BPL 2022: ರಸೆಲ್, ತಮೀಮ್ ಬ್ಯಾಟಿಂಗ್: ಇದ್ದಕ್ಕಿದ್ದಂತೆ ಮೈದಾನಕ್ಕಿಳಿದ ಹೆಲಿಕಾಪ್ಟರ್

BPL 2022: ಮಾನವೀಯ ದೃಷ್ಟಿಯಿಂದ ಹೆಲಿಕಾಪ್ಟರ್‌ಗೆ ಇಳಿಸಲು ಅವಕಾಶ ನೀಡಲಾಗಿದೆ. ಈ ಬಗ್ಗೆ ನಮಗೆ ಮೊದಲೇ ಮಾಹಿತಿ ನೀಡಲಾಗಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್ ಪೂರ್ವ ತುದಿಯಲ್ಲಿ ನಡೆಯಬೇಕಿತ್ತು.

BPL 2022: ರಸೆಲ್, ತಮೀಮ್ ಬ್ಯಾಟಿಂಗ್: ಇದ್ದಕ್ಕಿದ್ದಂತೆ ಮೈದಾನಕ್ಕಿಳಿದ ಹೆಲಿಕಾಪ್ಟರ್
BPL 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jan 31, 2022 | 3:36 PM

ಬಾಂಗ್ಲಾದೇಶದಲ್ಲಿ ಬಿಪಿಎಲ್ (ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್) ನಡೆಯುತ್ತಿದೆ. ಈ ಟೂರ್ನಿಗಾಗಿ ಚಟ್ಟೋಗ್ರಾಮ್‌ನ ಎಂಎ ಅಜೀಜ್ ಸ್ಟೇಡಿಯಂನಲ್ಲಿ ಆ್ಯಂಡ್ರೆ ರಸೆಲ್, ತಮೀಮ್ ಇಕ್ಬಾಲ್ ಸೇರಿದಂತೆ ಕೆಲ ಆಟಗಾರರು ಅಭ್ಯಾಸ ನಡೆಸುತ್ತಿದ್ದರು. ಇದೇ ವೇಳೆ ಇದ್ದಕ್ಕಿದ್ದಂತೆ ಹೆಲಿಕಾಪ್ಟರ್ ಮೈದಾನಕ್ಕಿಳಿಯುವ ಮೂಲಕ ಎಲ್ಲರಲ್ಲೂ ಆತಂಕ ಮೂಡಿಸಿದರು. ಹೆಲಿಕಾಪ್ಟರ್ ಸ್ಟೇಡಿಯಂನಲ್ಲಿ ಇಳಿದಾಗ ಮಿನಿಸ್ಟರ್ ಗ್ರೂಪ್ ಢಾಕಾ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದರು. ಆದರೆ ಹೆಲಿಕಾಪ್ಟರ್ ಬರುವ ವಿಚಾರ ಆಟಗಾರರಿಗೆ ಗೊತ್ತಿರಲಿಲ್ಲ. ಹೀಗಾಗಿ ಸ್ಟೇಡಿಯಂ ಒಳಗೆ ಹೆಲಿಕಾಪ್ಟರ್ ಲ್ಯಾಂಡ್​ ಆಗುತ್ತಿದ್ದಂತೆ ಆಟಗಾರರು ಭಯಭೀತರಾದರು.

ಮಾಧ್ಯಮ ವರದಿಗಳ ಪ್ರಕಾರ, ಹೆಲಿಕಾಪ್ಟರ್ ಭಾನುವಾರ ಮಧ್ಯಾಹ್ನ 1 ಗಂಟೆಗೆ ಕ್ರೀಡಾಂಗಣಕ್ಕೆ ಬಂದಿಳಿಯಿತು. ಆ ವೇಳೆ ಮಿನಿಸ್ಟರ್ ಗ್ರೂಪ್ ಢಾಕಾ ತಂಡ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನ ಮುಂದಿನ ಪಂದ್ಯಕ್ಕೆ ತಯಾರಿ ನಡೆಸುತ್ತಿತ್ತು. ಆದರೆ ಮೈದಾನಕ್ಕೆ ಹೆಲಿಕಾಪ್ಟರ್ ಬಂದಿಳಿಯುವ ಬಗ್ಗೆ ಆಟಗಾರರಿಗೆ ಯಾವುದೇ ಮಾಹಿತಿ ಇರಲಿಲ್ಲ. ಇದ್ದಕ್ಕಿದ್ದಂತೆ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿರುವುದನ್ನು ಕಂಡು ಆಟಗಾರರು ಗಾಬರಿಗೊಂಡು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದಾದ ಬಳಿಕ ಸ್ಟೇಡಿಯಂ ಸಿಬ್ಬಂದಿ ಆಟಗಾರರೊಂದಿಗೆ ಮಾತನಾಡಿ ಆತಂಕವನ್ನು ದೂರ ಮಾಡಿದರು.

ಮೈದಾನದಲ್ಲಿ ಇಳಿದ ಹೆಲಿಕಾಪ್ಟರ್ ಅನ್ನು ಏರ್ ಆಂಬ್ಯುಲೆನ್ಸ್‌ನಂತೆ ಬಳಸಲಾಗುತ್ತಿದ್ದು, ತೀವ್ರ ಅಸ್ವಸ್ಥ ರೋಗಿಯನ್ನು ಏರ್‌ಲಿಫ್ಟ್ ಮಾಡಲು ಸ್ಟೇಡಿಯಂನಲ್ಲಿ ಇಳಿಸಲಾಗಿದೆ ಎಂದು ತಿಳಿಸಿದರು. ಇದಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಜಿಲ್ಲೆಯ ಕ್ರೀಡಾ ಸಂಘಕ್ಕೂ ತಿಳಿಸಲಾಗಿದೆ. ಇದರ ಹೊರತಾಗಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಸಂಘಟಕರಿಗೆ ಹಾಗೂ ಢಾಕಾ ತಂಡಕ್ಕೆ ಈ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಆತಂಕ ವಾತಾವರಣ ನಿರ್ಮಾಣವಾಯಿತು ಎಂದು ಸ್ಟೇಡಿಯಂ ಸಿಬ್ಬಂದಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಚಟ್ಟೋಗ್ರಾಮ್‌ನ ಡಿಎಸ್‌ಎ ಪ್ರಧಾನ ಕಾರ್ಯದರ್ಶಿ ಶಹಾಬುದ್ದೀನ್ ಶಮೀಮ್, ಮಾನವೀಯ ದೃಷ್ಟಿಯಿಂದ ಹೆಲಿಕಾಪ್ಟರ್‌ಗೆ ಇಳಿಸಲು ಅವಕಾಶ ನೀಡಲಾಗಿದೆ. ಈ ಬಗ್ಗೆ ನಮಗೆ ಮೊದಲೇ ಮಾಹಿತಿ ನೀಡಲಾಗಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್ ಪೂರ್ವ ತುದಿಯಲ್ಲಿ ನಡೆಯಬೇಕಿತ್ತು. ಕ್ರೀಡಾಂಗಣದ ಪಶ್ಚಿಮ ತುದಿಯಲ್ಲಿ ಇಳಿಯಿತು. ಅಲ್ಲಿ ಆಟಗಾರರು ಈಗಾಗಲೇ ಅಭ್ಯಾಸ ನಡೆಸುತ್ತಿದ್ದರು. ಹಾಗಾಗಿ ಎಲ್ಲರೂ ಭಯಗೊಂಡರು. ಇದಾದ ಬಳಿಕ ಅವರಿಗೆ ಮಾಹಿತಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(BPL 2022: Andre Russell, Tamim Iqbal were practicing on the ground, then suddenly the helicopter landed)

Published On - 3:31 pm, Mon, 31 January 22

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್