ರೋಹಿತ್ ಶರ್ಮ ಬಿಟ್ಟ ಕ್ಯಾಚ್ ಕಷ್ಟಕರವಾಗೇನೂ ಇರಲಿಲ್ಲ, ಹಿಡಿಯಬಹುದಿತ್ತು ಅಂದರು ನೆಟ್ಟಿಗರು!

ಸರಿ, ಬ್ಯಾಟಿಂಗ್ ವೈಫಲ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಮಾನ್ಯ ಎಂದು ಭಾವಿಸಿ ಭಾರತ 78 ರನ್ ಮೊತ್ತಕ್ಕೆ ಅಲೌಟ್ ಆಗಿದ್ದನ್ನು ಅಂಗೀಕರಿಸಿದರೂ ಫೀಲ್ಡಿಂಗ್ ಮಾಡುವಾಗ ಭಾರತದ ಕಳಪೆ ಪ್ರದರ್ಶನ ಮುಂದುವರೆಯಿತು. ತಮ್ಮೆಡೆ ಸಿಡಿದ ಕ್ಯಾಚ್​ಗಳನ್ನು ಭಾರತೀಯರು ನೆಲಸಮಗೊಳಿಸಿದರು.

ರೋಹಿತ್ ಶರ್ಮ ಬಿಟ್ಟ ಕ್ಯಾಚ್ ಕಷ್ಟಕರವಾಗೇನೂ ಇರಲಿಲ್ಲ, ಹಿಡಿಯಬಹುದಿತ್ತು ಅಂದರು ನೆಟ್ಟಿಗರು!
ಹಮೀದ್​ ನೀಡಿದ ಕ್ಯಾಚ್ ಹಿಡಿಯಲು ವಿಫಲರಾಗಿರುವ ರೋಹಿತ್​ ಶರ್ಮ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 27, 2021 | 12:51 AM

ಲಾರ್ಡ್ಸ್ ಮೈದಾನದಲ್ಲಿ ನಿಜಕ್ಕೂ ದೊರೆಗಳಂತೆ ಆಡಿದ್ದ ಟೀಮ್ ಇಂಡಿಯ ಲೀಡ್ಸ್ ನಲ್ಲಿ ಅದಕ್ಕೆ ತದ್ವಿರುದ್ಧವಾದ ಪ್ರದರ್ಶನ ನೀಡುತ್ತಿದೆ. ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ವಿರಾಟ್ ಕೊಹ್ಲಿ ಪಡೆಗೆ ಕೆಟ್ಟ ದಿನವಾಗಿತ್ತು. ಎಲ್ಲ ಬ್ಯಾಟ್ಸ್​ಮನ್​​ ವಿಫಲರಾಗಿ ತಂಡ ಕೇವಲ 78 ರನ್​ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ತನ್ನ ಓಪನಿಂಗ್ ಸ್ಪೆಲ್ನಲ್ಲಿ ಅಪ್ರತಿಮ ಬೌಲಿಂಗ್ ಪ್ರದರ್ಶನ ನೀಡಿದ ಜೇಮ್ಸ್ ಆಂಡರ್ಸನ್ ಕೊಹ್ಲಿ ಸೇರಿದಂತೆ ಮೂರು ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಮರ್ಮಾಘಾತ ನೀಡಿದರು. ಅಲ್ಲಿಂದ ಭಾರತ ಚೇತರಿಸಿಕೊಳ್ಳುವ ಚಾನ್ಸೇ ಇರಲಿಲ್ಲ.

ಸರಿ, ಬ್ಯಾಟಿಂಗ್ ವೈಫಲ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಮಾನ್ಯ ಎಂದು ಭಾವಿಸಿ ಭಾರತ 78 ರನ್ ಮೊತ್ತಕ್ಕೆ ಅಲೌಟ್ ಆಗಿದ್ದನ್ನು ಅಂಗೀಕರಿಸಿದರೂ ಫೀಲ್ಡಿಂಗ್ ಮಾಡುವಾಗ ಭಾರತದ ಕಳಪೆ ಪ್ರದರ್ಶನ ಮುಂದುವರೆಯಿತು. ತಮ್ಮೆಡೆ ಸಿಡಿದ ಕ್ಯಾಚ್​ಗಳನ್ನು ಭಾರತೀಯರು ನೆಲಸಮಗೊಳಿಸಿದರು. ಜಸ್ಪ್ರೀತ್ ಬುಮ್ರಾ ದಾಳಿಯಲ್ಲಿ ಇಂಗ್ಲೆಂಡ್ ಆರಂಭ ಆಟಗಾರ ಹಸೀಬ್ ಹಮೀದ್ ನೀಡಿದ ಕ್ಯಾಚನ್ನು ಸ್ಲಿಪ್ಸ್​ನಲ್ಲಿದ್ದ ರೋಹಿತ್ ಶರ್ಮ ಕೈ ಚೆಲ್ಲಿದರು. ಅದೇನು ಅಷ್ಟು ಕಷ್ಟಕರ ಚಾನ್ಸ್ ಆಗಿರಲಿಲ್ಲ, ಹಿಡಿಯಬಹುದಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ಹಾಫ್ ಚಾನ್ಸ್ ಸಹ ಕ್ಯಾಚ್​ನಲ್ಲಿ ಪರಿವರ್ತಿಸಬೇಕಾಗುತ್ತದೆ. ಆದರೆ ಟೀಮ್ ಇಂಡಿಯ ಸದಸ್ಯರು ಸಿಂಪಲ್ ಚಾನ್ಸ್​ಗಳನ್ನೂ ಹಾಳು ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ಹಮೀದ್ ನೀಡಿದ ಕ್ಯಾಚನ್ನು ರೋಹಿತ್ ಹಿಡಿದಿದ್ದರೆ ಮೊದಲ ದಿನದಾಟದ ಅಂತ್ಯದಲ್ಲಿ ಪಂದ್ಯದ ಸ್ಥಿತಿ ಬೇರೆ ಇರುತ್ತಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಮೊದಲು ರೋಹಿತ್ ಹಿಡಿಯಲಾಗದ ಕ್ಯಾಚನ್ನು ನೋಡಿರಿ.

ಒಬ್ಬ ಟ್ವಿಟರ್ ಯೂಸರ್ ರೋಹಿತ್ ಕ್ಯಾಚ್ ಬಿಟ್ಟಿದ್ದರಿಂದ ಹಮೀದ್ 50 ರನ್ ಪೂರೈಸಿದ್ದು ಎಲ್ಲ ಕತೆಯನ್ನು ಹೇಳುತ್ತದೆ. ಆಂಗ್ಲರು ಈ ಟೆಸ್ಟ್ನಲ್ಲಿ ನಿಸ್ಸಂದೇಹವಾಗಿ ಮೇಲುಗೈ ಸಾಧಿಸಿದ್ದಾರೆ, ಎಂದು ಹೇಳಿದ್ದಾರೆ.

ಮತ್ತೊಬ್ಬ ಕ್ರಿಕೆಟ್ ಪ್ರೇಮಿ ರೋಹಿತ್ ಆ ಕ್ಯಾಚ್ ಹಿಡಿದಿದ್ದರೆ ಇಂಗ್ಲೆಂಡ್ ಮತ್ತೆರಡು ವಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಇರುತಿತ್ತು ಎಂದು ಹಿಂದಿಯಲ್ಲಿ ಹೇಳಿದ್ದಾರೆ.

ಬುಮ್ರಾ ಬೌಲ್ ಮಾಡಿದ ನಂತರ ಬಾಲು ಹಮೀದ್ ಬ್ಯಾಟಿನ ಅಂಚನ್ನು ಸವರಿ ತಮ್ಮೆಡೆ ಬರುವ ಮೊದಲೇ ರೋಹಿತ್ ಶರ್ಮ ತಮ್ಮ ಬಲಗಡೆ ಮೂವ್ ಮಾಡಿದ್ದರು. ಬಾರತೀಯ ಆಟಗಾರರು ಬೆಳಗ್ಗೆ ಏನು ತಿಂದಿದ್ದರೋ? ಜಡೇಜಾ ಅವರಿಂದ ಮಿಸ್ ಫೀಲ್ಡ್ ಆಗುತ್ತೆ. ರೋಹಿರ್ ಕ್ಯಾಚ್ ಬಿಡುತ್ತಾರೆ. ಟೆರ್ರಿಬಲ್ ದಿನ ಮತ್ತು ಭಾರತೀಯರಿಂದ ಟೆರ್ರಿಬಲ್ ಪರ್ಫಾರ್ಮನ್ಸ್ ಅಂತ ಮತ್ತೊಬ್ಬರು ಹೇಳಿದ್ದಾರೆ.

ಜಿಮ್ಮಿ ತಮ್ಮ ಮ್ಯಾಜಿಕಲ್ ಓಪನಿಂಗ್ ಸ್ಪೆಲ್ನಲ್ಲಿ, ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರಾ ಮತ್ತು ಕೊಹ್ಲಿ ಅವರ ವಿಕೆಟ್ಗಳನ್ನು ಪಡೆದಾಗ ಭಾರತದ ಸ್ಕೋರ್ 21/3 ಆಗಿತ್ತು. ಭಾರತದ ಮಿಡ್ಲ್ ಮತ್ತು ಲೋಯರ್ ಆರ್ಡರ್ ಬ್ಯಾಟ್ಸ್ಮನ್ಗಳನ್ನು ಆಂಗ್ಲರ ವೇಗಿಗಳಾದ ಸ್ಯಾಮ್ ಕರನ್, ಒಲ್ಲೀ ರಾಬಿನ್ಸನ್ ಮತ್ತು ಕ್ರೇಗ್ ಓವರ್ಟನ್ ತರಗೆಲೆಗಳಂತೆ ಉದುರಿಸಿದರು.

ಇದನ್ನೂ ಓದಿ: ಕ್ರಿಕೆಟ್ ವಿಚಾರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ; ಅಫ್ಘಾನ್ ಕ್ರಿಕೆಟ್​ಗೆ ತಾಲಿಬಾನಿಗಳಿಂದ ಸಿಗ್ತು ಬೇಷರತ್ ಬೆಂಬಲ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ