Ranji Trophy: ರಣಜಿ ಟ್ರೋಫಿ ಗೆದ್ದರೆ ಪ್ರತಿ ಆಟಗಾರರಿಗೆ BMW ಕಾರು ಮತ್ತು 1 ಕೋಟಿ ರೂ: HCA

Ranji Trophy 2024: ಈ ಬಾರಿಯ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್​ನ ಎಲ್ಲಾ ಪಂದ್ಯಗಳು ಫೆಬ್ರವರಿ 23 ರಿಂದ ಶುರುವಾಗಲಿದ್ದು, ಫೆಬ್ರವರಿ 27 ರವರೆಗೆ ನಡೆಯಲಿದೆ. ಮೊದಲ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ದ್ವಿತೀಯ ಕ್ವಾರ್ಟರ್ ಫೈನಲ್​ನಲ್ಲಿ ಬರೋಡ ವಿರುದ್ಧ ಮುಂಬೈ ಕಣಕ್ಕಿಳಿಯಲಿದೆ.

Ranji Trophy: ರಣಜಿ ಟ್ರೋಫಿ ಗೆದ್ದರೆ ಪ್ರತಿ ಆಟಗಾರರಿಗೆ BMW ಕಾರು ಮತ್ತು 1 ಕೋಟಿ ರೂ: HCA
Tilak Varma-BMW
Edited By:

Updated on: Feb 21, 2024 | 12:52 PM

ಹೈದರಾಬಾದ್ ತಂಡವು ಮುಂದಿನ ಮೂರು ವರ್ಷಗಳಲ್ಲಿ ರಣಜಿ ಟ್ರೋಫಿ (Ranji Trophy) ಗೆದ್ದರೆ ಪ್ರತಿಯೊಬ್ಬ ಆಟಗಾರನಿಗೆ BMW ಕಾರು ಮತ್ತು 1 ಕೋಟಿ ರೂ. ನೀಡುವುದಾಗಿ ಹೈದರಾಬಾದ್​ ಕ್ರಿಕೆಟ್ ಅಸೋಷಿಯೇಷನ್ ಅಧ್ಯಕ್ಷ ಜಗನ್ ಮೋಹನ್ ರಾವ್ ವಾಗ್ದಾಣ ಮಾಡಿದ್ದಾರೆ. ಈ ಬಾರಿಯ ರಣಜಿ ಟೂರ್ನಿಯಲ್ಲಿ ಪ್ಲೇಟ್ ಗ್ರೂಪ್​ನಲ್ಲಿ ಕಣಕ್ಕಿಳಿದಿದ್ದ ಹೈದರಾಬಾದ್ ತಂಡವು ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ ಮುಂದಿನ ಸೀಸನ್​ಗಾಗಿ ಎಲೈಟ್ ಗ್ರೂಪ್​ಗೆ ಅರ್ಹತೆ ಪಡೆದುಕೊಂಡಿದೆ.

ಈ ಸಾಧನೆಗಾಗಿ ಹೈದರಾಬಾದ್ ಆಟಗಾರರನ್ನು ಸನ್ಮಾನಿಸಿದ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (HCA), ಪ್ಲೇಟ್ ಗ್ರೂಪ್ ಚಾಂಪಿಯನ್‌ ತಂಡಕ್ಕೆ 10 ಲಕ್ಷ ರೂ. ಬಹುಮಾನ ಘೋಷಿಸಿದೆ. ಹಾಗೆಯೇ ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ 50,000 ರೂ. ಪ್ರೋತ್ಸಾಹ ಮೊತ್ತ ನೀಡಿದೆ.

ಇದೇ ವೇಳೆ ಮಾತನಾಡಿದ ಹೈದರಾಬಾದ್ ಕ್ರಿಕೆಟ್​ ಅಸೋಸಿಯೇಷನ್ ​​ಮುಖ್ಯಸ್ಥ ಜಗನ್ ಮೋಹನ್ ರಾವ್, ಮುಂದಿನ ಮೂರು ವರ್ಷಗಳಲ್ಲಿ ಹೈದರಾಬಾದ್ ತಂಡವು ರಣಜಿ ಟ್ರೋಫಿಯಲ್ಲಿ ಚಾಂಪಿಯನ್​ ಪಟ್ಟಕ್ಕೇರಿದರೆ ಪ್ರತಿಯೊಬ್ಬರಿಗೂ ಭರ್ಜರಿ ಬಹುಮಾನ ನೀಡಲಿದ್ದೇವೆ. ನೀವು ಕಪ್ ಗೆದ್ದರೆ ಪ್ರತಿ ಆಟಗಾರನಿಗೆ ಬಿಎಂಡಬ್ಲ್ಯು ಕಾರು ನೀಡುತ್ತೇವೆ. ಹಾಗೆಯೇ ತಂಡಕ್ಕೆ 1 ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ.

89 ವರ್ಷಗಳ ಇತಿಹಾಸ ಹೊಂದಿರುವ ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ತಂಡವು ಕೇವಲ 2 ಬಾರಿ ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. 1937-38 ರಲ್ಲಿ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದಿದ್ದ ಹೈದರಾಬಾದ್ ಬಳಿಕ 1986-87 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಆದರೆ ಕಳೆದ ಎರಡು ದಶಕಗಳಿಂದ ಹೈದರಾಬಾದ್ ತಂಡಕ್ಕೆ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಅದರಲ್ಲೂ ಕಳೆದ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ಈ ಬಾರಿ ಪ್ಲೇಟ್​ ಗ್ರೂಪ್​ನಲ್ಲಿ ಕಣಕ್ಕಿಳಿದಿತ್ತು. ಇದೀಗ ಪ್ಲೇಟ್ ಗ್ರೂಪ್​ ಫೈನಲ್​ನಲ್ಲಿ ಮೇಘಾಲಯ ತಂಡಕ್ಕೆ ಸೋಲುಣಿಸಿ ಮುಂದಿನ ರಣಜಿ ಸೀಸನ್​ಗೆ ಎಲೈಟ್ ಗ್ರೂಪ್​ಗೆ ಅರ್ಹತೆ ಪಡೆದುಕೊಂಡಿದೆ.

ಅದರಂತೆ ಮುಂದಿನ ಸೀಸನ್​ ರಣಜಿ ಟ್ರೋಫಿ ಪೈಪೋಟಿಯಲ್ಲಿ ಹೈದರಾಬಾದ್ ತಂಡ ಕೂಡ ಕಾಣಿಸಿಕೊಳ್ಳಲಿದೆ. ಒಂದು ವೇಳೆ 2024-25 ರಿಂದ 2026-27 ರ ನಡುವೆ ಹೈದರಾಬಾದ್ ತಂಡ​ ರಣಜಿ ಟ್ರೋಫಿ ಎತ್ತಿ ಹಿಡಿದರೆ ಪ್ರತಿ ಆಟಗಾರನಿಗೆ BMW ಕಾರು ಸಿಗಲಿದೆ. ಹಾಗೆಯೇ ತಂಡಕ್ಕೆ 1 ಕೋಟಿ ರೂ. ಬಹುಮಾನ ಮೊತ್ತ ನೀಡುವುದಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಘೋಷಿಸಿದೆ.

ಇದನ್ನೂ ಓದಿ: IPL 2024: ಐಪಿಎಲ್​ನ ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟ

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್​:

ಈ ಬಾರಿಯ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್​ ಹಂತಕ್ಕೆ ಬಂದು ನಿಂತಿದೆ. ಕ್ವಾರ್ಟರ್​ ಫೈನಲ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ ಗೆಲ್ಲುವ 4 ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ. ಅದರಂತೆ ಫೆಬ್ರವರಿ 23 ರಿಂದ ಕ್ವಾರ್ಟರ್ ಫೈನಲ್ ಮುಖಾಮುಖಿಯಾಗಿ ಶುರುವಾಗಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ.

  1. ಕರ್ನಾಟಕ vs ವಿದರ್ಭ (ವಿಸಿಎ ಸ್ಟೇಡಿಯಂ, ನಾಗ್​ಪುರ್)
  2. ಮುಂಬೈ vs ಬರೋಡ (ಎಂಸಿಎ ಸ್ಟೇಡಿಯಂ, ಮುಂಬೈ)
  3. ತಮಿಳುನಾಡು vs ಸೌರಾಷ್ಟ್ರ (ಎಸ್​ಆರ್​ಸಿ ಗ್ರೌಂಡ್, ಕೊಯಂಬತ್ತೂರು)
  4. ಮಧ್ಯ ಪ್ರದೇಶ vs ಆಂಧ್ರ ಪ್ರದೇಶ (ಹೋಲ್ಕರ್ ಸ್ಟೇಡಿಯಂ, ಇಂದೋರ್)