ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಅಂಧರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ
Blind T20 Cricket World Cup 2024: ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಅಂಧರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನಾ ದೆಹಲಿಯಲ್ಲಿ ನಡೆಯಲ್ಲಿರುವ ರಾಷ್ಟ್ರೀಯ ಶಿಬಿರಕ್ಕೆ 26 ಸಂಭವನೀಯ ಆಟಗಾರರನ್ನು ಭಾರತ ಅಂಧರ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದೆ. ಈ ಬಾರಿಯ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಅಕ್ಟೋಬರ್ 27 ರಿಂದ ದೆಹಲಿಯಲ್ಲಿ ತರಬೇತಿ ಪಡೆಯಲಿದ್ದಾರೆ.
ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಅಂಧರ ಟಿ20 ವಿಶ್ವಕಪ್ಗೂ ಮುನ್ನಾ ದೆಹಲಿಯಲ್ಲಿ ನಡೆಯಲ್ಲಿರುವ ರಾಷ್ಟ್ರೀಯ ಶಿಬಿರಕ್ಕೆ 26 ಸಂಭವನೀಯ ಆಟಗಾರರನ್ನು ಭಾರತ ಅಂಧರ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದೆ. ಆದಾಗ್ಯೂ ಈ ಟೂರ್ನಿ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವುದರಿಂದ ಇದರಲ್ಲಿ ಭಾಗವಹಿಸಲು ಭಾರತ ಸರ್ಕಾರ ಹಾಗೂ ಕ್ರೀಡಾ ಸಚಿವಾಲಯ ಇದುವರೆಗೂ ಯಾವುದೇ ಅನುಮತಿ ನೀಡಿಲ್ಲ. ಒಂದು ವೇಳೆ ಭಾರತ ಸರ್ಕಾರ ಎನ್‌ಒಸಿ ನೀಡಿದರೆ ಟೀಂ ಇಂಡಿಯಾ ಈ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ.
ಅಕ್ಟೋಬರ್ 27ರಿಂದ ತರಬೇತಿ ಆರಂಭ
ಈ ಬಾರಿಯ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಅಕ್ಟೋಬರ್ 27 ರಿಂದ ದೆಹಲಿಯಲ್ಲಿ ತರಬೇತಿ ಪಡೆಯಲಿದ್ದಾರೆ. ಇದಾದ ನಂತರ ಆಯ್ಕೆಗಾರರು ವಿಶ್ವಕಪ್‌ಗೆ ಉತ್ತಮ 17 ಸದಸ್ಯರ ತಂಡವನ್ನು ಆಯ್ಕೆ ಮಾಡುತ್ತಾರೆ. ಆಟಗಾರರ ಪ್ರದರ್ಶನ ಮತ್ತು ಅನುಭವದ ಆಧಾರದ ಮೇಲೆ ಆಯ್ಕೆದಾರರು ಆಟಗಾರರನ್ನು ಆಯ್ಕೆ ಮಾಡುತ್ತಾರೆ. 26 ಆಟಗಾರರ ಪೈಕಿ 10 ಆಟಗಾರರು B1 ವರ್ಗದಲ್ಲಿ ಅಂದರೆ ಸಂಪೂರ್ಣ ಅಂಧರಾಗಿದ್ದು, 7 ಆಟಗಾರರು B2 ವರ್ಗದಲ್ಲಿ ಅಂದರೆ 2 ಮೀಟರ್‌ವರೆಗಿನ ದೃಷ್ಟಿ ಹೊಂದಿರುವವರು ಮತ್ತು 9 ಆಟಗಾರರು B3 ವರ್ಗದಲ್ಲಿ ಅಂದರೆ 6 ಮೀಟರ್‌ವರೆಗಿನ ದೃಷ್ಟಿ ಹೊಂದಿರುವವರಾಗಿದ್ದಾರೆ.
ಸಿಎಬಿಐ ಅಧ್ಯಕ್ಷರ ಮಾತಿದು
ತಂಡದ ಆಯ್ಕೆಯ ನಂತರ ಮಾತನಾಡಿದ ಸಿಎಬಿಐ ಅಧ್ಯಕ್ಷ ಮಹಾಂತೇಶ್ ಜಿ ಕಿವಡಸನ್ನವರ್, ಅಂಧ ಕ್ರಿಕೆಟಿಗರು ತಮ್ಮ ಕ್ರಿಕೆಟ್ ಕೌಶಲ್ಯವನ್ನು ಪ್ರದರ್ಶಿಸಲು ವಿಶ್ವಕಪ್ ಅತಿದೊಡ್ಡ ವೇದಿಕೆಯಾಗಿದೆ. ದೇಶವನ್ನು ಪ್ರತಿನಿಧಿಸುವುದು ಮತ್ತು ಪಾಕಿಸ್ತಾನದಲ್ಲಿ ವಿಶ್ವಕಪ್ ಆಡುವುದು ಎಲ್ಲಾ ಆಟಗಾರರಿಗೆ ಅಪರೂಪದ ಅವಕಾಶವಾಗಿದೆ. ವಿಶ್ವಕಪ್ ಗೆಲುವು ಅಂಧರ ಕ್ರಿಕೆಟ್ ಅನ್ನು ಉತ್ತೇಜಿಸಲು CABI ಗೆ ಸಹಾಯ ಮಾಡುತ್ತದೆ. ನಾವು ದೇಶವನ್ನು ಪ್ರತಿನಿಧಿಸಲು ಮತ್ತು ವಿಶ್ವ ಚಾಂಪಿಯನ್‌ಗಳಾಗಿ ಮುಂದುವರಿಯಲು ತಂಡವನ್ನು ಸಿದ್ಧವಾಗಿರಿಸಿಕೊಳ್ಳುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ಭಾರತ ಸಚಿವಾಲಯ/ಸರ್ಕಾರವು ಶೀಘ್ರವಾಗಿ ಎನ್‌ಒಸಿ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಟೀಂ ಇಂಡಿಯಾದ 26 ಸದಸ್ಯರ ತಂಡ
ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ, ದೇಬ್ರಾಜ್ ಬೆಹೆರಾ, ಮಹಾರಾಜ ಶಿವಸುಬ್ರಮಣ್ಯಂ, ನರೇಶಭಾಯಿ ಬಾಲುಭಾಯಿ ತುಮ್ಡಾ, ಗುಡದಪ್ಪ ಸಣ್ಣನಿಂಗಪ್ಪ ಅರಕೇರಿ, ನೀಲೇಶ್ ಯಾದವ್, ಸಂಜಯಕುಮಾರ್ ಶಾ, ಶೌಕತ್ ಅಲಿ, ಪ್ರವೀಣ್ ಕುಮಾರ್ ಶರ್ಮಾ, ರಂಬೀರ್ ಸಿಂಗ್, ಜಿಬಿನ್ ಪ್ರಕಾಶ್ ಮೆಳೆಕೊತ್ತಾಯಿಲ್, ವೆಂಕಟೇಶ್ವರ ರಾವ್ ದುನ್ನಾ, ಪಂಕಜೆ ಭುಕ್ಯೆಲ್ ಬದ್ನಾಯಕ್, ಇರ್ಫಾನ್ ದಿವಾನ್, ಸೋನು ಸಿಂಗ್ ರಾವತ್, ದುರ್ಗಾ ರಾವ್ ತೋಂಪಕಿ, ಸುನಿಲ್ ರಮೇಶ್, ಸುಖ್ರಾಮ್ ಮಾಝಿ, ರವಿ ಅಮಿತಿ, ಧಿನಗರ ಗೋಪು, ನಿಖಿಲ್ ಬತುಲಾ, ಘೇವರ್ ರೆಬಾರಿ, ಗಂಭೀರ್ ಸಿಂಗ್ ಚೌಹಾಣ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Sun, 13 October 24