
ವೆಸ್ಟ್ ಇಂಡೀಸ್ (West Indies) ಕ್ರಿಕೆಟ್ ತಂಡದ ದೈತ್ಯ ಯುನಿವರ್ಸೆಲ್ ಬಾಸ್ ಕ್ರಿಸ್ ಗೇಲ್ (Chris Gayle) ಸ್ಫೊಟಕ ಆಟಕ್ಕೆ ಎದ್ದು ನಿಂತರೆ ಅವರನ್ನು ತಡೆಯುವುದು ಸುಲಭವಲ್ಲ. ಚೆಂಡು ಫೋರ್-ಸಿಕ್ಸರ್ ಎಂದು ಸರಾಗವಾಗಿ ಸಾಗುತ್ತಲೇ ಇರುತ್ತದೆ. ಹೀಗಾಗಿ ವಿಶ್ವ ಕ್ರಿಕೆಟ್ನಲ್ಲಿರುವ ಸ್ಫೋಟಕ ಬ್ಯಾಟ್ಸ್ಮನ್ಗಳಲ್ಲಿ ಗೇಲ್ ಪ್ರಮುಖರೆಂದೇ ಹೇಳಬಹುದು. ಇವರ ಸ್ಫೋಟಕ ಹೊಡೆತ ತಾಳಲಾರದೆ ಅದೆಷ್ಟೊ ಬಾರಿ ಬ್ಯಾಟ್ ಪೀಸ್ ಪೀಸ್ ಆಗ ಘಟನೆಗಳು ನಡೆದಿವೆ. ಈಗ ಅಂತಹದೆ ಘಟನೆ ಮರುಕಳಿಸಿದೆ. ವೆಸ್ಟ್ ಇಂಡೀಸ್ನಲ್ಲಿ ನಡೆದ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (CPL 2021) ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ (st kitts and nevis patriots) ತಂಡದ ಪರ ಆಡಿದ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಸೆಮಿ ಫೈನಲ್ ಪಂದ್ಯದಲ್ಲಿ ಇವರ ರಭಸದ ಬ್ಯಾಟಿಂಗ್ಗೆ ಬ್ಯಾಟೇ ಕಟ್ ಆಯಿತು.
ಮಂಗಳವಾರ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ ನಡುವೆ ನಡೆದ ಸೆಮಿ ಫೈನಲ್ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿತ್ತು. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆಜಾನ್ ವಾರಿಯರ್ಸ್ ತಂಡ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿತು. ತಂಡದ ಪರ ಶಿಮ್ರೋನ್ ಹೆಟ್ಮೇರ್ 20 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸಿದರು.
179 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಕ್ರಿಸ್ ಗೇಲ್ ಹಾಗೂ ಎವಿನ್ ಲೆವಿಸ್ ಮನಬಂದಂತೆ ಬ್ಯಾಟ್ ಬೀಸಿದರು. 7 ಓವರ್ ಆಗುವ ಹೊತ್ತಿಗೆನೇ ತಂಡದ ಮೊತ್ತವನ್ನು 70ರ ಗಡಿ ದಾಟಿಸಿದರು. ಕ್ರಿಸ್ ಗೇಲ್ ಕೇವಲ 27 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಿಡಿಸಿ 42 ರನ್ ಚಚ್ಚಿದರು. ಇದರ ನಡುವೆ ಗೇಲ್ ಸಿಕ್ಸರ್ ಸಿಡಿಸಲು ಮುಂದಾದಾಗ ಬ್ಯಾಟ್ ಕಟ್ ಆದ ಘಟನೆಯೂ ನಡೆಯಿತು.
ಇನಿಂಗ್ಸ್‌ನ ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ಈ ವಿಚಿತ್ರ ಘಟನೆ ನಡೆಯಿತು. ಗಯಾನಾ ತಂಡದ ವೇಗದ ಬೌಲರ್ ಒಡೆನ್ ಸ್ಮಿತ್ ಅವರ ಎಸೆತದಲ್ಲಿ ಗೇಲ್ ಆಫ್ ಸೈಡ್ ವಿಭಾಗದಲ್ಲಿ ದೊಡ್ಡ ಹೊಡೆತವನ್ನಾಡಲು ಬಲವಾಗಿ ಬ್ಯಾಟ್ ಬೀಸಿದ್ದರು. ಆದರೆ, ಚೆಂಡು ತಾಗುತ್ತಿದ್ದಂತೆಯೇ ಬ್ಯಾಟ್ ಎರಡು ತುಂಡಾಗಿ ಬಿದ್ದಿತ್ತು. ಆ ಎಸೆತ ಬರೋಬ್ಬರಿ 155 ಕಿ.ಮೀ ವೇಗದಲ್ಲಿ ನುಗ್ಗಿಬಂದಿತ್ತು ಎಂಬುದು ವಿಶೇಷ.
Batting malFUNction for @henrygayle #GAWvSKNP #CPL21 #CricketPlayedLouder #BiggestPartyInSport pic.twitter.com/kuPgIs7DuY
— CPL T20 (@CPL) September 14, 2021
ಈ ಪಂದ್ಯದಲ್ಲಿ ಸ್ಯಾಂಟ್ ಕಿಟ್ಸ್ ತಂಡ 17.5 ಓವರ್ನಲ್ಲೇ 181 ರನ್ ಚಚ್ಚಿ ಗೆಲುವು ಸಾಧಿಸಿತು. ಲೆವಿಸ್ 39 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್ ಬಾರಿಸಿ 77 ರನ್ ಗಳಿಸಿ ಅಜೇಯರಾಗಿ ಉಳಿದರು. ಫೈನಲ್ನಲ್ಲೂ ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ ತಂಡ 3 ವಿಕೆಟ್ಗಳಿಂದ ಗೆದ್ದು ಚೊಚ್ಚಲ ಬಾರಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿತು.
Ashes: ಪ್ರತಿಷ್ಠಿತ ಆ್ಯಷಸ್ ಸರಣಿ ಆಡದಿರಲು ಇಂಗ್ಲೆಂಡ್ ಆಟಗಾರರ ಚಿಂತನೆ: ಯಾಕೆ ಗೊತ್ತಾ?
(CPL 2021 Chris Gayle bat broke into two pieces in Caribbean Premier League Viral Video)