ಶ್ರೀಲಂಕಾ ವಿರುದ್ಧದ T20 ಪಂದ್ಯಗಳ ಸರಣಿಯನ್ನು (India vs Sri Lanka) ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಪಂದ್ಯದ ನಂತರ, ಯುಜ್ವೇಂದ್ರ ಚಹಾಲ್ (yuzvendra chahal ) ಅವರು ಚಾಹಲ್ ಟಿವಿಯಲ್ಲಿ ಪಂದ್ಯ ಶ್ರೇಷ್ಠ ಆಟಗಾರ ಶ್ರೇಯಸ್ ಅಯ್ಯರ್ ಅವರನ್ನು ಸಂದರ್ಶಿಸಿದರು. ಇದೇ ವೇಳೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ (mohammed siraj) ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಸಿರಾಜ್ ಎಂಟ್ರಿಯನ್ನು ಚಹಾಲ್ ಸಖತ್ ಟ್ರೋಲ್ ಮಾಡುವ ಮೂಲಕ ಸ್ವಾಗತಿಸಿದ್ದು ವಿಶೇಷ. ಈ ಸಂದರ್ಶನದಲ್ಲಿ, ಪಂದ್ಯ ಪ್ರದರ್ಶನದ ಬಗ್ಗೆ ಚಹಾಲ್ ಅಯ್ಯರ್ ಜೊತೆ ಮಾತನಾಡಿದ್ದರು.
ಚಾಹಲ್-ಅಯ್ಯರ್ ಚಿಟ್ಚಾಟ್ ನಡುವೆ ಸಿರಾಜ್ ಕೂಡ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದಾರೆ. ಸಿರಾಜ್ ಆಗಮನವನ್ನು ಫನ್ನಿಯಾಗಿ ಸ್ವಾಗತಿಸಿದ ಚಹಾಲ್, ಸಿರಾಜ್ ತಲೆಕೂದಲನ್ನು ನೋಡಿ, ಬಹಳ ದಿನಗಳಿಂದ ಯಾರೂ ಹುಲ್ಲಿಗೆ ನೀರು ಹಾಕದೆ ಸಂಪೂರ್ಣ ಒಣಗಿ ಹೋಗಿರುವಂತೆ ಇದೆ ಎಂದು ಟ್ರೋಲ್ ಮಾಡಿದರು.
ಇತ್ತ ಸಿರೀಸ್ ಇಂಟರ್ವ್ಯೂನಲ್ಲಿ ನಿಂತಿದ್ದ ಅಯ್ಯರ್ ಚಹಾಲ್ ಅವರ ಟ್ರೋಲ್ ಕೇಳಿ ನಗಲಾರಂಭಿಸಿದರು. ಅತ್ತ ಸಿರಾಜ್ ಕೂಡ ನಕ್ಕರು. ಇದಾದ ಬಳಿಕ ಪ್ರತಿ ಪಂದ್ಯಕ್ಕೂ ಮುನ್ನ ನೀವು ಕ್ಷೌರ ಸಲೂನ್‌ಗೆ ಹೋಗುವುದು ನಿಜವೇ ಎಂದು ಚಹಾಲ್ ಸಿರಾಜ್ ಅವರ ಕಾಲೆಳೆದರು. ಈ ಕುರಿತು ಸಿರಾಜ್, ಹಾಗೇನೂ ಇಲ್ಲ ಎನ್ನುವ ಮೂಲಕ ಟ್ರೋಲ್ಗೆ ಫುಲ್ ಸ್ಟಾಪ್ ಇಟ್ಟರು.
From mantra of success to a guest apperance! ??
Chahal TV Special: @ShreyasIyer15, with @mdsirajofficial for company, chats with @yuzi_chahal after #TeamIndia‘s T20I series sweep. ? ? – By @Moulinparikh
Full interview ? ? #INDvSL @Paytm https://t.co/FOL75d7bIs pic.twitter.com/4Awzp9BvIK
— BCCI (@BCCI) February 28, 2022
ಇನ್ನು ಮೂರನೇ ಟಿ20 ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 5 ವಿಕೆಟ್‌ಗೆ 146 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ ಶ್ರೇಯಸ್ ಅಯ್ಯರ್ ಅವರ ಅಜೇಯ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅಯ್ಯರ್ ಸರಣಿಯಲ್ಲಿ ಸತತ ಮೂರನೇ ಅಜೇಯ ಅರ್ಧಶತಕ ಗಳಿಸಿದ್ದರು. ಈ ಮೂಲಕ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Chahal trolls Siraj as ‘Miya Magic’ gatecrashes Iyer’s interview)