ವೆಸ್ಟ್ ಇಂಡೀಸ್ನಲ್ಲಿ (West Indies) ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ 2021ಕ್ಕೆ (CPL 2021) ತೆರೆಬಿದ್ದಿದೆ. ಇದೇ ಮೊದಲ ಬಾರಿಗೆ ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ ತಂಡ (St Kitts and Nevis Patriots) ಸಿಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡಗಳೂ ತಲಾ 20 ಓವರ್ ಸಂಪೂರ್ಣ ಆಡಿದರು. ಕೊನೆಯ ಎಸೆತದ ವರೆಗೂ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸೈಂಟ್ ಲೂಕಿಯಾ ಕಿಂಗ್ಸ್ (Saint Lucia Kings) ವಿರುದ್ಧ ಡ್ವೇನ್ ಬ್ರಾವೋ (Dwayne Bravo) ನಾಯಕತ್ವದ ಸ್ಯಾಂಟ್ ಕಿಟ್ಸ್ ತಂಡ 3 ವಿಕೆಟ್ಗಳ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಮೊದಲು ಬ್ಯಾಟ್ ಮಾಡಿದ ಸೈಂಟ್ ಲೂಕಿಯಾ ಕಿಂಗ್ಸ್ ತಂಡ ಆರಂಭದಲ್ಲೇ ಆಂಡ್ರೆ ಫ್ಲೆಚಚರ್ (111) ಹಾಗೂ ಮಾರ್ಕ್ ಡೆಯೆಲ್ (1) ವಿಕೆಟ್ ಕಳೆದುಕೊಂಡಿತು. ಆದರೆ, ಕಾರ್ನ್ವೆಲ್ ಹಾಗೂ ರಾಸ್ಟನ್ ಚೇಸ್ ತಂಡಕ್ಕೆ ಆಧಾರವಾದರು. ಈ ಜೋಡಿ 44 ರನ್ಗಳ ಕಾಣಿಕೆ ನೀಡಿತು.
🇰🇳 @sknpatriots are the CPL 2021 champions! Congratulations 🏆 #CPL21 #SLKvSKNP #CPL21 #CricketPlayedLouder pic.twitter.com/2qZO9LDtRC
— CPL T20 (@CPL) September 15, 2021
ಕಾರ್ನ್ವೆಲ್ 32 ಎಸೆತಗಳಲ್ಲಿ 43 ಹಾಗೂ ಚೇಸ್ 40 ಎಸೆತಗಳಲ್ಲಿ 43 ರನ್ ಬಾರಿಸಿ ಔಟ್ ಆದರು. ಅಂತಿಮ ಹಂತದಲ್ಲಿ ಕೀಮೊ ಪೌಲ್ ಕೇವಲ 21 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿ 39 ರನ್ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಪರಿಣಾಮ ಸೈಂಟ್ ಲೂಕಿಯಾ ಕಿಂಗ್ಸ್ ತಂಡ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು. ಎದುರಾಳಿ ಪರ ಫಹದ್ ಅಹ್ಮದ್ ಮತ್ತು ನಸೀಮ್ ಶಾ ತಲಾ 2 ವಿಕೆಟ್ ಪಡೆದರು.
ಇತ್ತ 160 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಸ್ಯಾಂಟ್ ಕಿಟ್ಟ್ ತಂಡ ಆರಂಭದಲ್ಲೇ ಇಬ್ಬರು ಸ್ಫೋಟಕ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಿತು. ಕ್ರಿಸ್ ಗೇಲ್ ಸೊನ್ನೆ ಸುತ್ತಿದರೆ, ಎವಿನ್ ಲೆವಿಸ್ 6 ರನ್ಗೆ ಬ್ಯಾಟ್ ಕಳೆಗಿಟ್ಟರು. ಆದರೆ, ಈ ಸಂದರ್ಭ ಜೋಶ್ವಾ ಡಿ ಸಿಲ್ವಾ ಮತ್ತು ಶೆರ್ಫನ್ ರುಥರ್ಫಾರ್ಡ್ ಅಬ್ಬರದ ಬ್ಯಾಟಿಂಗ್ ನಡೆಸಿ 45 ರನ್ಗಳ ಜೊತೆಯಾಟ ಆಡಿದರು. ಜೋಶ್ವಾ 32 ಎಸೆತಗಳಲ್ಲಿ 37 ರನ್ ಬಾರಿಸಿದರೆ ರುಥರ್ಫಾರ್ಡ್ 22 ಎಸೆತಗಳಲ್ಲಿ 25 ರನ್ ಗಳಿಸಿದರು.
WHAT A FINISH! Dominic Drakes seals the win with a @fun88eng Magic moment. pic.twitter.com/tvyn72hbmP
— CPL T20 (@CPL) September 15, 2021
ನಾಯಕ ಡಿಜೆ ಬ್ರಾವೋ 8 ರನ್ಗೆ ಸುಸ್ತಾದರು. ಇಲ್ಲಿಂದ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಒಂದುಕಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಇತ್ತ ಡಿಮಿಕ್ ಡ್ರಾಕ್ಸ್ (24 ಎಸೆತ, 48* ರನ್ ತಲಾ 3 ಬೌಂಡರಿ, ಸಿಕ್ಸರ್) ಗೆಲುವಿಗೆ ಹೋರಾಟ ನಡೆಸುತ್ತಿದ್ದರು. ಪರಿಣಾಮ ಕೊನೆಯ ಓವರ್ನಲ್ಲಿ ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ ತಂಡಕ್ಕೆ ಗೆಲ್ಲಲು 9 ರನ್ಗಳ ಅವಶ್ಯತೆಯಿತ್ತು. ಕೊನೆಯ ಎಸೆತದಲ್ಲಿ 1 ರನ್ಗಳು ಬೇಕಾಗಿತ್ತು. ಸಿಂಗ್ ತೆಗೆಯುವಲ್ಲಿ ಯಶಸ್ವಿಯಾದ ಸ್ಯಾಂಟ್ ಕಿಟ್ಸ್ ತಂಡ ರೋಚಕ ಜಯ ಸಾಧಿಸಿತು.
ಒಲಿಂಪಿಕ್ಸ್ ಕೋಚ್ ವಿವಾದ; ಏಷ್ಯನ್ ಚಾಂಪಿಯನ್‌ಶಿಪ್ ತಂಡದಿಂದ ಮನಿಕಾ ಬಾತ್ರಾಗೆ ಗೇಟ್ಪಾಸ್!
ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ಯಾರು? ಸುಳಿವು ನೀಡಿದ ಸೌರವ್ ಗಂಗೂಲಿ
(CPL 2021 Final SLK vs SKNP St Kitts and Nevis Patriots are CPL champions for the first time)