AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲದ ಬಳಿ ಆರೆಂಜ್ ತುಂಬಿದ ಲಾರಿ ಪಲ್ಟಿ: ಲಕ್ಷಾಂತರ ರೂ ಮೌಲ್ಯದ ಹಣ್ಣುಗಳು ಮಣ್ಣುಪಾಲು

ನೆಲಮಂಗಲದ ಬಳಿ ಆರೆಂಜ್ ತುಂಬಿದ ಲಾರಿ ಪಲ್ಟಿ: ಲಕ್ಷಾಂತರ ರೂ ಮೌಲ್ಯದ ಹಣ್ಣುಗಳು ಮಣ್ಣುಪಾಲು

ಮಂಜುನಾಥ ಕೆಬಿ
| Edited By: |

Updated on: Feb 12, 2026 | 1:07 PM

Share

ನೆಲಮಂಗಲ ತಾಲೂಕಿನ ಕೆಂಗಲ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಆರೆಂಜ್ ತುಂಬಿದ ಲಾರಿಯೊಂದು ಪಲ್ಟಿಯಾಗಿದೆ. ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಈ ಲಾರಿಯ ಅಪಘಾತದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಆರೆಂಜ್ ಹಣ್ಣುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಘಟನೆಯಿಂದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿ, ಟ್ರಾಫಿಕ್ ಉಂಟಾಗಿದೆ.

ಬೆಂಗಳೂರು, ಫೆ.12: ನೆಲಮಂಗಲ ತಾಲೂಕಿನ ಕೆಂಗಲ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಆರೆಂಜ್ ತುಂಬಿದ ಲಾರಿಯೊಂದು ಪಲ್ಟಿಯಾಗಿದೆ.ಈ ಲಾರಿಯೂ ಮುಂಬೈನಿಂದ ಬೆಂಗಳೂರು ನಗರಕ್ಕೆ ತೆರಳುತ್ತಿದ್ದ ಈ ಅಪಘಾತ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಆರೆಂಜ್ ಹಣ್ಣುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಘಟನೆಯು ರಾಷ್ಟ್ರೀಯ ಹೆದ್ದಾರಿ 48 ರ ಮೇಲೆ ನಡೆದಿದ್ದು, ಲಾರಿ ಚಾಲಕನು ವಾಹನದ ನಿಯಂತ್ರಣ ಕಳೆದುಕೊಂಡ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ. ಲಾರಿ ಪಲ್ಟಿಯಾದ ಸ್ಥಳದಲ್ಲಿ ಭಾರೀ ಪ್ರಮಾಣದ ಆರೆಂಜ್ ಹಣ್ಣುಗಳು ರಸ್ತೆಯ ಮೇಲೆ ಚೆಲ್ಲಿದ್ದರಿಂದ, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. ಇದರಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ನಿಧಾನವಾಗಿ ಸಾಗುವಂತಾಯಿತು. ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Manjunath KB
Manjunath KB