ಏಕದಿನ ಕಪ್‌ನಲ್ಲಿ ಮತ್ತೊಂದು ಶತಕ ಸಿಡಿಸಿದ ಚೇತೇಶ್ವರ ಪೂಜಾರ..!

|

Updated on: Aug 12, 2023 | 10:01 AM

Cheteshwar Pujara: ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಪೂಜಾರ 113 ಎಸೆತಗಳಲ್ಲಿ 103.53 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 11 ಬೌಂಡರಿಗಳ ಸಹಿತ ಅಜೇಯ 117 ರನ್ ಸಿಡಿಸಿದರು. ಅವರೊಂದಿಗೆ ಟಾಮ್ ಅಲ್ಸೋಪ್ 58 ಎಸೆತಗಳಲ್ಲಿ 60 ರನ್ ಬಾರಿಸಿ ಪೂಜಾರಗೆ ಉತ್ತಮ ಸಾಥ್ ನೀಡಿದರು.

ಏಕದಿನ ಕಪ್‌ನಲ್ಲಿ ಮತ್ತೊಂದು ಶತಕ ಸಿಡಿಸಿದ ಚೇತೇಶ್ವರ ಪೂಜಾರ..!
ಚೇತೇಶ್ವರ ಪೂಜಾರ
Follow us on

ಫಾರ್ಮ್​ ಕಳೆದುಕೊಂಡು ಟೀಂ ಇಂಡಿಯಾದಿಂದ (Team India) ಹೊರಬಿದ್ದಿರುವ ತಂಡದ ಸ್ಟಾರ್ ಬ್ಯಾಟರ್ ಚೇತೇಶ್ವರ ಪೂಜಾರ (Cheteshwar Pujara) ಕೌಂಟಿ ಕ್ರಿಕೆಟ್​ನತ್ತ ಮುಖಾಮಾಡಿರುವುದು ಎಲ್ಲರಿಗೂ ತಿಳಿದೆ ಇದೆ. ಡಬ್ಲ್ಯುಟಿಸಿ ಫೈನಲ್ (WTC Final 2023)​ ಆರಂಭಕ್ಕೂ ಒಂದು ತಿಂಗಳು ಮುನ್ನ ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದ ಪೂಜಾರ ರನ್​ಗಳ ಲೂಟಿ ಮಾಡಿ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದರು. ಅಲ್ಲದೆ ಟೆಸ್ಟ್ ವಿಶ್ವಕಪ್​ ಫೈನಲ್​ನಲ್ಲಿ ಮಿಂಚುವ ಸುಳಿವನ್ನು ನೀಡಿದ್ದರು. ಆದರೆ ಪಂದ್ಯದ ವೇಳೆ ಪೂಜಾರ ನೀಡಿದ ಪ್ರದರ್ಶನ ಅಷ್ಟಕಷ್ಟೆ. ಆಗಾಗಿ ಪೂಜಾರರನ್ನು ಟೀಂ ಇಂಡಿಯಾದಿಂದ ಹೊರಗಿಡಲಾಗಿದೆ. ಇದೀಗ ಮತ್ತೆ ತಂಡ ಸೇರಲು ನಾನಾ ಕಸರತ್ತು ಮಾಡುತ್ತಿರುವ ಪೂಜಾರ, ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಏಕದಿನ ಕಪ್‌ನ ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ ಸಸೆಕ್ಸ್‌ (Somerset vs Sussex) ಪರ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೋಮರ್‌ಸೆಟ್ ನಾಯಕ ಸೀನ್ ಡಿಕ್ಸನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆಂಡ್ರ್ಯೂ ಉಮೀದ್ ಮತ್ತು ಕರ್ಟಿಸ್ ಕ್ಯಾಂಪರ್ ಸೋಮರ್‌ಸೆಟ್ ಅವರ ಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಸೋಮರ್‌ಸೆಟ್ ತಂಡ ಆರು ವಿಕೆಟ್‌ಗಳ ನಷ್ಟಕ್ಕೆ 318 ರನ್ ಕಲೆಹಾಕಿತು. ತಂಡದ ಪರ ಉಮೀದ್ 130 ಎಸೆತಗಳಲ್ಲಿ ಹತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 119 ರನ್ ಬಾರಿಸಿದರೆ, ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡಿದ ಕ್ಯಾಂಫರ್‌, 82 ಎಸೆತಗಳಲ್ಲಿ 9 ಬೌಂಡರಿಗಳು ಮತ್ತು ಮೂರು ಸಿಕ್ಸರ್​ಗಳ ಸಹಾಯದಿಂದ 101 ರನ್ ಕಲೆಹಾಕಿದರು. ನಾಯಕ ಸೀನ್ ಡಿಕ್ಸನ್ ಕೇವಲ 23 ಎಸೆತಗಳಲ್ಲಿ 40 ರನ್ ಬಾರಿಸಿದರೆ, ಜೋಶುವಾ ಥಾಮಸ್ 10 ಎಸೆತಗಳಲ್ಲಿ 21 ರನ್ ಬಾರಿಸಿ ತಂಡಕ್ಕೆ ನೆರವಾದರು.

Shubman Gill: ಪೂಜಾರ ಸ್ಥಾನ ತುಂಬಲು ಗಿಲ್ ವಿಫಲ: ಮುಂದುವರೆದ ಮೂರನೇ ಸ್ಥಾನದ ಹುಡುಕಾಟ

ಇನ್ನು ಈ ಗುರಿ ಬೆನ್ನಟ್ಟಿದ ಸಸೆಕ್ಸ್ ತಂಡ ಕೇವಲ ಏಳು ಓವರ್‌ಗಳಲ್ಲಿ 47 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಆರಂಭದಲ್ಲಿ ತೊಂದರೆಗೆ ಸಿಲುಕಿತು. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಪೂಜಾರ ತಂಡದ ಇನ್ನಿಂಗ್ಸ್ ನಿರ್ವಹಿಸಿದರು. ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಪೂಜಾರ 113 ಎಸೆತಗಳಲ್ಲಿ 103.53 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 11 ಬೌಂಡರಿಗಳ ಸಹಿತ ಅಜೇಯ 117 ರನ್ ಸಿಡಿಸಿದರು. ಅವರೊಂದಿಗೆ ಟಾಮ್ ಅಲ್ಸೋಪ್ 58 ಎಸೆತಗಳಲ್ಲಿ 60 ರನ್ ಬಾರಿಸಿ ಪೂಜಾರಗೆ ಉತ್ತಮ ಸಾಥ್ ನೀಡಿದರು.

ಇವರಿಬ್ಬರ ಜೊತೆಗೆ ಸಸೆಕ್ಸ್‌ನ ವಿಕೆಟ್‌ಕೀಪರ್-ಬ್ಯಾಟರ್ ಓಲಿ ಕಾರ್ಟರ್ ಕೇವಲ 34 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 44 ರನ್ ಬಾರಿಸಿದರೆ, ರನ್ ಚೇಸ್‌ಗೆ ಫೈನಲ್ ಟಚ್ ನೀಡಿದ ಆಲ್‌ರೌಂಡರ್ ಜಾಕ್ ಕಾರ್ಸನ್ ಎರಡು ಸಿಕ್ಸರ್‌ ಬಾರಿಸುವ ಮೂಲಕ ತಂಡವನ್ನು ಇನ್ನು 11 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:00 am, Sat, 12 August 23