Shubman Gill: ಪೂಜಾರ ಸ್ಥಾನ ತುಂಬಲು ಗಿಲ್ ವಿಫಲ: ಮುಂದುವರೆದ ಮೂರನೇ ಸ್ಥಾನದ ಹುಡುಕಾಟ

IND vs WI 2nd Test: ಚೇತೇಶ್ವರ್ ಪೂಜಾರ ಸ್ಥಾನ ತುಂಬಲು ಮೂರನೇ ಸ್ಥಾನಕ್ಕೆ ಬಂದ ಶುಭ್​ಮನ್ ಗಿಲ್ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಮೂರನೇ ಕ್ರಮಾಂಕದ ಹುಡುಕಾಟದಲ್ಲಿರುವ ಮ್ಯಾನೇಜ್ಮೆಂಟ್​ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

|

Updated on: Jul 21, 2023 | 9:14 AM

ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್ ಓವಲ್​ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು ಟೀಮ್ ಇಂಡಿಯಾ ಮೊದಲ ದಿನದ ಯಶಸ್ಸು ಸಾಧಿಸಿದೆ.

1 / 8
ಟಾಸ್ ಸೋತರು ಭರ್ಜರಿ ಬ್ಯಾಟಿಂಗ್ ನಡೆಸಿದ ರೋಹಿತ್ ಪಡೆ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದೆ. ಆದರೆ, ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಎಂದೇ ಹೇಳಲಾಗುವ ಶುಭ್​ಮನ್ ಗಿಲ್ ಅವರ ವೈಫಲ್ಯ ಮುಂದುವರೆದಿದೆ.

2 / 8
ಚೇತೇಶ್ವರ್ ಪೂಜಾರ ಸ್ಥಾನ ತುಂಬಲು ಮೂರನೇ ಸ್ಥಾನಕ್ಕೆ ಬಂದ ಶುಭ್​ಮನ್ ಗಿಲ್ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಮೂರನೇ ಕ್ರಮಾಂಕದ ಹುಡುಕಾಟದಲ್ಲಿರುವ ಮ್ಯಾನೇಜ್ಮೆಂಟ್​ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

3 / 8
ಮೊದಲ ಟೆಸ್ಟ್​ನಲ್ಲಿ ಗಿಲ್ 10 ಬಾಲ್​ಗೆ 6 ರನ್ ಗಳಿಸಿ ಔಟಾಗದರೆ, ದ್ವಿತೀಯ ಟೆಸ್ಟ್​ನಲ್ಲಿ ಕೂಡ 12 ಎಸೆತಗಳಲ್ಲಿ 10 ರನ್ ಬಾರಿಸಿ ಪೆವಿಲಿಯನ್ ಸೇರಿದರು.

4 / 8
ಭಾರತ ತನ್ನ ಮುಂದಿನ ಟೆಸ್ಟ್ ಅನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಇಲ್ಲಿ ಬಿಸಿಸಿಐ ಮೂರನೇ ಕ್ರಮಾಂಕದಲ್ಲಿ ಏನು ಪ್ರಯೋಗ ನಡೆಸುತ್ತೆ ಎಂಬುದು ನೋಡಬೇಕಿದೆ.

5 / 8
ಯಶಸ್ವಿ ಜೈಸ್ವಾಲ್ ಅವರು ಆರಂಭಿಕ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ರುತುರಾಜ್ ಗಾಯಕ್ವಾಡ್, ಅಭಿಮನ್ಯು ಈಶ್ವರನ್, ಸರ್ಫರಾಜ್ ಖಾನ್ ಕಾಯುತ್ತಿರುವ ಕಾರಣ, ಗಿಲ್ ಆದಷ್ಟು ಬೇಗ ಫಾರ್ಮ್​ಗೆ ಬಂದು ರನ್ ಮಳೆ ಸುರಿಸಬೇಕಿದೆ.

6 / 8
ದ್ವಿತೀಯ ಟೆಸ್ಟ್​ನಲ್ಲಿ ಕೂಡ ಯಶಸ್ವಿ ಜೈಸ್ವಾಲ್ ವಿಂಡೀಸ್ ಬೌಲರ್​ಗಳ ಬೌಲರ್​ಗಳ ಬೆಂಡೆತ್ತಿದರು. ಕೇವಲ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ರೋಹಿತ್ ಜೊತೆ ವಿಶೇಷ ದಾಖಲೆ ಬರೆದರು.

7 / 8
ವಿದೇಶಿ ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತೀ ಹೆಚ್ಚು ಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿಗಳಲ್ಲಿ ಜೈಸ್ವಾಲ್-ಹಿಟ್​ಮ್ಯಾನ್ ಸೇರ್ಪಡೆಯಾಗಿದ್ದಾರೆ. ಈ ಹಿಂದಿನ ಎಲ್ಲಾ ದಾಖಲೆಗಳನ್ನು ಕೇವಲ ತಮ್ಮ 2ನೇ ಪಂದ್ಯದ ಮೂಲಕ ಯಶಸ್ವಿ ಜೈಸ್ವಾಲ್ ಸರಿಗಟ್ಟಿದರು.

8 / 8
Follow us