Champions Trophy 2025: ಸೆಮಿಫೈನಲ್ ಪಂದ್ಯಗಳಿಗೆ ಅಂಪೈರ್ಗಳ ನೇಮಕ; ಭಾರತ- ಆಸೀಸ್ ಪಂದ್ಯಕ್ಕೆ ಯಾರ್ಯಾರು?
Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯಗಳ ಅಂಪೈರ್‌ಗಳನ್ನು ಐಸಿಸಿ ಘೋಷಿಸಿದೆ. ಮಾರ್ಚ್ 4ರಂದು ದುಬೈನಲ್ಲಿ ನಡೆಯುವ ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಗ್ಯಾಫ್ನಿ, ಇಲ್ಲಿಂಗ್‌ವರ್ತ್ (ಅಂಪೈರ್‌ಗಳು), ಗೌಗ್ (ಮೂರನೇ ಅಂಪೈರ್), ಹೋಲ್ಡ್‌ಸ್ಟಾಕ್ (ನಾಲ್ಕನೇ ಅಂಪೈರ್) ಮತ್ತು ಪೈಕ್ರಾಫ್ಟ್ (ರೆಫರಿ) ಆಯ್ಕೆಯಾಗಿದ್ದಾರೆ. ಮಾರ್ಚ್ 5ರಂದು ಲಾಹೋರ್‌ನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ-ನ್ಯೂಜಿಲೆಂಡ್ ಪಂದ್ಯಕ್ಕೆ ಧರ್ಮಸೇನ, ರೀಫೆಲ್, ವಿಲ್ಸನ್, ರಜಾ ಮತ್ತು ಮದುಗಲ್ಲೆ ಅಂಪೈರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

2025 ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ಮಾರ್ಚ್ 4 ಮತ್ತು 5 ರಂದು ನಡೆಯಲಿವೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಅಭಿಮಾನಿಗಳು ಕೂಡ ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಹಾಗೆಯೇ ಎರಡನೇ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವೆ ಪಾಕಿಸ್ತಾನದಲ್ಲಿ ನಡೆಯಲ್ಲಿದೆ. ಇದೀಗ ಈ ಎರಡು ಹೈವೋಲ್ಟೇಜ್ ಪಂದ್ಯಗಳಿಗೆ ಐಸಿಸಿ, ಪಂದ್ಯದ ಅಧಿಕಾರಿಗಳನ್ನು ಪ್ರಕಟಿಸಿದೆ.
ಭಾರತ- ಆಸೀಸ್ ಪಂದ್ಯಕ್ಕೆ ಯಾರ್ಯಾರು?
ದುಬೈನಲ್ಲಿ ನಡೆಯಲ್ಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಸೆಮಿಫೈನಲ್‌ನಲ್ಲಿ ಕ್ರಿಸ್ ಗ್ಯಾಫ್ನಿ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಆನ್-ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೈಕೆಲ್ ಗೌಗ್ ಮೂರನೇ ಅಂಪೈರ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು, ಆಡ್ರಿಯನ್ ಹೋಲ್ಡ್‌ಸ್ಟಾಕ್ ಅವರನ್ನು ನಾಲ್ಕನೇ ಅಂಪೈರ್ ಆಗಿ ನೇಮಿಸಲಾಗಿದೆ. ಪಂದ್ಯದ ರೆಫರಿ ಜವಾಬ್ದಾರಿಯನ್ನು ಆಂಡಿ ಪೈಕ್ರಾಫ್ಟ್‌ಗೆ ನೀಡಲಾಗಿದೆ. ಮತ್ತೊಂದೆಡೆ, ಸ್ಟುವರ್ಟ್ ಕಮ್ಮಿನ್ಸ್ ಅಂಪೈರ್ ಕೋಚ್ ಆಗಿರುತ್ತಾರೆ.
- ಮೈದಾನದ ಅಂಪೈರ್‌ಗಳು: ಕ್ರಿಸ್ ಗ್ಯಾಫ್ನಿ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್
- ಮೂರನೇ ಅಂಪೈರ್: ಮೈಕೆಲ್ ಗೌಫ್
- ನಾಲ್ಕನೇ ಅಂಪೈರ್: ಆಡ್ರಿಯನ್ ಹೋಲ್ಡ್‌ಸ್ಟಾಕ್
- ಪಂದ್ಯ ರೆಫರಿ: ಆಂಡಿ ಪೈಕ್ರಾಫ್ಟ್
- ಅಂಪೈರ್ ಕೋಚ್: ಸ್ಟುವರ್ಟ್ ಕಮಿಂಗ್ಸ್
ನ್ಯೂಜಿಲೆಂಡ್-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಯಾರು ಅಂಪೈರ್ಸ್?
2025 ರ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯವು ಮಾರ್ಚ್ 5 ರಂದು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕುಮಾರ್ ಧರ್ಮಸೇನ ಮತ್ತು ಪಾಲ್ ರೀಫೆಲ್ ಆನ್-ಫೀಲ್ಡ್ ಅಂಪೈರ್‌ಗಳಾಗಿರುತ್ತಾರೆ. ಜೋಯಲ್ ವಿಲ್ಸನ್ ಮೂರನೇ ಅಂಪೈರ್ ಮತ್ತು ಅಹ್ಸಾನ್ ರಜಾ ನಾಲ್ಕನೇ ಅಂಪೈರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ, ರಂಜನ್ ಮದುಗಲ್ಲೆ ಅವರನ್ನು ಪಂದ್ಯದ ರೆಫರಿಯಾಗಿ ಆಯ್ಕೆ ಮಾಡಲಾಗಿದೆ ಮತ್ತು ಕಾರ್ಲ್ ಹರ್ಟರ್ ಅಂಪೈರ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
- ಮೈದಾನದ ಅಂಪೈರ್‌ಗಳು: ಕುಮಾರ್ ಧರ್ಮಸೇನ ಮತ್ತು ಪಾಲ್ ರೀಫೆಲ್
- ಮೂರನೇ ಅಂಪೈರ್: ಜೋಯಲ್ ವಿಲ್ಸನ್
- ನಾಲ್ಕನೇ ಅಂಪೈರ್: ಅಹ್ಸಾನ್ ರಜಾ
- ಪಂದ್ಯ ರೆಫರಿ: ರಂಜನ್ ಮದುಗಲೆ
- ಅಂಪೈರ್ ಕೋಚ್: ಕಾರ್ಲ್ ಹರ್ಟರ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
