AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಅಭಿನಂದನೆ ಕೆಕೆಆರ್​​” ಸಾಲು ಸಾಲು ವಿಕೆಟ್​ನಿಂದ ತತ್ತರಿಸಿದ ಎಸ್‌ಆರ್‌ಹೆಚ್​​: ಕೋಲ್ಕತ್ತಾ ವಿನ್​ ಎಂದ ನೆಟ್ಟಿಗರು

ಒಂದಾದರೊಂದರಂತೆ ವಿಕೆಟ್​ಗಳನ್ನು ಕಬಳಿಸಿದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಭವಿಷ್ಯವನ್ನು ನೆಟ್ಟಿಗರು ನುಡಿದಿದ್ದಾರೆ. ಇದಕ್ಕಾಗಿ ಸೋಶಿಯಲ್​ ಮೀಡಿಯಾದಲ್ಲಿ ಟ್ವೀಟ್​ ಮಾಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅಭಿನಂದಿಸಿದ್ದಾರೆ. ಬಳಿಕ ಕೆಲವೇ ಸಮಯದಲ್ಲಿ "ಅಭಿನಂದನೆಗಳು KKR" ಗೂಗಲ್​ನಲ್ಲಿ ಟ್ರೆಂಡ್​ ಸೃಷ್ಟಿ ಮಾಡಿದೆ.

ಅಭಿನಂದನೆ ಕೆಕೆಆರ್​​ ಸಾಲು ಸಾಲು ವಿಕೆಟ್​ನಿಂದ ತತ್ತರಿಸಿದ ಎಸ್‌ಆರ್‌ಹೆಚ್​​: ಕೋಲ್ಕತ್ತಾ ವಿನ್​ ಎಂದ ನೆಟ್ಟಿಗರು
"ಅಭಿನಂದನೆ ಕೆಕೆಆರ್​​" ಸಾಲು ಸಾಲು ವಿಕೆಟ್​ನಿಂದ ತತ್ತರಿಸಿದ ಎಸ್‌ಆರ್‌ಹೆಚ್​​: ಕೋಲ್ಕತ್ತಾ ವಿನ್​ ಎಂದ ನೆಟ್ಟಿಗರು
ಗಂಗಾಧರ​ ಬ. ಸಾಬೋಜಿ
|

Updated on: May 26, 2024 | 9:33 PM

Share

17ನೇ ಆವೃತ್ತಿಯ ಐಪಿಎಲ್ ಫೈನಲ್ ಕದನ ಈಗಾಗಲೇ ಶುರುವಾಗಿದೆ. ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಟ್ರೋಫಿ ಮುಡಿಗೇರಿಸಿಕೊಳ್ಳಲು ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕಾದಾಡುತ್ತಿವೆ. ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್​ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿಯೇ ಮಿಚೆಲ್ ಸ್ಟಾರ್ಕ್, ಅಭಿಷೇಕ್ ಶರ್ಮಾರ ವಿಕೆಟ್​ ಪತನವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ ವ್ಯಕ್ತಪಡಿಸಿದ್ದು, ಕೋಲ್ಕತ್ತಾವನ್ನು ವಿಜೇತರೆಂದು ಘೋಷಿಸಿದ್ದಾರೆ.

ಒಂದಾದರೊಂದರಂತೆ ವಿಕೆಟ್​ಗಳನ್ನು ಕಬಳಿಸಿದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಭವಿಷ್ಯವನ್ನು ನೆಟ್ಟಿಗರು ನುಡಿದಿದ್ದಾರೆ. ಇದಕ್ಕಾಗಿ ಸೋಶಿಯಲ್​ ಮೀಡಿಯಾದಲ್ಲಿ ಟ್ವೀಟ್​ ಮಾಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅಭಿನಂದಿಸಿದ್ದಾರೆ. ಬಳಿಕ ಕೆಲವೇ ಸಮಯದಲ್ಲಿ “ಅಭಿನಂದನೆಗಳು KKR” ಗೂಗಲ್​ನಲ್ಲಿ ಟ್ರೆಂಡ್​ ಸೃಷ್ಟಿ ಮಾಡಿದೆ.

ಹೈದರಾಬಾದ್ ಓಪನರ್ ಟ್ರಾವಿಸ್ ಹೆಡ್ ಅನ್ನು ವೈಭವ್ ಅರೋರಾ ಗೋಲ್ಡನ್ ಡಕ್‌ ಮಾಡಿದರು. ಹೈದರಾಬಾದ್​ ತಂಡವನ್ನು ಸಂಪೂರ್ಣ ಕಟ್ಟಿಹಾಕಲು ಜೊತೆಗೆ ರಾಹುಲ್ ತ್ರಿಪಾಠಿಯನ್ನು ತೆಗೆದುಹಾಕಲು ಸ್ಟಾರ್ಕ್ ಮರಳಿದರು.

ಇದನ್ನೂ ಓದಿ: IPL 2024 Final: RCB, CSK, MI ಇಲ್ಲದ ಮೂರನೇ ಫೈನಲ್

ಪವರ್‌ಪ್ಲೇಯೊಳಗೆ 3 ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಬರ್ತ್‌ಡೇ ಬಾಯ್​ ನಿತೀಶ್ ಕುಮಾರ್ ರೆಡ್ಡಿ ತಮ್ಮ ಬ್ಯಾಟಿಂಗ್​ನೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್​ ತಂಡ ಆಶಿಸಿತ್ತು. ಹರ್ಷಿತ್ ರಾಣಾ ಅವರ ವೇಗದ ಎಸೆತದಿಂದ ನಿತೀಶ್ ಕೂಡ ಔಟ್​ ಆದರು.

ಸನ್‌ರೈಸರ್ಸ್ ಹೈದರಾಬಾದ್ ಈ ಹಿಂದೆ 2016 ರಲ್ಲಿ ಒಮ್ಮೆ ಸ್ಪರ್ಧೆಯನ್ನು ಗೆದ್ದಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ 2012 ಮತ್ತು 2014 ರಲ್ಲಿ ಪಂದ್ಯಾವಳಿಯನ್ನು ಗೆದ್ದು ಎರಡು ಬಾರಿ ಚಾಂಪಿಯನ್ ಆಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು