Virat Kohli: ಕೊಹ್ಲಿ ಫಾರ್ಮ್‌ಗೆ ಬಂದರೆ ಶತಕ, ದ್ವಿಶತಕವಲ್ಲ ತ್ರಿಶತಕ ಬಾರಿಸುತ್ತಾನೆ: ಇದು ಕ್ರಿಕೆಟ್ ದಿಗ್ಗಜನ ಮಾತು
Kapil Dev: ವಿರಾಟ್ ಕೊಹ್ಲಿ ಒಮ್ಮೆ ಫಾರ್ಮ್‌ಗೆ ಬಂದು ರನ್‌ಗಳಿಸಲು ಆರಂಭಿಸಿದರೆ ಆತ ದೊಡ್ಡ ದೊಡ್ಡ ಶತಕಗಳನ್ನು ಬಾರಿಸುತ್ತಾರೆ ಎಂದು ಕಪಿಲ್ ದೇವ್ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ (Virat Kohli) ಬ್ಯಾಟ್ನಿಂದ ಈ ವರ್ಷವೂ ಶತಕ ಬರುವಂತೆ ಕಾಣುತ್ತಿಲ್ಲ. ಅತ್ಯುತ್ತಮ ಅವಕಾಶವಿದ್ದ ಇಂಗ್ಲೆಂಡ್ (India vs England) ವಿರುದ್ಧದ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ಅರ್ಧಶತಕ ಬಾರಿಸಿದರೂ ಸೆಂಚುರಿ ತಲುಪುವಲ್ಲಿ ಎಡವಿದರು. ಮುಂದಿನ ದಿನಗಳಲ್ಲಿ ಸಾಲು ಸಾಲು ಟಿ-20 ಪಂದ್ಯಗಳೇ (T20 Cricket) ಇರುವ ಕಾರಣ ಕೊಹ್ಲಿ ಮೂರಂಕಿ ತಲುಪುವುದು ಕಷ್ಟ ಎಂದೇ ಹೇಳಬಹುದು. ಕಿಂಗ್ ಕೊಹ್ಲಿ ಕೊನೆಯದಾಗಿ ನವೆಂಬರ್ 22, 2019 ರಲ್ಲಿ ಸೆಂಚುರಿ ಬಾರಿಸಿದ್ದರು. ಅದಾದ ಮೇಲೆ ಒಂದೇ ಒಂದು ಶತಕ ರನ್ ಮೆಶಿನ್ ಬ್ಯಾಟ್ನಿಂದ ಸಿಡಿದಿಲ್ಲ. ಇದೇ ವಿಚಾರಕ್ಕೆ ಅವರು ಅದೆಷ್ಟೊ ಬಾರಿ ಟ್ರೋಲ್ ಕೂಡ ಆಗಿದ್ದಾರೆ. ಕೊಹ್ಲಿಯ ಒಂದು ಶತಕಕ್ಕೆ (Kohli century) ಕೋಟ್ಯಾಂತರ ಅಭಿಮಾನಿಗಳು ಕಾದುಕುಳಿತಿದ್ದಾರೆ. ಸದ್ಯ ಇದೇ ವಿಚಾರವಾಗಿ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ (Kapil Dev) ಕೂಡ ಮಾತನಾಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿಗೆ ಈ ನಾಯಕತ್ವದ ಹೊಣೆ ಭಾರವಾಗುತ್ತಿದ್ದು ಈ ಕಾರಣದಿಂದಾಗಿ ಅವರ ಬ್ಯಾಟಿಂಗ್ ಪ್ರದರ್ಶನದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಅವರು ಸುಳ್ಳು ಎಂದು ಹೇಳಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿಗೆ ನಾಯಕತ್ವದ ಜವಾಬ್ಧಾರಿ ಹೊರೆಯಾಗುತ್ತಿದ್ದಲ್ಲಿ ನಾಯಕನಾದ ಬಳಿಕ ಕೊಹ್ಲಿ ಇಷ್ಟು ರನ್‌ಗಳನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಕಪಿಲ್ ದೇವ್ ಮಾತು.
“ವಿರಾಟ್ ಕೊಹ್ಲಿ ಒಮ್ಮೆ ಫಾರ್ಮ್‌ಗೆ ಬಂದು ರನ್‌ಗಳಿಸಲು ಆರಂಭಿಸಿದರೆ ಆತ ದೊಡ್ಡ ದೊಡ್ಡ ಶತಕಗಳನ್ನು ಬಾರಿಸುತ್ತಾರೆ. ವೃತ್ತಿ ಜೀವನದಲ್ಲಿ ನೀವು ಸಾಕಷ್ಟು ಏರಿಳಿತಗಳನ್ನು ಕಾಣುತ್ತೀರಿ. ಆದರೆ ಅದು ಎಷ್ಟು ಕಾಲ. 28-32 ವರ್ಷದವರೆಗೆ ನಿಮ್ಮದು ತುಂಬಾ ಅದ್ಭುತವಾದ ಹಾದಿಯಾಗಿತ್ತು. ಈಗ ಆತ ಮತ್ತಷ್ಟು ಅನುಭವಿಯಾಗಿದ್ದಾರೆ. ಈಗ ಕೊಹ್ಲಿ ತಮ್ಮ ಹಳೆಯ ಫಾರ್ಮ್‌ಗೆ ಮರಳಿದರೆ ಕೇವಲ ಶತಕ ದ್ವಿತಕಗಳನ್ನು ಮಾತ್ರವೇ ಸಿಡಿಸುವುದಿಲ್ಲ. ಆತ 300 ರನ್‌ಗಳನ್ನು ಬಾರಿಸುತ್ತಾರೆ” ಎಂದಿದ್ದಾರೆ ಕಪಿಲ್ ದೇವ್.
“ಈ ಹಿಂದೆ ವಿರಾಟ್ ಕೊಹ್ಲಿ ರನ್‌ಗಳಿಸುತ್ತಿದ್ದಾಗ ಯಾರು ಕೂಡ ಅವರ ಬ್ಯಾಟಿಂಗ್‌ಗೆ ನಾಯಕತ್ವ ಅಡ್ಡಿಯಾಗುತ್ತಿದೆ ಎಂದು ಹೇಳಿರಲಿಲ್ಲ. ಆದರೆ, ವೃತ್ತಿ ಜೀವನದಲ್ಲಿ ಅಹಜವಾಗಿರುವ ಸಣ್ಣ ಏರಿಳಿಯಗಳು ಬಂದ ತಕ್ಷಣವೇ ಈ ರೀತಿಯಾಗಿ ನಾಯಕತ್ವ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಆತ ಅಷ್ಟು ದ್ವಿಶತಕಗಳನ್ನು ದಾಖಲಿಸಿದಾಗ ಹಾಗೂ ಶತಕಗಳನ್ನ ದಾಖಲಿಸಿದಾಗ ಈ ಒತ್ತಡಗಳು ಇರಲಿಲ್ಲವೇ? ಅದರರ್ಥ ನಾಯಕತ್ವದ ಬಗ್ಗೆ ಚಿತ್ತಹರಿಸಬೇಕಿಲ್ಲ. ಅದರ ಬದಲಾಗಿ ಆತನ ಸಾಮರ್ತ್ಯವನ್ನು ಗಮನಿಸಿ” ಎಂದು ಕಪಿಲ್ ದೇವ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.
ಇನ್ನೂ ಬುಧವಾರ ಪ್ರಕಟಗೊಂಡ ಟಿ-20 ಕ್ರಿಕೆಟ್ನ ರ್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸಕಾರಾತ್ಮಕ ಸಾಧನೆ ಮಾಡಿದ್ದಾರೆ. ಕೊಹ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ತಂಡದ ಆಟಗಾರ ಡೇವಿಡ್ ಕಾನ್ವೆಯನ್ನು ಕೊಹ್ಲಿ ಹಿಂದಿಕ್ಕುವ ಮೂಲಕ ಈ ಸಾಧನೆ ಮಾಡಿದ್ದಾರೆ. ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟಾಪ್ ಹತ್ತರಲ್ಲಿರುವ ಮತ್ತೋರ್ವ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಈ ಪಟ್ಟಿಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿಯೇ ಮುಂದಿವರೆದಿದ್ದಾರೆ.
Dwayne Bravo: ನೂರಲ್ಲ ಇನ್ನೂರಲ್ಲ ಬರೋಬ್ಬರಿ 500 ಟಿ-20 ಪಂದ್ಯವನ್ನಾಡಿ ದಾಖಲೆ ಬರೆದ ಡ್ವೇನ್ ಬ್ರಾವೋ
CPL 2021 Final: ಕೊನೆಯ ಬಾಲ್ನಲ್ಲಿ ರೋಚಕ ಗೆಲುವು: ಚೊಚ್ಚಲ ಬಾರಿಗೆ ಸಿಪಿಎಲ್ ಕಿರೀಟ ತೊಟ್ಟ ಸ್ಯಾಂಟ್ ಕಿಟ್ಸ್ ತಂಡ
(Virat Kohli will not only score a century or double ton he will give you 300 said Kapil dev)
