ಕ್ರಿಕೆಟ್ ಅಂಗಳದ ಮಹಾಸಮರ ಏಕದಿನ ವಿಶ್ವಕಪ್ಗೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 5 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಗ್ಲೆಂಡ್-ನ್ಯೂಝಿಲೆಂಡ್ ನಡುವಣ ಪಂದ್ಯದ ಮೂಲಕ ವಿಶ್ವಕಪ್ಗೆ ಚಾಲನೆ ದೊರೆಯಲಿದೆ. ಆದರೆ ಈ ಪಂದ್ಯದ 40 ಸಾವಿರ ಟಿಕೆಟ್‌ಗಳನ್ನು ಭಾರತೀಯ ಜನತಾ ಪಾರ್ಟಿ ಉಚಿತವಾಗಿ ನೀಡುತ್ತಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಬಿಜೆಪಿ ಪಕ್ಷವು ಅಕ್ಟೋಬರ್ 5 ರಂದು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರನ್ನು ಒಟ್ಟುಗೂಡಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ಉಚಿತ ಟಿಕೆಟ್‌ಗಳನ್ನು ನೀಡುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಹಮದಾಬಾದ್ ಕಾರ್ಪೊರೇಷನ್ನ ಎಲ್ಲ 48 ವಾರ್ಡ್ಗಳ ಮಹಿಳೆಯರಿಗೆ ಈ ಆಫರ್ ನೀಡಲಾಗಿದ್ದು, ಪ್ರತಿ ವಾರ್ಡ್ನಿಂದ 800 ಮಹಿಳೆಯರಂತೆ ಸೇರಿ ಬರೋಬ್ಬರಿ 40,000 ಮಹಿಳೆಯರಿಗೆ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಈ ಪಂದ್ಯವನ್ನು ವೀಕ್ಷಿಸಲು ಬರುವ ಮಹಿಳೆಯರಿಗೆ ಉಚಿತ ಉಪಾಹಾರ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ದೈನಿಕ್ ಭಾಸ್ಕರ್ ಪ್ರಕಟಿಸಿರುವ ವರದಿಯಲ್ಲಿ ತಿಳಿಸಲಾಗಿದೆ.
The BJP set to gather more than 40,000 women for the England Vs New Zealand World Cup match at the Narendra Modi Stadium.
They’ll get free tickets and also breakfast. (Dainik Bhaskar). pic.twitter.com/0pc29YXFuh
— Mufaddal Vohra (@mufaddal_vohra) October 3, 2023
ಇದಾಗ್ಯೂ ಬಿಜೆಪಿ ಇಂತಹದೊಂದು ಆಫರ್ ನೀಡುತ್ತಿರುವುದೇಕೆ ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಕೆಲವರು ಇದು ಮುಂಬುರವ ಲೋಕಸಭಾ ಚುನಾವಣಾ ಗಿಮಿಕ್ ಎಂದರೆ, ಮತ್ತೆ ಕೆಲವರು ಉದ್ಘಾಟನಾ ಪಂದ್ಯದ ವೇಳೆ ವೀಕ್ಷಕರ ಕೊರತೆಯನ್ನು ನೀಗಿಸಲು ಮಾಡಿದ ಉಪಾಯ ಎಂಬ ವಾದವನ್ನು ಸೋಷಿಯಲ್ ಮೀಡಿಯಾದಲ್ಲಿ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ICC World Cup 2023: ಏಕದಿನ ವಿಶ್ವಕಪ್ನಿಂದ 8 ಆಟಗಾರರು ಔಟ್
ಅಕ್ಟೋಬರ್ 5 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಅಕ್ಟೋಬರ್ 14 ರಂದು ಅಹಮದಾಬಾದ್ನಲ್ಲಿ ಭಾರತ-ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 7:29 pm, Tue, 3 October 23