ್ಥಿತಿ ಇತ್ತು. ಆದರೆ ಈಗ ಹಾಗಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಪ್ರಬುದ್ಧತೆ ಬಹಳ ಮುಖ್ಯ .

ಈ ಎಲ್ಲ ಬೌಲರ್‌ಗಳು ಐಪಿಎಲ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಮತ್ತು ಉತ್ತಮ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್‌ನ ಪರಿಸ್ಥಿತಿಗಳ ಬಗ್ಗೆ ಇರಲಿ ಅಥವಾ ಸಾಮಾನ್ಯವಾಗಿ ಬೌಲಿಂಗ್ ಅನುಭವದ ಬಗ್ಗೆಯಾಗಲಿ, ನಾನು ಅವರೊಂದಿಗೆ ನನ್ನ ತಿಳಿವಳಿಕೆಯನ್ನು ಹಂಚಿಕೊಳ್ಳಬಹುದು. ಆದರೆ ಅವರು ಈಗಾಗಲೇ ಉತ್ತಮವಾಗಿ ಆಡುತ್ತಿದ್ದಾರೆ ಎಂದು ಭುವನೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.

5 ಓವರ್‌ಗಳಲ್ಲಿ 100 ರನ್! ಇಂತಹ ಆಟ ನೋಡೇ ಇಲ್ಲ ಎಂದ ಶ್ರೇಯಸ್ ಅಯ್ಯರ್

ಕಂಬ್ಯಾಕ್ ಬಗ್ಗೆ ಭುವಿ ಹೇಳಿದ್ದೇನು?

ನಾಲ್ಕು ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಬಗ್ಗೆ ಮಾತನಾಡಿದ ಭುವನೇಶ್ವರ್, ಮತ್ತೆ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು. ‘ನನ್ನ ಕಂಬ್ಯಾಕ್ ಬಗ್ಗೆ ಹೇಳುವುದಾದರೆ, ಭಾರತ ತಂಡವನ್ನು ಮತ್ತೆ ಪ್ರತಿನಿಧಿಸುತ್ತಿರುವುದು ಖುಷಿ ನೀಡಿದೆ. ಹಲವು ವರ್ಷಗಳ ಕಾಲ ನಾನು ತಂಡದಲ್ಲಿ ಇರಲಿಲ್ಲ. ಈಗ ಮತ್ತೊಮ್ಮೆ ಭಾರತ ಪರ ಆಡುವ ಅವಕಾಶ ಸಿಕ್ಕಿರುವುದು ಸಂತೋಷದ ವಿಚಾರ. ಮತ್ತೆ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದೇನೆ ಎಂದು ಭುವನೇಶ್ವರ್ ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 pm, Tue, 27 October 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಮಟ್ಕಾ-ಜೂಜಾಟ ತಡೆಯದಿದ್ದರೆ ಧರಣಿ ಎಂದ ಕಾಂಗ್ರೆಸ್​ ಶಾಸಕ
ಮಟ್ಕಾ-ಜೂಜಾಟ ತಡೆಯದಿದ್ದರೆ ಧರಣಿ ಎಂದ ಕಾಂಗ್ರೆಸ್​ ಶಾಸಕ
ಮನೆ ಮನೆಗೆ ನಲ್ಲಿ ಇದ್ದೂ ಹನಿಯೂ ನೀರಿಲ್ಲ
ಮನೆ ಮನೆಗೆ ನಲ್ಲಿ ಇದ್ದೂ ಹನಿಯೂ ನೀರಿಲ್ಲ
ರಿಯಾದ್‌ನಲ್ಲಿರುವ ಸೌದಿ ರಕ್ಷಣಾ ಸಚಿವಾಲಯದ ಮೇಲೆ ಹೌತಿಯಿಂದ ಕ್ಷಿಪಣಿ ದಾಳಿ
ರಿಯಾದ್‌ನಲ್ಲಿರುವ ಸೌದಿ ರಕ್ಷಣಾ ಸಚಿವಾಲಯದ ಮೇಲೆ ಹೌತಿಯಿಂದ ಕ್ಷಿಪಣಿ ದಾಳಿ
‘ಅವನಿಗೆ ಧಮ್ ಇದ್ರೆ ಹೊರಗೆ ಬಂದಾಗ ನನ್ನ ಫೇಸ್ ಮಾಡಲಿ’: ದರ್ಶನ್ ಗರಂ
‘ಅವನಿಗೆ ಧಮ್ ಇದ್ರೆ ಹೊರಗೆ ಬಂದಾಗ ನನ್ನ ಫೇಸ್ ಮಾಡಲಿ’: ದರ್ಶನ್ ಗರಂ
99 ಲಕ್ಷ ವೋಟ್ ಡಿಲೀಟ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
99 ಲಕ್ಷ ವೋಟ್ ಡಿಲೀಟ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಸ್ಟಿಂಗ್ ಚರ್ಚೆ ನಡುವೆ ಕುಮಾರಸ್ವಾಮಿ ಭೇಟಿಯಾದ ರಾಜೇಂದ್ರ ರಾಜಣ್ಣ
ಸ್ಟಿಂಗ್ ಚರ್ಚೆ ನಡುವೆ ಕುಮಾರಸ್ವಾಮಿ ಭೇಟಿಯಾದ ರಾಜೇಂದ್ರ ರಾಜಣ್ಣ
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹೈಕಮಾಂಡ್ ಅಂಗಳಕ್ಕೆ ಸ್ಟಿಂಗ್ ಆಪರೇಷನ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿದ್ದು
ಹೈಕಮಾಂಡ್ ಅಂಗಳಕ್ಕೆ ಸ್ಟಿಂಗ್ ಆಪರೇಷನ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿದ್ದು
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್