IND vs AUS: ‘ಕ್ಯಾಪ್ಟನ್ ಕ್ರೈ ಬೇಬಿ’.. ಕೊಹ್ಲಿ ಆಯ್ತು, ಇದೀಗ ರೋಹಿತ್; ನಿಲ್ಲುತ್ತಿಲ್ಲ ಆಸೀಸ್ ಮಾಧ್ಯಮಗಳ ದುರ್ವರ್ತನೆ

|

Updated on: Dec 29, 2024 | 7:41 PM

Rohit Sharma criticism: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ, ಆಸ್ಟ್ರೇಲಿಯಾದ ಮಾಧ್ಯಮಗಳು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ತೀವ್ರವಾಗಿ ಟೀಕಿಸುತ್ತಿವೆ. ಕೊಹ್ಲಿಯನ್ನು "ಜೋಕರ್" ಎಂದು ಕರೆದು ಅವರ ತಂದೆಯನ್ನು ಗೇಲಿ ಮಾಡಿದ್ದ ಆಸೀಸ್ ಮಾಧ್ಯಮಗಳು ಇದೀಗ ರೋಹಿತ್ ಅವರನ್ನು "ಕ್ಯಾಪ್ಟನ್ ಕ್ರೈ ಬೇಬಿ" ಎಂದು ಕರೆದಿವೆ.

IND vs AUS: ‘ಕ್ಯಾಪ್ಟನ್ ಕ್ರೈ ಬೇಬಿ’.. ಕೊಹ್ಲಿ ಆಯ್ತು, ಇದೀಗ ರೋಹಿತ್; ನಿಲ್ಲುತ್ತಿಲ್ಲ ಆಸೀಸ್ ಮಾಧ್ಯಮಗಳ ದುರ್ವರ್ತನೆ
ರೋಹಿತ್ ಶರ್ಮಾ
Follow us on

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಒಂದೆಡೆ ಮೈದಾನದೊಳಗೆ ಉಭಯ ತಂಡಗಳ ಆಟಗಾರರ ನಡುವೆ ಪ್ರತಿ ದಿನ ಒಂದಿಲ್ಲೊಂದು ಮಾತಿನ ಯುದ್ಧ ನಡೆಯುತ್ತಿದ್ದರೆ, ಇತ್ತ ಮೈದಾನದ ಹೊರಗೆ ಆಸ್ಟ್ರೇಲಿಯಾದ ಮಾಧ್ಯಮಗಳು ನಿರಂತರವಾಗಿ ಟೀಂ ಇಂಡಿಯಾದ ಆಟಗಾರರನ್ನು ಗುರಿಯಾಗಿಸಿಕೊಂಡು ಅವರನ್ನು ತೆಗಳುವ ಕೆಲಸ ಮಾಡುತ್ತಿವೆ. ಅದರಲ್ಲೂ ವಿರಾಟ್ ಕೊಹ್ಲಿಯನ್ನು ಇನ್ನಿಲ್ಲದಂತೆ ಟಾರ್ಗೆಟ್ ಮಾಡಿರುವ ಆಸೀಸ್ ಮಾಧ್ಯಮಗಳು ವಿರಾಟ್‌ಗೆ ಜೋಕರ್ ಎಂಬ ಪದವನ್ನು ಸಹ ಬಳಸಿದ್ದು, ಅವರ ದಿವಂಗತ ತಂದೆಯವರನ್ನು ಸಹ ಗೇಲಿ ಮಾಡಿವೆ. ಏತನ್ಮಧ್ಯೆ, ಆಸ್ಟ್ರೇಲಿಯಾದ ಮಾಧ್ಯಮಗಳು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಗುರಿಯಾಗಿಸಿಕೊಂಡಿದ್ದು, ರೋಹಿತ್ ಅವರ ಫೋಟೋವನ್ನು ಟ್ಯಾಂಪರಿಂಗ್ ಮಾಡುವ ಮೂಲಕ ದುರ್ವರ್ತನೆಯ ಎಲ್ಲೆ ಮೀರಿವೆ.

ಕ್ಯಾಪ್ಟನ್ ಕ್ರೈ ಬೇಬಿ

ವಾಸ್ತವವಾಗಿ, ಆಸ್ಟ್ರೇಲಿಯಾ ಪ್ರವಾಸದ ಆರಂಭಕ್ಕೂ ಮುಂಚೆಯೇ, ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಿದೆ. ಆರಂಭದಲ್ಲಿ ಆಸ್ಟ್ರೇಲಿಯದ ಪ್ರತಿ ಪತ್ರಿಕೆಗಳೂ ಕೊಹ್ಲಿ ಅವರನ್ನು ತೀವ್ರವಾಗಿ ಹೊಗಳುತ್ತಿದ್ದವು. ಆದರೆ ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ಸ್ಯಾಮ್ ಕೊನ್​ಸ್ಟಾಸ್ ಹಾಗೂ ವಿರಾಟ್ ನಡುವೆ ನಡೆದ ಅದೊಂದು ಘರ್ಷಣೆ ನಂತರ ಆಸೀಸ್ ಮಾಧ್ಯಮಗಳು ಕೊಹ್ಲಿಯನ್ನು ನಿರಂತರವಾಗಿ ನಿಂದಿಸಲಾರಂಭಿಸಿವೆ. ಇದೀಗ ಆಸ್ಟ್ರೇಲಿಯಾದ ಪತ್ರಿಕೆಯೊಂದು ರೋಹಿತ್ ಅವರನ್ನು ಟಾರ್ಗೆಟ್ ಮಾಡಿದ್ದು, ರೋಹಿತ್ ಅವರ ಫೋಟೋವನ್ನು ಟ್ಯಾಂಪರಿಂಗ್ ಮಾಡಿದಲ್ಲದೆ ಕ್ಯಾಪ್ಟನ್ ಕ್ರೈ ಬೇಬಿ (ಮಗುವಿನಂತೆ ಅಳುವ ಕ್ಯಾಪ್ಟನ್) ಎಂದು ಶೀರ್ಷಿಕೆಯನ್ನು ನೀಡಿದೆ.

ಇದಕ್ಕೂ ಮುನ್ನ ಕೊಹ್ಲಿಯನ್ನು ಟಾರ್ಗೆಟ್ ಮಾಡಿರುವ ಆಸ್ಟ್ರೇಲಿಯಾದ ಮಾಧ್ಯಮಗಳು ತಮ್ಮ ಎಲ್ಲೆ ಮೀರಿವೆ. ಇತ್ತೀಚೆಗಷ್ಟೇ ಪತ್ರಿಕೆಯೊಂದು ತನ್ನ ಕ್ರೀಡಾ ಪುಟದಲ್ಲಿ ಸ್ಯಾಮ್ ಕೊನ್​ಸ್ಟಾಸ್ ಅವರ ಫೋಟೋ ಪ್ರಕಟಿಸಿ ‘ವಿರಾಟ್ ನಾನು ನಿನ್ನ ತಂದೆ’ ಎಂದು ಶೀರ್ಷಿಕೆ ಬರೆದಿತ್ತು. ಈ ಹಿಂದೆ ಪತ್ರಿಕೆಯೊಂದು ವಿರಾಟ್ ಕೊಹ್ಲಿಯನ್ನು ಜೋಕರ್ ಎಂದು ತೋರಿಸಿತ್ತು. ಈ ಘಟನೆಯ ನಂತರ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ಇರ್ಫಾನ್ ಪಠಾಣ್ ಕೂಡ ಇದನ್ನು ಟೀಕಿಸಿದರು. ಆದರೆ ಈಗ ರೋಹಿತ್ ಅವರನ್ನು ಟಾರ್ಗೆಟ್ ಮಾಡಲು ಆಸೀಸ್ ಮಾಧ್ಯಮಗಳು ಮುಂದಾಗಿವೆ.

ರೋಚಕ ತಿರುವಿನತ್ತ ಬಾಕ್ಸಿಂಗ್ ಡೇ ಟೆಸ್ಟ್

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಇಲ್ಲಿಯವರೆಗೆ 4 ದಿನಗಳ ಆಟ ಪೂರ್ಣಗೊಂಡಿದೆ. ಇಲ್ಲಿಯವರೆಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಸ್ಕೋರ್ 9 ವಿಕೆಟ್ ನಷ್ಟದಲ್ಲಿ 228 ರನ್ ಗಳಿಸಿದೆ. ಇದರೊಂದಿಗೆ 333 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಅಂದರೆ ಪಂದ್ಯದ ಕೊನೆಯ ದಿನ ಅತ್ಯಂತ ರೋಚಕತೆಯಿಂದ ಕೂಡಿರಲಿದ್ದು, ಭಾರತ ತಂಡ ಈ ಪಂದ್ಯದಲ್ಲಿ 300ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಲು ಪ್ರಯತ್ನಿಸಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Sun, 29 December 24