ಅಷ್ಟು ಸುಲಭವಾಗಿ ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುತ್ತೇವೆ! ಪತ್ರಕರ್ತರ ವಿರುದ್ಧದ ಸಾಹ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ
BCCI: ಮೊದಲು ಆ ಪರ್ತಕರ್ತ ಯಾರು ಮತ್ತು ನಿಜವಾದ ಸಂದರ್ಭ ಏನು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಾವು ಅದರಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಧುಮಾಲ್ ಹೇಳಿದರು.
ಟೀಂ ಇಂಡಿಯಾ (Team India) ಟೆಸ್ಟ್ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ (Wriddhiman Saha) ಅವರು ಹಿರಿಯ ಪತ್ರಕರ್ತರೊಬ್ಬರು ತನಗೆ ಬೆದರಿಕೆ ಸಂದೇಶಗಳನ್ನು ವಾಟ್ಸಾಪ್ ಕಳುಹಿಸಿದ್ದಾರೆ ಎಂಬ ಆರೋಪವನ್ನು ಹೊರಿಸಿದ್ದು, ಈ ವಿಚಾರವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ವಿಷಯವನ್ನು ಪರಿಶೀಲಿಸುತ್ತಿದ್ದು, ಅದರಂತೆ ಕ್ರಮ ಕೈಗೊಳ್ಳಲಿದೆ ಎಂದು ಮಂಡಳಿಯ ಖಜಾಂಚಿ ಅರುಣ್ ಧುಮಾಲ್ (Arun Dhumal) ಹೇಳಿದ್ದಾರೆ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪರಿಶೀಲಿಸುತ್ತಿದ್ದೇವೆ ಎಂದು ಧುಮಾಲ್ ಟಿವಿ9 ಅಂಗಸಂಸ್ಥೆ ನ್ಯೂಸ್ 9 ಲೈವ್‌ಗೆ ತಿಳಿಸಿದರು. ಮೊದಲು ಆ ಪರ್ತಕರ್ತ ಯಾರು ಮತ್ತು ನಿಜವಾದ ಸಂದರ್ಭ ಏನು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಾವು ಅದರಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಧುಮಾಲ್ ಹೇಳಿದರು.
ಏನದು ಸಂದೇಶಗಳ ಸ್ಕ್ರೀನ್‌ಶಾಟ್?
37ರ ಹರೆಯದ ಸಹಾ ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಒಟ್ಟಾರೆ ಸರಣಿಯಿಂದ ಹೊರಗುಳಿದ ನಾಲ್ವರು ಹಿರಿಯ ಆಟಗಾರರಲ್ಲಿ ಸಹಾ ಒಬ್ಬರು. ಟೀಂ ಇಂಡಿಯಾ ಪ್ರಕಟವಾದ ಒಂದು ದಿನದ ನಂತರ, ಸಹಾ ಟ್ವಿಟರ್‌ನಲ್ಲಿ ಹಿರಿಯ ಪತ್ರಕರ್ತರು ಕಳುಹಿಸಿದ್ದಾರೆ ಎನ್ನಲಾದ ಸಂದೇಶಗಳ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆ ಸಂದೇಶದಲ್ಲಿ ಪರ್ತಕರ್ತ, ನನ್ನ ಜೊತೆಗೆ ಒಂದು ಸಂದರ್ಶನ ಮಾಡಿ, ಒಳ್ಳೆಯದಾಗುತ್ತದೆ, ನೀವು ಎಲ್ಲರಿಗೂ ಸಂದರ್ಶನ ನೀಡಲು ಬಯಸಿದರೆ, ನಾನೇನು ಬಲವಂತ ಮಾಡುವುದಿಲ್ಲ. ಅವರು(ಆಯ್ಕೆ ಸಮಿತಿ) ಅತ್ಯುತ್ತಮವಾದ ಒಬ್ಬ ವಿಕೆಟ್ ಕೀಪರ್ ಆಯ್ಕೆ ಮಾಡಿದ್ದಾರೆ. ನೀವು ಅತ್ಯುತ್ತಮವಲ್ಲದ 11 ಪತ್ರಕರ್ತರನ್ನು ಆಯ್ಕೆ ಮಾಡಿಕೊಂಡಿರುವುದು ನನ್ನ ಪ್ರಕಾರ ಉತ್ತಮ ನಿರ್ಧಾರವಲ್ಲ. ನೀವು ನಿಮಗೆ ಯಾರು ಸಹಾಯ ಮಾಡಬಲ್ಲರೋ ಅವರನ್ನು ಆಯ್ಕೆ ಮಾಡಿ” ಎಂದು ವಾಟ್ಸ್ಆ್ಯಪ್ ಮೂಲಕ ಸರಣಿ ಸಂದೇಶ ಕಳಹಿಸಿದ್ದಾರೆ.ಆದರೆ, ಅವರ ಕರೆಯನ್ನು ಸಹಾ ಸ್ವೀಕರಿಸದ್ದಕ್ಕೆ ಕೋಪಗೊಂಡಿರುವ ಆ ಪತ್ರಕರ್ತ, ನೀವು ನನಗೆ ಕರೆ ಮಾಡಿಲ್ಲ, ಇನ್ನು ಯಾವತ್ತೂ ನಾನು ನಿಮ್ಮ ಸಂದರ್ಶನ ಮಾಡುವುದಿಲ್ಲ. ಈ ಅವಮಾನವನ್ನು ನಾನು ಸಾಮಾನ್ಯ ಎಂದು ಪರಿಗಣಿಸುವುದಿಲ್ಲ. ನಾನು ಇದನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ. ಇದು ನೀವು ಮಾಡಬೇಕಾದ ಕೆಲಸವಾಗಿರಲಿಲ್ಲ,” ಎಂದು ಕೋಪದಿಂದ ಸಂದೇಶ ಕಳುಹಿಸಿದ್ದರು.
After all of my contributions to Indian cricket..this is what I face from a so called “Respected” journalist! This is where the journalism has gone. pic.twitter.com/woVyq1sOZX
— Wriddhiman Saha (@Wriddhipops) February 19, 2022
ಸಾಹಗೆ ಪ್ರಮುಖರ ಸಾಥ್
ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಪಾರ್ಥಿವ್ ಪಟೇಲ್, ಆರ್‌ಪಿ ಸಿಂಗ್, ವೆಂಕಟೇಶ್ ಪ್ರಸಾದ್, ಐಪಿಎಲ್ ಆಡಳಿತ ಮಂಡಳಿಯ ಆಟಗಾರರ ಪ್ರತಿನಿಧಿ ಪ್ರಗ್ಯಾನ್ ಓಜಾ ಮತ್ತು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಸಹ ಸಾಹ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
Please name him wriddhi! I promise you as a representative of players, I will make sure our cricket community boycotts this so called journalist!! https://t.co/XmorYAyGvW
— Pragyan Ojha (@pragyanojha) February 20, 2022
ಸಾಹ ಅವರು ತಮ್ಮ ಟ್ವೀಟ್ ಸುತ್ತಲಿನ ವಿವಾದದ ಬಗ್ಗೆ ಹಲವಾರು ಮಾಧ್ಯಮ ವೇದಿಕೆಗಳೊಂದಿಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಹ ಅವರನ್ನು ಬೆಂಬಲಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಂಡಳಿಯ ಉಸ್ತುವಾರಿಯಲ್ಲಿ ಇರುವವರೆಗೂ ನನ್ನನ್ನು ತೆಗೆದುಹಾಕುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
Shocking a player being threatened by a journo. Blatant position abuse. Something that's happening too frequently with #TeamIndia. Time for the BCCI PREZ to dive in. Find out who the person is in the interest of every cricketer. This is serious coming from ultimate team man WS https://t.co/gaRyfYVCrs
— Ravi Shastri (@RaviShastriOfc) February 20, 2022
ಸಾಹ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಕಾನ್ಪುರ ಟೆಸ್ಟ್‌ನಲ್ಲಿ ಇಂಜುರಿಯ ನಡುವೆಯೂ 61 ರನ್ ಗಳಿಸಿ ತಂಡಕ್ಕಾಗಿ ಹೋರಾಡಿದ್ದರು. ಆದಾಗ್ಯೂ, ತಂಡದಲ್ಲಿ ಸಾಹಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ
ಸಾಹ ಇದುವರೆಗೆ 40 ಟೆಸ್ಟ್ ಪಂದ್ಯಗಳಲ್ಲಿ 104 ಬ್ಯಾಟ್ಸ್ಮನ್ಗಳನ್ನುಔಟ್ ಮಾಡಿದ್ದಾರೆ. ಅವರು ಮೂರು ಶತಕ, ಆರು ಅರ್ಧಶತಕ ಮತ್ತು 29.41 ಸರಾಸರಿಯಲ್ಲಿ ಒಟ್ಟು 1353 ರನ್ ಗಳಿಸಿದ್ದಾರೆ. ಅವರ ಪತ್ನಿ ಡೆಂಗ್ಯೂನಿಂದ ಚೇತರಿಸಿಕೊಂಡ ನಂತರ ಅವರು ಪತ್ನಿಯೊಂದಿಗೆ ಇರುವ ಸಲುವಾಗಿ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ:Wriddhiman Saha: ಬಿಸಿಸಿಐ ಕೇಳಿದರೆ ನಾನು ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ: ಸಾಹಾರಿಂದ ಮತ್ತೊಂದು ಬಾಂಬ್