IND vs SL: ಮೊಹಾಲಿ ಟೆಸ್ಟ್ ಕೊಹ್ಲಿಗಷ್ಟೇ ವಿಶೇಷವಲ್ಲ! ಶ್ರೀಲಂಕಾಗೂ ಅವಿಸ್ಮರಣೀಯ ಪಂದ್ಯವಾಗಲಿದೆ

IND vs SL: ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ಐತಿಹಾಸಿಕವಾಗಲಿದೆ. ಆದರೆ, ಅದೇ ಸಮಯದಲ್ಲಿ ಶ್ರೀಲಂಕಾ ತಂಡಕ್ಕೆ ಸಂಬಂಧಿಸಿದ ಶ್ರೇಷ್ಠ ಸಾಧನೆಗೆ ಸಾಕ್ಷಿಯಾಗಲಿದೆ.

IND vs SL: ಮೊಹಾಲಿ ಟೆಸ್ಟ್ ಕೊಹ್ಲಿಗಷ್ಟೇ ವಿಶೇಷವಲ್ಲ! ಶ್ರೀಲಂಕಾಗೂ ಅವಿಸ್ಮರಣೀಯ ಪಂದ್ಯವಾಗಲಿದೆ
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on: Feb 28, 2022 | 3:56 PM

ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli)ಗೆ ಮಾರ್ಚ್ 4 ರ ದಿನಾಂಕ ಮತ್ತು ಮೊಹಾಲಿ ಮೈದಾನ ತಂಬಾ ವಿಶೇಷವಾಗಿದೆ. ಜೊತೆಗೆ ಶ್ರೀಲಂಕಾ ತಂಡಕ್ಕೂ ಈ ಪಂದ್ಯ ಬಹಳ ವಿಶೇಷವಾಗಲಿದೆ. ಈ ದಿನ ವಿರಾಟ್ ಕೊಹ್ಲಿ ತಮ್ಮ 100 ನೇ ಟೆಸ್ಟ್ ಆಡಲು ಮೈದಾನಕ್ಕೆ ಬಂದರೆ, ಶ್ರೀಲಂಕಾ ಕ್ರಿಕೆಟ್ ತಂಡವು ಮೈದಾನಕ್ಕೆ ಇಳಿದ ತಕ್ಷಣ ಒಂದು ಸಾಧನೆ ಮಾಡಲಿದೆ. ವಿರಾಟ್ ಮತ್ತು ಶ್ರೀಲಂಕಾ ತಂಡದ ಈ ದೊಡ್ಡ ಯಶಸ್ಸನ್ನು ಕ್ರೀಡಾಂಗಣದಲ್ಲಿ ಕುಳಿತ ಅಭಿಮಾನಿಗಳು ಕಣ್ತುಂಬಿಕೊಳ್ಳಲಾರರು ಎಂಬುದು ಬೇರೆ ಮಾತು. ವಾಸ್ತವವಾಗಿ, ಮೊಹಾಲಿ ಟೆಸ್ಟ್‌ಗೆ ಮೈದಾನದಲ್ಲಿ ಪ್ರೇಕ್ಷಕರ ಪ್ರವೇಶವನ್ನು ಅನುಮತಿಸಲಾಗಿಲ್ಲ.

ಭಾರತ ಮತ್ತು ಶ್ರೀಲಂಕಾ ನಡುವಿನ 2 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಆದರೆ ಎರಡನೇ ಟೆಸ್ಟ್ ಬೆಂಗಳೂರಿನಲ್ಲಿ ಗುಲಾಬಿ ಚೆಂಡಿನೊಂದಿಗೆ ನಡೆಯಲಿದೆ. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಪ್ರೇಕ್ಷಕರಿಗೆ ಕ್ರೀಡಾಂಗಣದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿರಾಟ್ ಕೊಹ್ಲಿಯ 100ನೇ ಟೆಸ್ಟ್, ಶ್ರೀಲಂಕಾದ 300ನೇ ಟೆಸ್ಟ್

ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ಐತಿಹಾಸಿಕವಾಗಲಿದೆ. ಆದರೆ, ಅದೇ ಸಮಯದಲ್ಲಿ ಶ್ರೀಲಂಕಾ ತಂಡಕ್ಕೆ ಸಂಬಂಧಿಸಿದ ಶ್ರೇಷ್ಠ ಸಾಧನೆಗೆ ಸಾಕ್ಷಿಯಾಗಲಿದೆ. ವಾಸ್ತವವಾಗಿ, ಮೊಹಾಲಿ ಟೆಸ್ಟ್ ವಿರಾಟ್ ಕೊಹ್ಲಿ ಅವರ ವೃತ್ತಿಜೀವನದ 100 ನೇ ಟೆಸ್ಟ್ ಆಗಿದ್ದರೆ. ಶ್ರೀಲಂಕಾ ಪರ ಇದು ಅವರ 300ನೇ ಟೆಸ್ಟ್ ಕೂಡ ಆಗಿದೆ. ಶ್ರೀಲಂಕಾ ನಾಯಕ ದಿಮುತ್ ಕರುಣಾರತ್ನ ಟ್ವೀಟ್ ಮಾಡುವ ಮೂಲಕ ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಇಂತಹ ಐತಿಹಾಸಿಕ ಪಂದ್ಯದ ಭಾಗವಾಗುತ್ತಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.

299 ಟೆಸ್ಟ್‌ಗಳ ನಂತರ ಶ್ರೀಲಂಕಾ ಅಂಕಿಅಂಶಗಳು

ವಿರಾಟ್ ಕೊಹ್ಲಿ ಇದುವರೆಗೆ ಆಡಿರುವ 99 ಟೆಸ್ಟ್‌ಗಳಲ್ಲಿ 50.39 ಸರಾಸರಿಯಲ್ಲಿ 7962 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರು 27 ಶತಕಗಳನ್ನು ಗಳಿಸಿದ್ದಾರೆ. ಜೊತೆಗೆ ಅವರ ಗರಿಷ್ಠ ಸ್ಕೋರ್ 257 ರನ್ ಆಗಿದೆ. ಮತ್ತೊಂದೆಡೆ, ಶ್ರೀಲಂಕಾ ಇದುವರೆಗೆ ಆಡಿರುವ 299 ಟೆಸ್ಟ್‌ಗಳಲ್ಲಿ 95 ಗೆದ್ದು, 113 ಟೆಸ್ಟ್​ಗಳಲ್ಲಿ ಸೋತಿದೆ. ಅದೇ ಸಮಯದಲ್ಲಿ ಶ್ರೀಲಂಕಾ 91 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಈ ಅವಧಿಯಲ್ಲಿ ಅವರು ಭಾರತದ ವಿರುದ್ಧ 44 ಟೆಸ್ಟ್‌ಗಳನ್ನು ಆಡಿ, 7 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಜೊತೆಗೆ 20 ಪಂದ್ಯಗಳಲ್ಲಿ ಸೋತಿದ್ದರೆ, ಉಳಿದಂತೆ 17 ಪಂದ್ಯಗಳು ಡ್ರಾಗೊಂಡಿವೆ.

ಇದನ್ನೂ ಓದಿ:IND vs SL: 3ನೇ ಟಿ20 ಗೆಲುವಿನೊಂದಿಗೆ ಪಾಕ್ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ಭಾರತ..!